ಕನ್ನಡ ಚಿತ್ರೋದ್ಯಮದ ಹೆಸರಾಂತ ನಟ ನೀನಾಸಂ ಸತೀಶ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯ ತಾವು ನಟಿಸುತ್ತಿರುವ ಅಶೋಕ ಬ್ಲೇಡ್ (Ashoka Blade) ಕುರಿತಾಗಿ ಮಹತ್ವದ ಸುದ್ದಿಯೊಂದನ್ನು ನೀಡಿದ್ದು, ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರಲಿದೆ ಎಂದಿದ್ದಾರೆ. ಪಾರ್ಟ್ 1 (Part 1) ಮತ್ತು ಪಾರ್ಟ್ 2 (Part 2) ಒಟ್ಟಿಗೆ ಶೂಟ್ ಮಾಡಿ, ನಂತರದ ದಿನಗಳಲ್ಲಿ ಒಂದೊಂದೇ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ.
Advertisement
ಈ ಸಿನಿಮಾ ಎರಡು ಕಾಲ ಘಟ್ಟದಲ್ಲಿ ಮೂಡಿ ಬರಲಿದ್ದು, 70ರ ದಶಕದಿಂದ 2022ರವರೆಗಿನ ಕಥೆಯು ಸಿನಿಮಾದಲ್ಲಿದೆಯಂತೆ. ಈ ಎರಡು ಘಟ್ಟಗಳನ್ನು ವಿಭಾಗಗಳಾಗಿ ವಿಂಗಡಿಸಿ ಸಿನಿಮಾ ಮಾಡುತ್ತಿರುವುದಾಗಿ ಸತೀಶ್ (Ninasam Satish) ಮಾತನಾಡಿದ್ದಾರೆ. ಎರಡು ಭಾಗಗಳಲ್ಲಿ ಸಿನಿಮಾ ಮಾಡಲು ಕಥೆಯೇ ಪ್ರೇರೇಪಿಸಿತು. ಹಾಗಾಗಿ ಇಂಥದ್ದೊಂದು ತೀರ್ಮಾನಕ್ಕೆ ಬರಲಾಗಿದೆ ಎನ್ನುವುದು ಸತೀಶ್ ಮಾತು.
Advertisement
Advertisement
ಈಗಾಗಲೇ ಬರೋಬ್ಬರಿ 100 ದಿನಗಳ ಕಾಲ ಅಶೋಕ ಬ್ಲೇಡ್ ಸಿನಿಮಾದ ಶೂಟಿಂಗ್ ನಡೆದಿದೆ. ಇನ್ನೂ ಮೂವತ್ತು ದಿನಗಳ ಕಾಲ ಚಿತ್ರೀಕರಣವಾದರೆ, ಸಿನಿಮಾ ಕಂಪ್ಲೀಟ್. ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದರಿಂದ ಆದಷ್ಟು ನೈಜತೆಗೆ ಹತ್ತಿರವಾಗುವಂತೆ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಸತೀಶ್ ಹೊಸ ಬಗೆಯ ಪಾತ್ರವನ್ನು ಮಾಡಿದ್ದಾರೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ತಯಾರಾಗಲಿದೆ. ಇದನ್ನೂ ಓದಿ:ನೀನು ಆಂಟಿಯಾಗಿ 1 ವರ್ಷದ ಅನುಭವವಿದೆ- ಬರ್ತ್‌ಡೇಯಂದು ಪತ್ನಿ ಕಾಲೆಳೆದ ನಟ ಸುದರ್ಶನ್
Advertisement
ಸತೀಶ್ ನಾಯಕನಾದರೆ, ಕಾವ್ಯ ಶೆಟ್ಟಿ (Kavya Shetty) ನಾಯಕಿಯಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾವ್ಯ ಪೊಲೀಸ್ ಇನ್ಸೆಪೆಕ್ಟರ್ ಪಾತ್ರವನ್ನು ಮಾಡಿದ್ದಾರೆ. ವಿನೋದ್ ಈ ಸಿನಿಮಾದ ನಿರ್ದೇಶಕರಾದರೆ, ನರಹರಿ ನಿರ್ಮಾಪಕರು.
ಮೈಸೂರು ಸೀಮೆಯಲ್ಲಿ 70ರ ದಶಕದಲ್ಲಿ ನಡೆದ ಒಂದು ಘಟನೆ ಬಗ್ಗೆ ಕೇಳಿದ್ದೆ. ಅದು ಎಲ್ಲೂ ದಾಖಲಾಗಿಲ್ಲ. ಎಲ್ಲೂ ಅದರ ಬಗ್ಗೆ ಉಲ್ಲೇಖವಿಲ್ಲ. ಕೊನೆಗೆ ಆ ಕಥೆಯ ವಿವರಗಳನ್ನು ಹುಡುಕಿಕೊಂಡು ಹೋದಾಗ ಹಲವು ಮಹತ್ವದ ವಿಷಯಗಳು ಗೊತ್ತಾಯಿತು. ಇದು ಕನ್ನಡ ನೆಲದ ವೀರರ ಕಥೆ. ಯುದ್ಧ ಎಂದರೆ ಯುದ್ಧಭೂಮಿ ಅಥವಾ ಸಾಮ್ರಾಜ್ಯ ವಿಸ್ತರಣೆಯ ಕಥೆಯಲ್ಲ. ಎರಡು ಸಮುದಾಯಗಳ ಕುರಿತ ಕಥೆ ಇದೆ. ವ್ಯಾಪಾರಿಗಳು ಮತ್ತು ಕಾರ್ಮಿಕರ ನಡುವಿನ ಕಥೆ ಇದೆ. ಇದರಲ್ಲಿ ಭಾಗವಹಿಸಿದ ಕೆಲವರನ್ನು ಹುಡುಕಿ ಮಾತಾಡಿಸಿದೆ. ಒಂದಿಷ್ಟು ಮಾಹಿತಿ ಸಿಕ್ಕಿತು. ಅದನ್ನು ಬೆಳೆಸಿ ಚಿತ್ರಕಥೆ ಮಾಡಿದ್ದೇನೆ. ಈ ಕಥೆ ಎಲ್ಲರಿಗೂ ಇಷ್ಟವಾಗಿದೆ ಎಂದು ಚಿತ್ರದ ಕಥೆಯ ಬಗ್ಗೆ ಟಿ.ಕೆ.ದಯಾನಂದ್ ಹೇಳುವ ಮಾತು.
Web Stories