ಕರ್ನಾಟಕದ ಅಸಲಿ ಮುಖ್ಯಮಂತ್ರಿ ನೋಡಲು ಸ್ಕ್ಯಾನ್‌ ಮಾಡಿ: ನಿಖಿಲ್‌ ಕುಮಾರಸ್ವಾಮಿ ಸ್ಕ್ಯಾನರ್‌ನಲ್ಲಿರೋ ಫೋಟೊ ಯಾರದ್ದು?

Public TV
1 Min Read
nikhil kumaraswamy post

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನಲ್ಲೇ ಸಿಎಂ ಕುರ್ಚಿ ಕದನ ಕುರಿತು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ವ್ಯಂಗ್ಯವಾಡಿದ್ದಾರೆ. ಕರ್ನಾಟಕದ ಅಸಲಿ ಮುಖ್ಯಮಂತ್ರಿ ನೋಡಲು ಸ್ಕ್ಯಾನ್‌ ಮಾಡಿ ಎಂದು ‘ಕೈ’ ನಾಯಕರಿಗೆ ಟಾಂಗ್‌ ಕೊಟ್ಟಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ. ಪೋಸ್ಟ್‌ನಲ್ಲಿ ಸ್ಕ್ಯಾನರ್‌ ಕೂಡ ಹಂಚಿಕೊಂಡಿದ್ದಾರೆ. ಸ್ಕ್ಯಾನ್‌ ಮಾಡಿದರೆ ರಣದೀಪ್‌ ಸುರ್ಜೇವಾಲಾರ ಫೇಸ್‌ಬುಕ್‌ ಖಾತೆ ತೆರೆದುಕೊಳ್ಳುತ್ತದೆ. ಪರೋಕ್ಷವಾಗಿ ‘ಇದು ಸುರ್ಜೇವಾಲ ಸರ್ಕಾರ’ ಎಂದು ನಿಖಿಲ್‌ ತಿವಿದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಪ್ರಕರಣ – ಇಂದಿನಿಂದ ಎಸ್‌ಐಟಿ ತನಿಖೆ ಆರಂಭ

ಎಕ್ಸ್‌ ಖಾತೆಯಲ್ಲೇನಿದೆ?
ಕರ್ನಾಟಕವು ಕನ್ನಡಿಗ ಸಿಎಂಗೆ ಮತ ಹಾಕಿದೆ. ಆದರೆ, ಹರಿಯಾಣದ ಸೂಪರ್ ಸಿಎಂ ನಮ್ಮನ್ನು ಆಳುತ್ತಿದ್ದಾರೆ!. ಅವರು ಈಗ ಮಂತ್ರಿಗಳೊಂದಿಗೆ ಮಾತ್ರವಲ್ಲ, ಸರ್ಕಾರದ ಅಧಿಕಾರಿಗಳೊಂದಿಗೆ ಸಭೆಗಳನ್ನೂ ನಡೆಸುತ್ತಿದ್ದಾರೆ!!. ಕನ್ನಡಿಗ ಹೆಮ್ಮೆಯ ಸ್ವಯಂಘೋಷಿತ ಚಾಂಪಿಯನ್ ಸಿದ್ದರಾಮಯ್ಯನವರು ರಾಜ್ಯದ ಆಡಳಿತವನ್ನು ಸದ್ದಿಲ್ಲದೆ ಹೊರಗುತ್ತಿಗೆ ನೀಡಿದ್ದಾರೆ. ನಮ್ಮ ಹೆಮ್ಮೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ಸಿಎಂ ಕುರ್ಚಿ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್‌ ಪಾಳಯದಲ್ಲಿ ಗುದ್ದಾಟ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ಸಿಗಬೇಕು ಎಂಬುದು ಅವರ ಆಪ್ತರ ಒತ್ತಾಯವಾಗಿದೆ. ಆದರೆ, ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುತ್ತಾರೆಂದು ಅವರ ಆಪ್ತರು ತಿರುಗೇಟು ನೀಡುತ್ತಿದ್ದಾರೆ. ಈ ಗದ್ದಲ ಹೈಕಮಾಂಡ್‌ ವರೆಗೂ ತಲುಪಿ, ಕೊನೆಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರು ರಾಜ್ಯಕ್ಕೆ ಬಂದು ಪರಿಸ್ಥಿತಿ ಅವಲೋಕಿಸಿದ್ದಾರೆ. ಇದನ್ನೂ ಓದಿ: ಕಾಂಬೋಡಿಯಾ-ಥೈಲ್ಯಾಂಡ್‌ ಘರ್ಷಣೆ – ಗಡಿ ಪ್ರದೇಶಗಳಿಗೆ ತೆರಳದಂತೆ ಭಾರತೀಯ ಪ್ರಜೆಗಳಿಗೆ ಸಲಹೆ

Share This Article