ಇತರ ಪಕ್ಷಗಳ ಸಂಚಿನ ಫಲವೇ ಎಂಪಿ ಚುನಾವಣೆಯಲ್ಲಿ ಸೋಲು: ನಿಖಿಲ್

Public TV
1 Min Read
MND NIKHIL 3

ಮಂಡ್ಯ: ರೈತ ಸಂಘ, ಬಿಜೆಪಿ, ಕಾಂಗ್ರೆಸ್ ಪಕ್ಷಗಳೆಲ್ಲಾ ಸೇರಿ ಸಂಚು ಮಾಡಿ 2019ರ ಎಂಪಿ ಚುನಾವಣೆಯಲ್ಲಿ ಸೋಲಿಸಿದರು ಎಂದು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

MND NIKHIL 2

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಮಾತನಾಡಿದ ಅವರು, ಕುರುಕ್ಷೇತ್ರ ಸಿನಿಮಾದಲ್ಲಿ ನನಗೆ ಅಭಿಮನ್ಯು ಪಾತ್ರ ಮಾಡಿ ಅಭ್ಯಾಸವಿದೆ. ಹಾಗೆಯೇ ರಾಜಕೀಯದಲ್ಲಿ ನನಗೆ ಒತ್ತಾಯವಾಗಿ ಅಭಿಮನ್ಯು ಪಾತ್ರ ಮಾಡಿಸಿ ಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

HDK 2

ಕುಮಾರಣ್ಣನ ನಾಯಕತ್ವದ ಮೇಲೆ ಪ್ರಶ್ನೆ ತರಲು ನನ್ನ ಎಲ್ಲರೂ ಒಂದುಗೂಡಿ ಸೋಲಿಸಿದರು ಎಂದು ಆರೋಪಿಸಿದರು. 2019ರ ಎಂಪಿ ಚುನಾವಣೆಯ ಸೋಲನ್ನು ಅರಗಿಸಿಕೊಳ್ಳದ ನಿಖಿಲ್ ಕುಮಾರಸ್ವಾಮಿ ಅವರು ಪದೇ ಪದೇ ಸೋಲನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮಗಳ ಮೇಲೆ ಅತ್ಯಾಚಾರ ಮಾಡಿದವನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ: ಸೋಮಶೇಖರ್

MND NIKHIL 1

ಎಂಎಲ್‍ಸಿ ಚುನಾವಣೆಯಲ್ಲಿ ಅಪ್ಪಾಜಿಗೌಡ ಅವರನ್ನು ಗೆಲ್ಲಿಸುವ ಹೊಣೆ ನನ್ನ ಮೇಲೆ ಇದೆ. ಇದಕ್ಕೆ ಎಲ್ಲರೂ ಸಹಕರಿಸಿ ಅಪ್ಪಾಜಿಗೌಡರನ್ನು ಮತ ನೀಡಿ ಗೆಲ್ಲಿಸೋಣ ಎಂದರು. ಜೆಡಿಎಸ್ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಅವರು ಅಪ್ಪಾಜಿಗೌಡ ಅವರನ್ನು ಬೆಂಬಲಿಸಲು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *