ಅಹಮ್ಮದಾಬಾದ್: ಮಧ್ಯಪ್ರದೇಶದ ರಟ್ಲಾಮ್ನಲ್ಲಿ 9 ತಿಂಗಳ ಪುಟ್ಟ ಕಂದಮ್ಮವೊಂದು ಆಕಸ್ಮಿಕವಾಗಿ ಆಟಿಕೆಯ ಸಣ್ಣ ಎಲ್ಇಡಿ ಬಲ್ಬ್ (LED Bulb) ನುಂಗಿರುವ ಆಘಾತಕಾರಿ ಘಟನೆ ನಡೆದಿದೆ.
ಮಗು ಬಲ್ಬ್ ನುಂಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪೋಷಕರು ಮಗುವನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ ಸಂಭ್ರಮಾಚರಣೆ ಮಾಡಿದವರ ಮೇಲೆ ಕಾಶ್ಮೀರಿ ವಿದ್ಯಾರ್ಥಿಗಳಿಂದ ಹಲ್ಲೆ
Advertisement
Advertisement
ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗು ಆಟಿಕೆ ಮೊಬೈಲ್ ಫೋನ್ನೊಂದಿಗೆ (Mobile phone) ಆಟವಾಡುತ್ತಿತ್ತು. ಈ ಮೊಬೈಲ್ ಫೋನ್ನಲ್ಲಿರುವ ಆಂಟೆನಾದಲ್ಲಿ ಎಲ್ಇಡಿ ಬಲ್ಬ್ ಇತ್ತು. ಆ ಬಲ್ಬ್ ಅನ್ನು ಕಂದಮ್ಮ ಬಾಯಿಗೆ ಹಾಕಿಕೊಂಡು ಆಟವಾಡುತ್ತಾ ನುಂಗಿಬಿಟ್ಟಿದೆ. ಬಲ್ಬ್ ನುಂಗಿದ ತಕ್ಷಣವೇ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.
Advertisement
Advertisement
ಸಿವಿಲ್ ಆಸ್ಪತ್ರೆಯ (Civil Hospital) ಚಿಕಿತ್ಸಾ ಮೇಲ್ವೀಚಾರಕ ಡಾ. ರಾಕೇಶ್ ಜೋಶಿ ಈ ಸಂಬಂಧ ಪ್ರತಿಕ್ರಿಯಿಸಿ, ಉಸಿರಾಟದ ಸಮಸ್ಯೆ ಕಣಿಸಿಕೊಂಡಿದ್ದರಿಂದ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಮಗುವಿನ ಎಕ್ಸ್ ರೇ ತೆಗೆದು ನೋಡಿದಾಗ ಮಗು ಬಲ್ಬ್ ನುಂಗಿರುವುದು ಬೆಳಕಿಗೆ ಬಂದಿದೆ. ಬ್ರಾಂಕೋಸ್ಕೋಪ್ ಬಳಸಿ ವಸ್ತುವನ್ನು ಹೊರತೆಗೆಯಲು ಪ್ರಯತ್ನಿಸಿದರೂ ತೆಗೆಯಲು ಸಾಧ್ಯವಾಗಿಲ್ಲ ಎಂದರು.
ಎರಡನೇ ಪ್ರಯತ್ನದಲ್ಲಿ ಬಲ್ಬ್ ಹೊರತೆಗೆಯುವುದರಲ್ಲಿ ಯಶಸ್ವಿಯಾದೆವು. ಮಕ್ಕಳಿಗೆ ಆಟಿಕೆಗಳನ್ನು ಕೊಡುವಾಗ ಸ್ವಲ್ಪ ಎಚ್ಚರವಹಿಸಬೇಕು ಎಂಬುದನ್ನು ಈ ಮೂಲಕ ಎಲ್ಲಾ ತಾಯಂದಿರು ಎಚ್ಚರವಹಿಸಿಕೊಳ್ಳಬೇಕು ಎಂದು ಜೋಶಿ ತಿಳಿಸಿದರು.
Web Stories