ಮಡಿಕೇರಿ: ರಾಜ್ಯದಲ್ಲಿ ಮೂರು ಕ್ಷೇತ್ರದ ಉಪಾಚುನಾವಣೆಯಾದ ಹಿನ್ನೆಲೆ ಮೂರು ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಅದರಲ್ಲೂ ಹೈವೋಲ್ಟೇಜ್ ಕ್ಷೇತ್ರ ಚನ್ನಪಟ್ಟಣದಲ್ಲಿ (Channapatna) ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ನಿಶ್ಚಿತ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ (Madikeri) ತಾಲೂಕಿನ ಮಕ್ಕಂದೂರು ಗ್ರಾಮದಲ್ಲಿ ‘ಪಬ್ಲಿಕ್ ಟಿವಿ’ಯೊಂದಿಗೆ ಮಾತಾನಾಡಿದ ಅವರು, ಚನ್ನಪಟ್ಟಣದಲ್ಲಿ ಚುನಾವಣೆ ಸಂದರ್ಭ ಗ್ರೌಂಡ್ ರಿಪೋರ್ಟ್ ನೋಡಿದಾಗ ಅಲ್ಲಿನ ಜನರು ಮೈತ್ರಿ ಪಕ್ಷದ ಅಭ್ಯರ್ಥಿ ಪರವಾಗಿ ಇದ್ದರು. ಹಾಗಾಗಿ ನಮ್ಮಗೆ ವಿಶ್ವಾಸ ಇದೆ, ಎನ್‌ಡಿಎ ಪರವಾಗಿ ಗೆಲುವು ಆಗುತ್ತದೆ ಎಂಬ ಭರವಸೆಯನ್ನು ಕ್ಷೇತ್ರದ ಜನರು ತುಂಬಿದ್ದಾರೆ ಎಂದರು. ಇದನ್ನೂ ಓದಿ: ಅಪ್ರಾಪ್ತೆ ಪತ್ನಿಯ ಜೊತೆಗಿನ ಸಮ್ಮತಿಯ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮ – ಬಾಂಬೆ ಹೈಕೋರ್ಟ್
Advertisement
Advertisement
ಇಬ್ಬರಲ್ಲಿ ಯಾರಿಗೆ ಗೆಲುವು ಆದ್ರೂ ಕೂದಲೆಳೆಯ ಅಂತರದಲ್ಲಿ ಆಗಬಹುದು. ಜಮೀರ್ ಅಹ್ಮದ್ (Zameer Ahmed Khan) ಅವರ ಮಾತಿನಿಂದ ಮತಗಳು ವಿಭಜನೆಯಾಗಿದೆ ಎಂಬ ಸಿ.ಪಿ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರಕ್ರಿಯಿಸಿ, ಅವರನ್ನೇ ಇನ್ನಷ್ಟು ನೇರವಾಗಿ ಪ್ರಶ್ನೆ ಮಾಡಬೇಕಾಗುತ್ತದೆ. ನಮ್ಮ ದೃಷ್ಟಿಕೋನದಲ್ಲಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎಲ್ಲಾ ರೀತಿಯ ವಿಜಯವನ್ನು ಸಾಧಿಸುತ್ತಾರೆ. ನಮಗೂ ಅವರು ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು. ಇದನ್ನೂ ಓದಿ: ಜಮೀರ್ ನಿಯತ್ತಾಗಿ ಬಸ್ ಓಡಿಸಿ ಬಂದ ದುಡ್ಡಾ ಅದು? ನಾಲ್ವರಿಂದ ನಾನು ಕೆಟ್ಟೆ: ಹೆಚ್‌ಡಿಕೆ ಕಿಡಿ
Advertisement
Advertisement
ನಾವು ಪ್ರಚಾರಕ್ಕೆ ಹೋಗಿದ ಸಂದರ್ಭದಲ್ಲಿ ಅಲ್ಲಿನ ಗ್ರೌಂಡ್ ರಿಪೋರ್ಟ್‌ನಲ್ಲೇ ಜನರ ನಾಡಿ ಮಿಡಿತ ನೋಡಿದ್ದೇವೆ. ನಾವು ಹಾಗು ರಾಜ್ಯದ ಅನೇಕ ನಾಯಕರು ಅಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ಮತದಾರರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ರೀತಿಯ ಪ್ರತಿಕ್ರಿಯೆ ಮೊದಲೇ ಬಂದಿರುವುದರಿಂದ ಈಗಾಗಲೇ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಗೆಲ್ಲುವಿನ ವಾತಾವರಣ ಸೃಷ್ಟಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಲಕ್ಷ ಲಕ್ಷ ವಂಚನೆ – ಆರೋಪಿ ಅರೆಸ್ಟ್