ಬೆಂಗಳೂರು: ನನ್ನ ತಂದೆ ಆರೋಗ್ಯವಾಗಿದ್ದಾರೆ. ಆರೋಗ್ಯ (Health) ಲೆಕ್ಕಿಸದೇ ಸಂಸತ್‌ನಲ್ಲಿ ಮಾತಾಡಿದ್ದಾರೆ. ರಾಜ್ಯದ ಜನರಿಗೆ ಏನಾದರೂ ಮಾಡಬೇಕು ಅಂತ ಕೆಲಸ ಮಾಡ್ತಿದ್ದಾರೆ. ಕಳೆದ 15 ದಿನಗಳಿಂದ ನಿರಂತರ ಓಡಾಟ ಇತ್ತು. ಕೆಲಸದ ಒತ್ತಡದಿಂದ ಮೂಗಿನಲ್ಲಿ ರಕ್ತಸ್ರಾವ ಆಗಿದೆ ಎಂದು ಕೇಂದ್ರ ಸಚಿವ ಹೆಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil KumaraSwamy)ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಬಿಜೆಪಿ-ಜೆಡಿಎಸ್ ನಾಯಕರ ಸಭೆಯಲ್ಲಿ (BJP JDS Meet) ಮಾತನಾಡುತ್ತಿದ್ದ ವೇಳೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ದಿಢೀರನೆ ಮೂಗಿನಿಂದ ರಕ್ತಸ್ರಾವ ಉಂಟಾಗಿತ್ತು. ಈ ಕುರಿತು ಮಾಧ್ಯಮಗಳೊಂದಿಗೆ ನಿಖಿಲ್ ಮಾತನಾಡಿದ್ದಾರೆ. ಇದನ್ನೂ ಓದಿ: Women’s Asia Cup 2024: ಲಂಕಾ ಚಾಂಪಿಯನ್ – 20 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಿಂಹಳಿಯರು
Advertisement
Advertisement
ಬಿಜೆಪಿ-ಜೆಡಿಎಸ್ ನಾಯಕರೊಟ್ಟಿಗಿನ ಸಭೆಯ ಬಳಿಕ ಸುದ್ದಿಗೋಷ್ಠಿ ವೇಳೆ ತಂದೆಗೆ ಮೂಗಿನಿಂದ ರಕ್ತ ಬಂದಿದೆ. ಜನ ಆತಂಕಪಡೋದು ಬೇಡ. ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಕೆಲಸದ ಒತ್ತಡಗಳು ಇದ್ದವು. ಕಳೆದ 15 ದಿನಗಳಿಂದ ನಿರಂತರ ಓಡಾಟ ಇತ್ತು. ಬೆಳಗ್ಗೆ 4.30ಕ್ಕೆ ಎದ್ದೇಳುತ್ತಿದ್ರು, ಮಲಗೋದು ರಾತ್ರಿ 1 ಗಂಟೆ ಆಗುತ್ತಿತ್ತು. ಡಾಕ್ಟರ್ ಕೂಡ ಆತಂಕ ಬೇಡ ಅಂತ ಹೇಳಿದ್ದಾರೆ. ಯಾವ ರೀತಿ ಚಿಕಿತ್ಸೆ ಕೊಡಬೇಕು ಅಂತ ಪರೀಕ್ಷೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಕುಮಾರಣ್ಣ ಆರೋಗ್ಯವಾಗಿದ್ದಾರೆ. ಸಣ್ಣ ಪುಟ್ಟ ಏರುಪೇರು ಸಾಮಾನ್ಯ. ಆರೋಗ್ಯ ಲೆಕ್ಕಿಸದೇ ಸಂಸತ್‌ನಲ್ಲಿ ಮಾತಾಡಿದ್ದಾರೆ. ರಾತ್ರಿ ಪುಸ್ತಕಗಳನ್ನ ಓದುತ್ತಾರೆ. ರಾಜ್ಯದ ಜನರಿಗೆ ಏನಾದರೂ ಮಾಡಬೇಕು ಅಂತ ಕೆಲಸ ಮಾಡ್ತಿದ್ದಾರೆ. ಈಶ್ವರನ ನಂಬಿಕೊಂಡಿದ್ದೇವೆ, ಜನ, ರೈತರ ಆಶೀರ್ವಾದ ಇದೆ. ಇಂದು (ಭಾನುವಾರ) ರಾತ್ರಿಯೇ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆಗೆ ದಿಢೀರ್ ರಕ್ತಸ್ರಾವವಾಗಲು ಕಾರಣವೇನು? – ಬ್ಲಡ್ ಥಿನ್ನರ್ ಔಷಧಿ ತೆಗೆದುಕೊಳ್ಳುತ್ತಿದ್ದದ್ದು ಏಕೆ?
ವೈದ್ಯರು ಹೇಳಿದ್ದೇನು?
ಕುಮಾರಸ್ವಾಮಿ ಅವರಿಗೆ ಮೂರು ಸಲ ಹೃದಯದ ಚಿಕಿತ್ಸೆ ನೀಡಲಾಗಿದೆ. ಬ್ಲಡ್ ಥಿನ್ನರ್ ಮಾತ್ರೆ ತೆಗೆದುಕೊಳ್ಳುತ್ತಾ ಇದ್ದರು. ಏನೂ ಆತಂಕ ಪಡುವ ಅಗತ್ಯವಿಲ್ಲ. ರೊಟಿನ್ ಚೆಕಪ್ ಮಾಡಿದ್ದೇವೆ. ಅಡ್ಮಿಷನ್ ಆಗಿಲ್ಲ. ತಪಾಸಣೆ ಮುಗಿಸಿ ಹೊರಡುತ್ತಾರೆ ಅಂತಾ ಜಯನಗರ ಆಪೋಲೋ ಆಸ್ಪತ್ರೆ ವೈದ್ಯ ಯತೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ | ಸಿಎಂ ರಾಜೀನಾಮೆಗೆ ಆಗ್ರಹಿಸಿ ಆ.3ರಿಂದ ಬಿಜೆಪಿ-ಜೆಡಿಎಸ್ ಪಾದಯಾತ್ರೆ
ಹೆಚ್‌ಡಿಕೆ ಏನಾಯ್ತು?
ಮುಡಾ ಅಕ್ರಮವನ್ನು ಖಂಡಿಸಿ ರಾಜ್ಯ ಸರ್ಕಾರದ (Karnataka Govt) ವಿರುದ್ಧ ಮೈಸೂರಿನಿಂದ ಪಾದಯಾತ್ರೆ ಹಮ್ಮಿಕೊಳ್ಳಲು ಬೆಂಗಳೂರಿನ ಖಾಸಗಿ ಹೋಟೆಲ್ (Private Hotel) ಒಂದರಲ್ಲಿ ಬಿಜೆಪಿ-ಜೆಡಿಎಸ್ ನಾಯಕರು (BJP JDS Leader) ಜಂಟಿಯಾಗಿ ಸಭೆ ನಡೆಸಿದ್ದರು. ಸಭೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮೂಗಿನಿಂದ ರಕ್ತಸ್ರಾವ ಉಂಟಾಯಿತು. ಕೂಡಲೇ ಅವರನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು.