ಬೀದರ್: ಸೆಪ್ಟೆಂಬರ್ ಕ್ರಾಂತಿ ಆಗುತ್ತಾ ಗೊತ್ತಿಲ್ಲ, ಆದರೆ ಕಾಂಗ್ರೆಸ್‌ನಲ್ಲಿ (Congress) ರಾಜಕೀಯ ಬೆಳವಣಿಗೆ ಆಗುತ್ತಿದೆ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅದೇನೋ ಸೆಪ್ಟೆಂಬರ್‌ಗೆ ಕ್ರಾಂತಿ ಆಗುತ್ತೆ, ಕ್ರಾಂತಿಯಾಗುತ್ತದೆ ಎನ್ನುತ್ತಿದ್ದಾರೆ. ಆದರೆ ಆ ಕ್ರಾಂತಿಯಾಗುತ್ತದೋ ಇಲ್ವೋ ಗೊತ್ತಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ರಾಜಕೀಯ ಬೆಳವಣಿಗಳು ಆಗುತ್ತಿವೆ. ಕಾದು ನೋಡೋಣ ಎಂದರು.ಇದನ್ನೂ ಓದಿ: ಕಾರವಾರ| ಕೊಡಸಳ್ಳಿ ವಿದ್ಯುತ್‌ಗಾರದ ಬಳಿ ಗುಡ್ಡ ಕುಸಿತ; ರಸ್ತೆ ಸಂಚಾರ ಬಂದ್
ಸಿದ್ದರಾಮಯ್ಯನವರು (Siddaramaiah) ಐದು ವರ್ಷ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ. ಆದರೆ ಒಂದAತು ಸತ್ಯ ಕಾಂಗ್ರೆಸ್‌ನಲ್ಲಿ ಹಲವು ಗುಂಪುಗಳಿದ್ದು, ಕೆಲವು ಗುಂಪುಗಳು ಸೈಲೆಂಟಾಗಿ ಕೆಲಸ ಮಾಡುತ್ತಿವೆ. ಕೆಲವು ಗುಂಪುಗಳು ನೇರವಾಗಿಯೇ ಗುಂಪುಗಾರಿಕೆ ಮಾಡುತ್ತಿದ್ದು, ಈ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಈ ಸರ್ಕಾರದ ಮೇಲೆ ರಾಜ್ಯದ ಜನರು ವಿಶ್ವಾಸ ಕಳೆದುಕೊಂಡು ಬಹಳ ದಿನವಾಗಿದ್ದು, ಸರ್ಕಾರ ಕಾಲಹರಣ ಮಾಡುತ್ತಿದೆ ಎಂದರು.
ಸರ್ಕಾರದ ಆರ್ಥಿಕ ಸ್ಥಿತಿ ತೆರೆದ ಪುಸ್ತಕದ ರೀತಿಯಾಗಿದೆ. ನಿಮ್ಮ ಪಕ್ಷದ ಶಾಸಕರೇ ಅನುದಾನ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಶಾಸಕರು ಅಸಹಾಯಕತೆಯಿಂದ ಹೇಳಿಕೆ ನೀಡುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಒಂದು ನಯಾಪೈಸೆಯನ್ನು ನೀಡಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಪಂಜಾಬ್ | ನಕಲಿ ದಾಖಲೆ ಸೃಷ್ಟಿಸಿ 2ನೇ ಮಹಾಯುದ್ಧದಲ್ಲಿ ಬಳಸಿದ್ದ ವಾಯುನೆಲೆ ಮಾರಾಟ – 28 ವರ್ಷಗಳ ಬಳಿಕ ಎಫ್‌ಐಆರ್