ಕಳೆದ ಬಾರಿ ಗೆಳೆಯ ಸಂಚಾರಿ ವಿಜಯ್ ನಿಧನದಿಂದಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದ ನಟ ನೀನಾಸಂ ಸತೀಶ್, ಈ ಬಾರಿಯೂ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದರೂ, ಅಭಿಮಾನಿಗಳಿಗಂತೂ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿಯೂ ಅವರು ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೆ, ಅವರ ನಟನೆಯ ನಾನಾ ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿವೆ.
ಸದ್ಯ ಸತೀಶ್ ನೀನಾಸಂ ‘ಪೆಟ್ರೊಮ್ಯಾಕ್ಸ್’, ‘ಮ್ಯಾಟ್ನಿ’, ‘ಡಿಯರ್ ವಿಕ್ರಮ್’, ‘ದಸರಾ’, ‘ಅಶೋಕ ಬ್ಲೇಡ್ ‘ ಇಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೂ ಸಿನಿಮಾಗಳ ಪೋಸ್ಟರ್ ಇಂದು ರಿಲೀಸ್ ಆಗಿ ಅಭಿಮಾನಿಗಳಿಗೆ ಭರ್ಜರಿ ಸಂಭ್ರಮವನ್ನೇ ತಂದಿವೆ. ಒಂದಕ್ಕಿಂತ ಒಂದು ಪೋಸ್ಟರ್ ಕುತೂಹಲ ಮೂಡಿಸಿವೆ. ಇದನ್ನೂ ಓದಿ:ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದವರ ಲಿಸ್ಟ್ ನಲ್ಲಿ ಕರಣ್ ಜೋಹರ್
ಈಗಾಗಲೇ ಪೆಟ್ರೊಮ್ಯಾಕ್ಸ್, ಡಿಯರ್ ವಿಕ್ರಮ್ ಸಿನಿಮಾ ರಿಲೀಸ್ ಗೆ ರೆಡಿ ಇವೆ. ಪೆಟ್ರೊಮ್ಯಾಕ್ಸ್ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗುತ್ತಿದ್ದರೆ, ಡಿಯರ್ ವಿಕ್ರಮ್ ನೇರವಾಗಿ ಓಟಿಟಿಯಲ್ಲಿ ದೊಡ್ಡ ಮಟ್ಟದಲ್ಲಿ ಸ್ಟ್ರೀಮಿಂಗ್ ಆಗಲಿದೆ. ದಸರಾ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಮ್ಯಾಟ್ನಿ ಕೂಡ ಭರದಿಂದ ಚಿತ್ರೀಕರಣ ನಡೆದಿದೆ. ಈಗಷ್ಟೇ ಅಶೋಕ ಬ್ಲೇಡ್ ಚಿತ್ರೀಕರಣ ಶುರುವಾಗಿದೆ. ಅಲ್ಲದೇ, ತಮಿಳಿನಲ್ಲೂ ಸತೀಶ್ ನಟಿಸಿದ್ದು, ಈ ಸಿನಿಮಾ ಕೂಡ ರಿಲೀಸ್ ಗೆ ರೆಡಿಯಿದೆ.
ರಿಲೀಸ್ ಗೆ ರೆಡಿ ಇರುವ ಮತ್ತು ಶೂಟಿಂಗ್ ನಲ್ಲಿ ತೊಡಗಿರುವ ಅಷ್ಟೂ ಸಿನಿಮಾಗಳ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ನಿರ್ದೇಶಕರು ಕೂಡ ಈಗಾಗಲೇ ಹೊಸ ಬಗೆಯ ಸಿನಿಮಾ ಕೊಟ್ಟವರು. ಹಾಗಾಗಿ ಅಷ್ಟೂ ಸಿನಿಮಾಗಳು ನಿರೀಕ್ಷೆ ಮೂಡಿಸಿವೆ. ಸತೀಶ್ ಕೂಡ ಆಯಾ ಪಾತ್ರಗಳಿಗೆ ರೆಡಿಯಾಗಿಯೇ ಕ್ಯಾಮೆರಾ ಮುಂದೆ ನಿಂತಿರುವುದರಿಂದ ಈ ವರ್ಷ ಅವರನ್ನು ನಾನಾ ಪಾತ್ರಗಳಲ್ಲೂ ನೋಡಬಹುದು.