ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನೀಲ್‍ಗಾಯ್(ನೀಲಿ ಜಿಂಕೆ) ಒಂದನ್ನು ಜೀವಂತವಾಗಿ ಸಮಾಧಿ ಮಾಡಲಾಗಿದೆ. ಜೆಸಿಬಿ ಮೂಲಕ ಪ್ರಾಣಿಯನ್ನು ಖೆಡ್ಡಕ್ಕೆ ಬೀಳಿಸಿ, ಮಣ್ಣು ಮಾಡಲಾಗಿದೆ.
ಮಾನವಿಯತೆ ಮರೆತು ನೀಲಿ ಜಿಂಕೆಯನ್ನು ಜೀವಂತವಾಗಿ ಸಮಾಧಿ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈಶಾಲಿ ಜಿಲ್ಲೆಯಲ್ಲಿ ನೀಲಿ ಜಿಂಕೆಗಳ ಹಾವಳಿ ಹೆಚ್ಚಿದ್ದು, ಇದರಿಂದ ರೈತರು ಬೇಸತ್ತು ಹೋಗಿದ್ದರು. ಆಹಾರ ಅರಸಿ ಜಮೀನುಗಳಿಗೆ ನುಗ್ಗುವ ನೀಲಿ ಜಿಂಕೆಗಳು ಬೆಳೆಗಳನ್ನು ಹಾಳು ಮಾಡುತ್ತಿದ್ದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.
Advertisement
Advertisement
ಈ ಬಗ್ಗೆ ರೈತರು ಅರಣ್ಯ ಇಲಾಖೆಗೆ ತಿಳಿಸಿ ನೀಲಿ ಜಿಂಕೆಗಳ ಕಾಟದಿಂದ ಪಾರು ಮಾಡಿ ಎಂದು ಮನವಿ ಮಾಡಿದ್ದರು. ಹೀಗಾಗಿ ಇವನ್ನು ಕೊಲ್ಲುವಂತೆ ಅರಣ್ಯ ಇಲಾಖೆಗೆ ಆದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುಮಾರು 300ಕ್ಕೂ ಅಧಿಕ ನೀಲ್ಗಾಯ್‍ಗಳನ್ನು ಜಿಲ್ಲೆಯಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನೂ ಕೂಡ ಅರಣ್ಯ ಇಲಾಖೆಯೇ ನೇಮಿಸಿದೆ.
Advertisement
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಮೂಕ ಪ್ರಾಣಿಯನ್ನು ಹೀಗೆ ಅಮಾನುಷವಾಗಿ ಹತ್ಯೆ ಮಾಡುವುದು, ಜೀವಂತ ಸಮಾಧಿ ಮಾಡುವುದು ತಪ್ಪು. ಮನುಷ್ಯರನ್ನು ಹೀಗೆ ಮಾಡಿದರೆ ಸುಮ್ಮನ್ನಿರುತ್ತೀರಾ? ಮೂಕ ಪ್ರಾಣಿಗಳ ಮೇಲೆ ದರ್ಪ ಮೆರೆಯುವುದು ತಪ್ಪು ಎಂದು ಪ್ರಾಣಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
https://twitter.com/JayaseelanTD/status/1169777775621754880