ಬೆಂಗಳೂರು: ಕೊರೊನಾ ಎಫೆಕ್ಟ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆಗೂ ತಟ್ಟುವ ಸಾಧ್ಯತೆ ಇದೆ. ಕೊರೊನಾ ಹಿನ್ನೆಲೆಯಲ್ಲಿ ಮದುವೆ ಸ್ಥಳವನ್ನು ಸ್ಥಳಾಂತರ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಈಗಾಗಲೇ ನಿಖಿಲ್ ಮತ್ತು ರೇವತಿ ವಿವಾಹ ಮಹೋತ್ಸವಕ್ಕೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬೃಹತ್ ಜಾಗದಲ್ಲಿ ಸಿದ್ಧತೆ ಕಾರ್ಯ ನಡೆಯುತ್ತಿದೆ. ಆದರೆ ಮೂಲಗಳ ಪ್ರಕಾರ ಮದುವೆ ಕಾರ್ಯವನ್ನು ಈಗ ಬೆಂಗಳೂರಿನ ಅರಮನೆ ಮೈದಾನಕ್ಕೆ ಸ್ಥಳಾಂತರ ಮಾಡುವ ಕುರಿತು ಚರ್ಚೆಗಳು ಕುಟುಂಬದಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಹೆಚ್‍ಡಿಕೆ ಮನೆಯಲ್ಲಿ ಮದ್ವೆ ಸಂಭ್ರಮ- ನಿಖಿಲ್ ಲಗ್ನಪತ್ರಿಕೆಗೆ ಪೂಜೆ
Advertisement
Advertisement
ಜನಸಂದಣಿ ದಟ್ಟಣೆಯಿಂದ ಕೊರೊನಾ ಸುಲಭವಾಗಿ ಹರಡುತ್ತದೆ. ಹೀಗಾಗಿ ಈ ಸ್ಥಳ ಬದಲಾವಣೆ ಬಗ್ಗೆ ಗೌಡರ ಕುಟುಂಬದಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಮದುವೆ ಏಪ್ರಿಲ್ 17ರಂದು ನಡೆಯಲಿದೆ. ಈಗಾಗಲೇ ಎರಡೂ ಕುಟುಂಬದಲ್ಲೂ ಮದುವೆಗೆ ಸಿದ್ಧತೆಗಳು ನಡೆಯುತ್ತಿದೆ. ಇದನ್ನೂ ಓದಿ: ನಿಖಿಲ್- ರೇವತಿ ವಿವಾಹಕ್ಕೆ ಭೂಮಿ ಪೂಜೆ ಮೂಲಕ ಸಿದ್ಧತಾ ಕಾರ್ಯಕ್ಕೆ ಚಾಲನೆ
Advertisement
Advertisement
ನಿಖಿಲ್ ಮತ್ತು ರೇವತಿ ವಿವಾಹಕ್ಕೆ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಜಾನಪದ ಲೋಕದ ಸಮೀಪ ಅದ್ಧೂರಿ ಮಂಟಪವನ್ನು ನಿರ್ಮಿಸಲಾಗುತ್ತಿದೆ. ಗೌಡರ ಕುಟುಂಬಕ್ಕೂ ರಾಮನಗರ ಮತ್ತು ಚನ್ನಪಟ್ಟಣದ ಜನರ ನಡುವೆ ರಾಜಕೀಯವಾಗಿ ಮಾತ್ರವಲ್ಲದೆ, ಭಾವನಾತ್ಮಕ ನಂಟು ಕೂಡ ಇದೆ.
ಹೀಗಾಗಿ ತಮ್ಮ ಮಗನ ಮದುವೆ ಸಂಭ್ರಮವನ್ನು ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸದೆ, ತಮ್ಮ ಪಕ್ಷದ ಬೆಂಬಲಿಗರು, ಅಭಿಮಾನಿಗಳ ಜೊತೆ ಕೂಡ ಸಂಭ್ರಮಿಸಲು ಕುಮಾರಸ್ವಾಮಿ ಅವರು ನಿರ್ಧರಿಸಿದ್ದರು. ಆದರೆ ಈಗ ಕೊರೊನಾ ವೈರಸ್ ಪರಿಣಾಮದಿಂದ ನಿಖಿಲ್ ಮದುವೆಯನ್ನು ಬೆಂಗಳೂರಿನಲ್ಲಿ ಮಾಡಲು ನಿರ್ಧರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.