ಬುಲೆಟ್ ರೈಲು ಬಗ್ಗೆ ನೀವು ಕೇಳಿರಬಹುದು. ಸೆಮಿ-ಹೈ-ಸ್ಪೀಡ್ ರೈಲಿನಲ್ಲಿ ನೀವು ಸಂಚರಿಸಿರಬಹುದು. ಆದರೆ ಮೀಟರ್ ಗೇಜ್ ರೈಲಿನಲ್ಲಿ ಸಂಚರಿಸಬೇಕಿದ್ದಲ್ಲಿ ನೀವು ಊಟಿಗೆ ಬರಬೇಕು. ಮೀಟರ್ ಗೇಜ್ ರೈಲಿನಲ್ಲಿ ಪ್ರಯಾಣಿಸಿದರೆ ಮಾತ್ರ ಊಟಿ ಪ್ರವಾಸ ಕಂಪ್ಲೀಟ್ ಆಗಿದೆ ಅಂತ ಹೇಳಬಹುದು.
ಈಗ ನಾವೆಲ್ಲ ಸಂಚರಿಸುತ್ತಿರುವುದು ಬ್ರಾಡ್ ಗೇಜ್ ರೈಲಿನಲ್ಲಿ. ಈ ರೈಲಿನ ಹಳಿಯ ಅಗಲ1.676 ಮೀಟರ್(5.4 ಅಡಿ). ಆದರೆ ಮೀಟರ್ ಗೇಜ್ ಹಳಿಯ ಅಗಲ ಕೇವಲ 1 ಮೀಟರ್(3.2 ಅಡಿ) ಮಾತ್ರ. ಊಟಿಯಿಂದ ಮೆಟ್ಟುಪಾಳ್ಯಂವರೆಗೆ ಈ ಮೀಟರ್ ಗೇಜ್ ರೈಲು ಸಂಚರಿಸುತ್ತದೆ. ಕೂನೂರಿನಲ್ಲಿರುವ ಪ್ರವಾಸಿ ತಾಣಕ್ಕೆ ತೆರಳಲು ವಾಹನದ ಮೂಲಕ ಹೋಗಬಹುದಾದರೂ ಈ ರೈಲಿನಲ್ಲಿ ಸಂಚರಿಸಿದರೆ ಸಿಗುವ ಮಜಾವೇ ಬೇರೆ.
Advertisement
Advertisement
ಊಟಿ ಪ್ರವಾಸ ಯಶಸ್ವಿಯಾಗಬೇಕಾದರೆ ಮೊದಲೇ ನೀವು ಬಹಳ ಮುಖ್ಯವಾದ ಕೆಲಸ ಮಾಡಬೇಕು. ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಹೋಗಿ 15-20 ದಿನದ ಮೊದಲೇ ಟಿಕೆಟ್ ಬುಕ್ಕಿಂಗ್ ಮಾಡಬೇಕಾಗುತ್ತದೆ. ಊಟಿ-ಕೂನೂರು-ಊಟಿಗೆ ಒಬ್ಬರಿಗೆ 325 ರೂ. ಟಿಕೆಟ್ ದರವಿದೆ.
Advertisement
ಊಟಿಯಿಂದ ಕುನೂರಿಗೆ 21 ಕಿ.ಮೀ ದೂರವಿದೆ. ಒಟ್ಟು 1:15 ನಿಮಿಷ ಪ್ರಯಾಣ. ರೈಲಿನಲ್ಲಿ ಎದುರು ಬದುರು ಕುಳಿತುಕೊಳ್ಳಬೇಕು. ಒಂದು ಸೀಟ್‌ನ ಸಾಲಿನಲ್ಲಿ 4 ಜನ ಮಾತ್ರ ಕುಳಿತುಕೊಳ್ಳಬಹುದು. ಸಣ್ಣದಾಗಿರುವ 3 ಸುರಂಗದಲ್ಲಿ ಸಾಗುವ ಈ ರೈಲಿನಲ್ಲಿ ಟೀ ಎಸ್ಟೇಟ್‌ಗಳನ್ನು ನೋಡಬಹುದು. ನೇರವಾಗಿ ಬೆಳೆದಿರುವ ನೀಲಗಿರಿ ಮರಗಳಿರುವ ಕಾಡನ್ನು ವೀಕ್ಷಿಸುವುದು ಕಣ್ಣಿಗೆ ಹಬ್ಬ. ಪ್ರಕೃತಿ ಸೌಂದರ್ಯವನ್ನು ಅನುಭವಿಸುವವರ ನೆನಪಿನಲ್ಲಿ ಉಳಿಯುವ ರೈಲು ಪ್ರಯಾಣ ಇದು ಆಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.
Advertisement
ಕೂನೂರು ರೈಲ್ವೇ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಬಾಡಿಗೆ ಕಾರು ಚಾಲಕರು ಬರುತ್ತಾರೆ. ಇಂಟರ್‌ನೆಟ್‌ನಲ್ಲಿ ಚೆಕ್ ಮಾಡಿದರೆ ಕೂನೂರು ಸಮೀಪವೇ ಬಹಳಷ್ಟು ಪ್ರವಾಸಿ ತಾಣಗಳಿವೆ. ಇವುಗಳನ್ನು ನೋಡಲು ಒಂದು ದಿನ ಪೂರ್ತಿ ಬೇಕಾದಿತು. ಹೆಚ್ಚಿನ ಜನರು ʼಡಾಲ್ಫಿನ್ ನೋಸ್ʼ ನೋಡಲು ತೆರಳುತ್ತಾರೆ. ಎತ್ತರದ ಘಾಟಿ ರಸ್ತೆಗಳಲ್ಲಿ ನಿಂತು ನೋಡಿದಾಗ ಹೇಗೆ ಪರಿಸರ ಕಾಣುತ್ತದೆ ಆ ರೀತಿ ವ್ಯೂ ನಿಮಗೆ ಇಲ್ಲೂ ಕಾಣುತ್ತದೆ. ಈ ಜಾಗ ವೀಕ್ಷಣೆ ಮಾಡಿದ ಟೀ ಫ್ಯಾಕ್ಟರಿಗೆ ಹೋಗಬಹುದು.
ದೇಶದ ಮೊದಲ ಸೇನಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್‌ರಿಂದಾಗಿ ಕೂನೂರು ಸುದ್ದಿಯಲ್ಲಿತ್ತು. ರಾವತ್ ಅವರಿದ್ದ ಹೆಲಿಕಾಪ್ಟರ್ ಪತನಗೊಂಡ ಜಾಗ ಈ ಕೂನೂರು ತಾಲೂಕಿನಲ್ಲೇ ಬರುತ್ತದೆ. ರಾವತ್ ಅವರಿಂದ ಹೆಲಿಕಾಪ್ಟರ್ ಪತನಕ್ಕೆ ತಾಂತ್ರಿಕ ದೋಷ ಕಾರಣವಲ್ಲ. ಹವಾಮಾನ ವೈಪರೀತ್ಯದಿಂದ ದುರಂತ ಸಂಭವಿಸಿದೆ ಎಂದು ಸೇನೆಯ ತನಿಖಾ ತಂಡ ವರದಿ ನೀಡಿತ್ತು. ಈ ವರದಿ ನಿಜವೂ ಹೌದು. ಇಲ್ಲಿನ ಹವಾಮಾನ ಹೇಗೆ ದಿಢೀರ್ ಬದಲಾಗುತ್ತದೆ ಅಂದರೆ ಒಮ್ಮೆ ಬೆಟ್ಟ ದೂರದಿಂದ ಕಾಣುತ್ತಿರುತ್ತದೆ. ಕೆಲ ನಿಮಿಷದಲ್ಲಿ ಆ ಬೆಟ್ಟ ನಿಮ್ಮ ಕಣ್ಣಿನಿಂದ ಮರೆ ಆಗಿರುತ್ತದೆ. ಅಷ್ಟೊಂದು ಮಂಜು ಆವರಿಸಿರುತ್ತದೆ. ಇದನ್ನೂ ಓದಿ: ರಾವತ್ ಹೆಲಿಕಾಪ್ಟರ್ ಪತನಕ್ಕೆ ಮೋಡ ಕಾರಣ: ಭಾರತೀಯ ವಾಯುಪಡೆ
ಮುಗಿಸುವ ಮುನ್ನ ಈ ಮೀಟರ್ ಗೇಜ್ ರೈಲನ್ನು ಆರಂಭಿಸಿದವರು ಬ್ರಿಟಿಷರು. 1854ರಿಂದ ಕಾಮಗಾರಿ ಆರಂಭವಾದರೂ ಪೂರ್ಣಗೊಂಡದ್ದು 1899ಕ್ಕೆ. 2005ರಲ್ಲಿ ಯುನೆಸ್ಕೋ ನೀಲಗಿರಿ ರೈಲ್ವೇಯನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಿದೆ. ಮೀಟರ್ ಗೇಜ್ ರೈಲು ಊಟಿಯಲ್ಲಿ ಮಾತ್ರ ಇಲ್ಲ. ಭಾರತದ ಹಲವು ಕಡೆ ಸೇವೆಯಲ್ಲಿದೆ.
– ಅಶ್ವಥ್ ಸಂಪಾಜೆ