ಬೆಂಗಳೂರು: ಪೆನ್‌ಡ್ರೈವ್ ಪ್ರಕರಣದಲ್ಲಿ ದೇವೇಗೌಡರ ಕುಟುಂಬವನ್ನ (Devegowdaʼs Family) ಟಾರ್ಗೆಟ್ ಮಾಡಿದ್ದಾರೆ. ಇದನ್ನ ನಾವು ಹೇಳೋದಲ್ಲ. ಯಾವುದೇ ಹಳ್ಳಿಗೆ ಹೋದರೂ ಜನ ಇದರ ಬಗ್ಗೆ ಮಾತಾಡ್ತಿದ್ದಾರೆ ಅಂತಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಪೆನ್ ಡ್ರೈವ್ ಕೇಸ್ ನಲ್ಲಿ (Pendrive Case) ದೇವೇಗೌಡ ಕುಟುಂಬ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ದನಿಗೂಡಿಸಿದ ಅವರು, ಜೆಪಿ ನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದನ್ನೂ ಓದಿ: ಮಮತಾಗೆ ನಿಮ್ಮ ಬೆಲೆ ಎಷ್ಟು ಎಂದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ 24 ಗಂಟೆ ಪ್ರಚಾರದಿಂದ ನಿಷೇಧ
Advertisement
Advertisement
ದೇವೇಗೌಡರ ಫ್ಯಾಮಿಲಿ ಟಾರ್ಗೆಟ್ ಮಾಡಿದ್ದಾರೆ ಅನ್ನೋದು ನಾವು ಹೇಳೋದಲ್ಲ. ಯಾವುದೇ ಹಳ್ಳಿಗೆ ಹೋದರೂ ಜನ ಇದರ ಬಗ್ಗೆ ಮಾತಾಡ್ತಿದ್ದಾರೆ. ಸರ್ಕಾರದವರು ಟಾರ್ಗೆಟ್ ರಾಜಕಾರಣ ಮಾಡ್ತಿದ್ದಾರೆ. ದೇವೇಗೌಡರ ಕುಟುಂಬ ಇರಬಹುದು ಅಥವಾ ರೇವಣ್ಣ ಅವರನ್ನ ಸಾಫ್ಟ್ ಟಾರ್ಗೆಟ್ ಮಾಡಿಕೊಂಡು ಜೈಲಿಗೆ ಕಳಿಸಬೇಕು ಅನ್ನೋ ದುರುದ್ದೇಶದಿಂದ ರೇವಣ್ಣ ಅವರನ್ನ ಕಳಿಸಿರೋದು. ಇದೆಲ್ಲವನ್ನು ಜನ ಗಮನಿಸುತ್ತಿದ್ದಾರೆ. ಬಹಳ ದಿನ ಇವೆಲ್ಲ ನಡೆಯೋದಿಲ್ಲ ಎಂದು ಕಿಡಿ ಕಾರಿದರು.
Advertisement
ಇದೇ ವೇಳೆ ಕುಮಾರಸ್ವಾಮಿ (HD Kumaraswamy) ಕುಟುಂಬದವರ ಫೋನ್ ಕದ್ದಾಲಿಕೆ ನಾವು ಮಾಡ್ತಿಲ್ಲ, ಕುಮಾರಸ್ವಾಮಿ ವಿಷಯ ದಿಕ್ಕುತಪ್ಪಿಸಲು ಆರೋಪ ಮಾಡ್ತಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: General Elections 2024: ಕಣದಲ್ಲಿರೋ 1,600 ಕ್ಕೂ ಹೆಚ್ಚು ಅಭ್ಯರ್ಥಿಗಳಿಗಿದೆ ಕ್ರಿಮಿನಲ್ ಹಿನ್ನೆಲೆ- ವರದಿ
Advertisement
ಕುಮಾರಸ್ವಾಮಿ ಅವರು ಈಗಾಗಲೇ ಫೋನ್ ಟ್ಯಾಪ್ (Phone Tap) ವಿಷಯ ಪ್ರಸ್ತಾಪ ಮಾಡಿದ್ದಾರೆ. ಅವರಿಗೆ ಯಾವುದೋ ಒಂದು ಮೂಲದ ಮಾಹಿತಿ ಸಿಕ್ಕಿರಬಹುದು. ಹೀಗಾಗಿ ಅವರು ಫೋನ್ ಟ್ಯಾಪ್ ಬಗ್ಗೆ ಮಾತಾಡಿದ್ದಾರೆ. ಈ ಪ್ರಕರಣದಲ್ಲಿ ಮೊದಲ ದಿನದಿಂದಲೂ SIT ರಚನೆ ಆದಾಗಿನಿಂದ ಪಾರದರ್ಶಕವಾಗಿ ತನಿಖೆ ನಡೆಯುತ್ತಿಲ್ಲ. ಇದು ಇಡೀ ರಾಜ್ಯದಲ್ಲಿ ಪ್ರಶ್ನೆ ಎದ್ದಿದೆ. ಕುಮಾರಸ್ವಾಮಿ ಅವರಿಗೆ ಮಾಹಿತಿ ಬಂದಿರಬಹುದು. ಅವರು ಸುಮ್ಮನೆ ಮಾತಾಡೋದಿಲ್ಲ. ಮಾಹಿತಿ ಇದ್ದೇ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಳ್ಳೊದು ಬಿಟ್ಟು ನ್ಯಾಯಯುತವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.