ಬೆಂಗಳೂರು: ಮಂಡ್ಯ ಕುರುಕ್ಷೇತ್ರ ಅಖಾಡದಲ್ಲಿ ತೊಡೆ ತಟ್ಟಿ ನಿಂತಿರುವ ನಿಖಿಲ್ ಕುಮಾರಸ್ವಾಮಿಯನ್ನು ಮಾಜಿ ಪ್ರಧಾನಿ ದೇವೇಗೌಡರು ಕಣಕ್ಕಿಳಿಸಿದ್ದಾರೆ. ಆದರೆ ಅದಕ್ಕೂ ಮೊದಲೂ ಜ್ಯೋತಿಷಿಗಳ ಮಾತು ಕೇಳಿ ನಿಖಿಲ್ ರಾಜಕೀಯ ಎಂಟ್ರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತದೆ.
ನಿಖಿಲ್ ಅಸಲಿಗೆ ರಾಜಕೀಯಕ್ಕೆ ಎಂಟ್ರಿಯಾಗುವ ಟೈಂ ಇದಲ್ಲ ಎನ್ನುವುದು ಗೌಡರ ಕುಟುಂಬದ ಆಪ್ತ ಜ್ಯೋತಿಷಿ ಸೋಮಸುಂದರ ದೀಕ್ಷಿತ್ ಲೆಕ್ಕಚಾರ. ಆದರೆ ನಿಖಿಲ್‍ಗೆ ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಪೂಜಾಫಲದ ಕೃಪಾಕಟಾಕ್ಷ ಸಿಗಲಿದೆ. ಇದೇ ನಿಖಿಲ್ ಅವರನ್ನು ಕಾಪಾಡುತ್ತದೆ ಎಂದು ನಿಖಿಲ್ ಎಂಟ್ರಿಯನ್ನು ವಿಶ್ಲೇಷಿಸಿದ್ದಾರೆ.
Advertisement
Advertisement
ಹಿರಿಯರ ಭಕ್ತಿ ಸಂಕಲ್ಪ ನಿಖಿಲ್ ಕೈಹಿಡಿಯಲಿದ್ದು, ಇದೇ ಕಾರಣಕ್ಕೆ ಕುಮಾರಸ್ವಾಮಿ ಶೃಂಗೇರಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ಗವಿಗಂಗಾಧರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ ಎಂದು ಸೋಮಸುಂದರ ದೀಕ್ಷಿತ್ ಹೇಳಿದ್ದಾರೆ.
Advertisement
ದೇವೇಗೌಡರು ಜಾತಕ, ದೇವರು, ಭವಿಷ್ಯ ಎಂದು ನಂಬುತ್ತಾರೆ. ಈ ಸಲಹೆಯನ್ನು ಜ್ಯೋತಿಷಿಯೊಬ್ಬರಿಂದಲೇ ಪಡೆದುಕೊಂಡು ಮೊಮ್ಮಗನನ್ನು ಅಖಾಡಕ್ಕಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv