ಮಡಿಕೇರಿ: ವಯನಾಡು ಜಲಪ್ರಳಯಕ್ಕೆ (Wayanad Landslide) ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಲಕ ಬಲಿಯಾಗಿದ್ದಾನೆ.
ಗುಹ್ಯ ಗ್ರಾಮದ ರೋಹಿತ್(9) ಮೃತ ಬಾಲಕ. ಪಳ್ಳಕ್ಕರೆ ಗೇಟ್ ಸಮೀಪದ ಖಾಸಗಿ ತೋಟದ ಲೈನ್ ಮನೆಯಲ್ಲಿ ರವಿ ಹಾಗೂ ಕವಿತಾ ದಂಪತಿ ತನ್ನ ಮೂವರು ಗಂಡು ಮಕ್ಕಳೊಂದಿಗೆ ವಾಸವಾಗಿದ್ದರು. ಇದನ್ನೂ ಓದಿ: Wayanad Landslide| ಆರು ಕೈ, ಮೂರು ತಲೆ, ಎಂಟು ಕಾಲು, ಐದು ತಲೆ ಇರದ ದೇಹ!
ಒಂದು ತಿಂಗಳ ಹಿಂದೆ ಕವಿತಾ ತನ್ನ ಕಿರಿಯ ಮಗ ರೋಹಿತ್ ಜೊತೆ ವಯನಾಡುವಿನ ಮೆಪ್ಪಾಡಿಯಲ್ಲಿರುವ ಅಕ್ಕನ ಮನೆಗೆ ತೆರಳಿದ್ದರು. ನಂತರ ರೋಹಿತ್‌ನನ್ನು ಅಕ್ಕನ ಮನೆಯಲ್ಲೇ ಬಿಟ್ಟು ಕ್ಯಾಲಿಕಟ್‌ನಲ್ಲಿರುವ ಮನೆಯೊಂದರ ಕೆಲಸಕ್ಕೆ ಕವಿತಾ ಹೋಗಿದ್ದರು. ಇದನ್ನೂ ಓದಿ: Wayanad Landslide | ದಯವಿಟ್ಟು ಅಳಿಯನ ಮೃತ ದೇಹ ಹುಡುಕಿ, ಕೊನೆ ಬಾರಿ ನೋಡ್ತಿವಿ!
ವಯನಾಡು ಜಲ ಪ್ರಳಯದಲ್ಲಿ ರೋಹಿತ್ ಈಗ ಜೀವ ಕಳೆದುಕೊಂಡಿದ್ದಾನೆ. ತಂದೆ ರವಿ ಮೆಪ್ಪಾಡಿಗೆ ತೆರಳಿದ್ದಾರೆ. ಮಗ ನಾಪತ್ತೆಯಾಗಿರುವ ಬಗ್ಗೆ ರವಿ ಅವರು ಸಮೀಪದ ನಿವಾಸಿಗಳಿಗೆ ಮಾಹಿತಿ ನೀಡಿ ಹೋಗಿದ್ದಾರೆ ಎಂದು ಸ್ಥಳೀಯರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.