ಮಂಡ್ಯ: ಮೈತ್ರಿ ಸರ್ಕಾರ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮೇಲುಕೋಟೆಯಲ್ಲಿ ಇಂದು ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆ ಅವರಿಗೆ ರೈತರು ಕುಡಿಯಲು ಎಳನೀರು ಕೊಡುತ್ತಿದ್ದು, ಪ್ರೀತಿಯಿಂದ ಸ್ವಾಗತಿಸಿದ್ದಾರೆ.
ಜಿ.ಮಲ್ಲಿಗೆರೆ ಗ್ರಾಮದಲ್ಲಿ ನಿಖಿಲ್ ಪ್ರಚಾರ ಮಾಡುವಾಗಿ ಅಭಿಮಾನಿಯೊಬ್ಬರು ನಿಖಿಲ್‍ಗೆ ಅಪ್ಪುಗೆ ಕೊಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳು ಮಂಡ್ಯ ಶೈಲಿಯಲ್ಲಿ ಒಂದೇ ಬಾರಿಗೆ ಎಳನೀರು ಕುಡಿಯಲೇ ಬೇಕು ಸವಾಲು ಎಂದು ಹಾಕಿದ್ದರು. ಆಗ ನಿಖಿಲ್ ಅಭಿಮಾನಿಯ ಆಸೆಯಂತೆ ಮಂಡ್ಯದ ಶೈಲಿಯಲ್ಲಿ ಒಂದೇ ಬಾರಿಗೆ ಎಳನೀರು ಕುಡಿದಿದ್ದಾರೆ.
Advertisement
Advertisement
ಒಮ್ಮೆ ಎಳನೀರು ಕುಡಿದಿದ್ದರೂ ಮತ್ತೆ ಎಳನೀರು ಕುಡಿಯುವಂತೆ ಅಭಿಮಾನಿ ಒತ್ತಾಯಿಸಿದ್ದಾರೆ. ಕೊನೆಗೆ ಅಭಿಮಾನಿಯ ಒತ್ತಾಯಕ್ಕೆ ಮಣಿದು ಒಂದೇ ಬಾರಿಗೆ ಕೆಳಗಿಳಿಸದೇ ನಿಖಿಲ್ ಪೂರ್ತಿ ಎಳನೀರು ಕುಡಿದಿದ್ದಾರೆ. ಬಳಿಕ ಅಜ್ಜಿಯ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.
Advertisement
ಗೊರವಾಲೆ ಗ್ರಾಮದಲ್ಲಿ ಹೆಣ್ಣುಮಕ್ಕಳು ನಿಖಿಲ್‍ಗೆ ಬೆಲ್ಲದಾರತಿ ಬೆಳಗಿದ್ದು, ಯುವತಿ ಬಲಗೈಗೆ ರಾಖಿ ಕಟ್ಟಿದ್ದಾಳೆ. ಗ್ರಾಮದಲ್ಲಿ ಬೈಕಿನಲ್ಲಿ ಕುಳಿತು ನಿಖಿಲ್ ಪ್ರಚಾರ ಮಾಡಿದ್ದಾರೆ. ಆಗ ನಿಖಿಲ್ ಅವರಿಗೆ ರಸ್ತೆ ಮತ್ತು ಚರಂಡಿ ಸಮಸ್ಯೆ ಇದೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ. ಜನರ ಕಷ್ಟ ಆಲಿಸಿದ ನಿಖಿಲ್ ಟೆಂಡರ್ ಆಗಿದೆ. ಸಮಸ್ಯೆ ಬಗೆ ಹರಿಸೋದಾಗಿ ಹೇಳಿದರು.
Advertisement
ಬಳಿಕ ವೃದ್ಧರೊಬ್ಬರು ನಿಖಿಲ್‍ಗೆ ಹಾರ, ಪೇಟ ಹಾಕಿ ಸನ್ಮಾನ ಮಾಡಲು ಬಂದಿದ್ದಾರೆ. ಆಗ ನೀವು ಹಿರಿಯರು ನಿಮಗೇ ನಾನು ಸನ್ಮಾನ ಮಾಡಬೇಕು ಎಂದು ಸನ್ಮಾನ ಮಾಡಲು ಬಂದ ವೃದ್ಧನಿಗೆ ಪೇಟ ತೊಡಿಸಿ ಹಾರ ಹಾಕಿ ಸನ್ಮಾನ ಮಾಡಿದ್ದಾರೆ. ಇನ್ನು ಹೊಳಲು ಗ್ರಾಮದಲ್ಲಿ ಪ್ರಚಾರದ ನಡುವೆ ನಿಖಿಲ್ ಟೀ ಅಂಗಡಿಯಲ್ಲಿ ಟೀ ಕುಡಿದರು. ಈ ವೇಳೆ ನಿಖಿಲ್‍ಗೆ ಅಭಿಮಾನಿಯೊಬ್ಬ ಮುತ್ತುಕೊಟ್ಟಿದ್ದಾರೆ.