– ಉಗ್ರರಿಗೆ ತಕ್ಕ ಶಿಕ್ಷೆಯಾಗಲಿ; ʻಪಬ್ಲಿಕ್ ಟಿವಿʼ ಮೂಲಕ ಮೋದಿಗೆ ಮನವಿ
– ದುರ್ಗಮ ಹಾದಿಯಲ್ಲಿ ಕಂಡ ಕರಾಳ ಸತ್ಯಗಳು
ಮೂರು ದಿನಗಳ ಹಿಂದೆಯಷ್ಟೇ ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ಉಗ್ರರ ಅಟ್ಟಹಾಸ ಮೆರೆದಿದ್ದರು, ಓರ್ವ ವಿದೇಶಿ ಪ್ರಜೆ ಸೇರಿದಂತೆ 26 ಮಂದಿಯನ್ನ ಹತ್ಯೆಗೈಯ್ದಿದ್ದರು. ಈ ದಾಳಿ ನಡೆದ ಸ್ಥಳದಿಂದ ಕನ್ನಡದ ಏಕೈಕ ಚಾನಲ್ ನಿಮ್ಮ ʻಪಬ್ಲಿಕ್ ಟಿವಿʼ (Public TV) ಪ್ರತ್ಯಕ್ಷ ವರದಿ ಮಾಡ್ತಿದೆ. ಭಾರತದ ಮಿನಿ ಸ್ವಿಟ್ಜರ್ಲೆಂಡ್ ಬೈಸರನ್ ತಲುಪುದು ಸುಲಭದ ಕೆಲಸ ಅಲ್ಲವೇ ಅಲ್ಲ. ಕಾರಿಲ್ಲ, ಕುದುರೆ ಇಲ್ಲ, ಕಾಲ್ನಡಿಗೆಯಲ್ಲಿ ಕಲ್ಲು ಮುಳ್ಳಿನ ಹಾದಿ.. ಗುಡ್ಡಗಾಡು ದಾಟಿ ಬೈಸರನ್ ತಲುಪಿದ ʻಪಬ್ಲಿಕ್ ಟಿವಿʼ ಸ್ಥಳದಿಂದಲೇ ಪ್ರತ್ಯಕ್ಷ ವರದಿ ಮಾಡುತ್ತಿದೆ.
ದುರ್ಗಮ ಹಾದಿ ಕ್ರಮಿಸಿ ಬೈಸರನ್ ತಲುಪಿದ ʻಪಬ್ಲಿಕ್ ಟಿವಿʼಗೆ ಮೊದಲು ಕಂಡಿದ್ದು ದಾಳಿಯ ಕುರುಹುಗಳು.. ಕೆಸರಿನಲ್ಲಿ ಹೂತಿ ಹೋದ ಬಟ್ಟೆಗಳು, ಶೂಗಳು.. ರಕ್ತದ ಕಲೆಗಳು.. ಉಗ್ರರ ದಾಳಿಯ ಕರಾಳತೆಯನ್ನು ಬಿಚ್ಚಿಡುತ್ತಿವೆ. ಜೀವ ಉಳಿಸಿಕೊಳ್ಳುವ ಭರದಲ್ಲಿ ಜನರು ಓಡಿದ ಪರಿಯನ್ನು ಈ ಗುರುತುಗಳು ಸಾರಿ ಸಾರಿ ಹೇಳ್ತಿವೆ. ಇದನ್ನೂ ಓದಿ: ಭಾರತ Vs ಪಾಕಿಸ್ತಾನ – ಭೂಸೇನೆ, ನೌಕಾಸೇನೆ, ವಾಯು ಸೇನೆಯ ಸಾಮರ್ಥ್ಯಗಳ ಬಲಾಬಲ ಎಷ್ಟಿದೆ?
ಸದ್ಯ ಉಗ್ರರ ದಾಳಿ ನಡೆದ ಬೈಸರನ್ ವ್ಯಾಲಿಯನ್ನು ಭದ್ರತಾ ಪಡೆ ಸುತ್ತುವರೆದಿದ್ದು.. ಘಟನಾ ಸ್ಥಳದಲ್ಲಿ ಭದ್ರತಾ ಪಡೆ ಗಸ್ತು ತಿರುಗುತ್ತಿದೆ. ದುರ್ಗಮ ಸ್ಥಳ ತಲುಪಿದ ʻಪಬ್ಲಿಕ್ ಟಿವಿʼ ಪ್ರತ್ಯಕ್ಷ ಚಿತ್ರಣವನ್ನು ಕಟ್ಟಿಕೊಡ್ತಿದೆ. ಇದನ್ನೂ ಓದಿ: ನಾವು ಭಯೋತ್ಪಾದನೆಯನ್ನು ಬೆಂಬಲಿಸಿದ್ದೇವೆ – ಒಪ್ಪಿಕೊಂಡ ಪಾಕಿಸ್ತಾನ
ಉಗ್ರರ ಭೀಭತ್ಸ ದಾಳಿ ದಿನ ಆಗಿದ್ದೇನು?
ಭಯೋತ್ಪಾದಕ ದಾಳಿ ನಡೆದ ದಿನ ಸ್ಥಳದಲ್ಲಿದ್ದ ಪಹಲ್ಗಾಮ್ ಸ್ಥಳೀಯರು ಘಟನಾ ದಿನ ಏನೇನಾಯ್ತು ಎಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಘಟನೆ ನಡೆದ ದಿನ ನಾನು ಇಲ್ಲೇ ಇದ್ದೆ.. ಘಟನೆ ನೋಡಿ ಬಹಳ ದುಃಖ ಆಯ್ತು.. ಕಾಶ್ಮೀರಿ ಜನರನ್ನು ಒಟ್ಟುಗೂಡಿಸಿ ಅವರ ಮೇಲೆ ಗುಂಡಿನ ಮಳೆಗೈಯ್ದಿದ್ದರು ನಮಗೆ ಬೇಸರ ಇರಲಿ.. ಪ್ರವಾಸಿಗರ ಮೇಲೆ ದಾಳಿಯಾಗಿರುವುದು ದುಃಖ ತಂದಿದೆ ಎನ್ನುತ್ತಾರೆ ಪಹಲ್ಗಾಮ್ ನಿವಾಸಿ ಮೊಹ್ಮದ್ ಜಬ್ಬಾರ್. ಇದನ್ನೂ ಓದಿ: Pahalgam Terror Attack – ಅಗತ್ಯ ಬಿದ್ರೆ ಭಾರತದೊಂದಿಗೆ ನಿಲ್ಲುತ್ತೇವೆ: ಇಸ್ರೇಲ್
ʻಪಬ್ಲಿಕ್ ಟಿವಿʼ ಮೂಲಕ ಮೋದಿಗೆ ಮನವಿ
ಇನ್ನೂ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಸ್ಥಳೀಯ ಟ್ಯಾಕ್ಸಿ ಚಾಲಕ ಗುಜರ್ ಅಹ್ಮದ್ ಭಯೋತ್ಪಾದಕರು ಮನಷ್ಯತ್ವವನ್ನು ಕೊಂದು ಹಾಕಿದ್ದಾರೆ. ಇದು ನಮ್ಮ ಕುಟುಂಬವನ್ನು ಕೊಂದಂತೆ.. ಪ್ರವಾಸಿಗರು ನಮ್ಮ ಅತಿಥಿಗಳು, ನಮ್ಮ ದೇವರು.. ನಾವು ಅವರಿಂದ ದುಡಿದು ಕುಟುಂಬ ನಡೆಸುತ್ತೇವೆ.. ಇಂತಹ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಬೇಕು ಅಂತಾ ಮೋದಿ ಅವರಿಗೆ ಮನವಿ ಮಾಡುತ್ತೇನೆ. ಅಂದು ಬಂದ ಜನರು ಸಾಕಷ್ಟು ಎಂಜಾಯ್ ಮಾಡುತ್ತಿದ್ದರು. ಕೆಲವರು ಬಂದು ಫೈರಿಂಗ್ ಆರಂಭಿಸಿದರು. ನಾವು ಭಾರತೀಯರು. ನಮ್ಮ ಹೃದಯದಲ್ಲಿ ಭಾರತೀಯತೆ ಇದೆ. ಇದನ್ನು ಮಾಡಿದವರನ್ನು ಸುಮ್ನೆ ಬಿಡಬಾರದು ಅಂತ ಆಗ್ರಹಿಸಿದರು. ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ ? – ರಾಹುಲ್‌ಗೆ ಸುಪ್ರೀಂ ತರಾಟೆ
ಬಳಿ ಸ್ಥಳೀಯ ಕುದುರೆ ಸವಾರ ಮಾತನಾಡುತ್ತಾ, ನಾನು ಕೆಲವು ಪ್ರವಾಸಿಗರನ್ನು ಬಿಟ್ಟು ಕೂತಿದೆ, ಕೆಲವರು ಮೇಲೆ ಏನೋ ಸಮಸ್ಯೆ ಆಗಿದೆ ಎಂದರು.. ನಾನು ಕೆಲವರಿಗೆ ಮಾತನಾಡಿದೆ ಆಮೇಲೆ ಮೇಲೆ ಹೋಗುವಾಗ ಕೆಲವರು ಎದುರಿಗೆ ಓಡಿ ಬಂದರು… ನೀರು ಕುಡಿಸಿ ಎನ್ನುತ್ತಿದ್ದರು ಅವರಿಗಾಗಿ ನೀರಿನ ವ್ಯವಸ್ಥೆ ಮಾಡಲು ನೀರಿನ ಪೈಪ್ ಒಡೆದೆವು ನಾವೇ ನಮ್ಮ ಕೈಯಾರೆ ನೀರು ಕುಡಿಸಿದೆವು. ರಕ್ತಪಾತ ಮಾಡುವವರು ದುಷ್ಟರು.. ಪಾಕಿಸ್ತಾನದ್ದೇ ಪಾತ್ರ ಇದ್ದರೂ ಕಠಿಣ ಉತ್ತರ ಕೊಡಬೇಕು. ಇಲ್ಲ ನಮ್ಮನ್ನು ಗಡಿಗೆ ಕರೆದೊಯ್ಯಿರಿ ನಾವು ಉತ್ತರ ಕೊಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.