ನನ್ನ ಕೈ ಹಿಡಿದುಕೊಳ್ಳಿ, ನಾನು ಎಂದಿಗೂ ಬಿಡೋದಿಲ್ಲ – ಭಾವಿ ಪತ್ನಿಗೆ ಭಾವನಾತ್ಮಕ ಸಂದೇಶ

Public TV
1 Min Read
NIKHIL A

ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ತಮ್ಮ ಭಾವಿ ಪತ್ನಿ ರೇವತಿ ಅವರಿಗೆ ಭಾವನಾತ್ಮಕ ಸಂದೇಶವನ್ನು ಕಳುಹಿಸಿದ್ದಾರೆ.

ನಿಖಿಲ್ ನಿಶ್ಚಿತಾರ್ಥದ ನಂತರ ತಮ್ಮ ಭಾವಿ ಪತ್ನಿ ರೇವತಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು, ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಜೊತೆಗೆ ಆ ಫೋಟೋಗೆ ರೊಮ್ಯಾಂಟಿಕ್ ಮೂಡಿನಲ್ಲಿ ಕ್ಯಾಪ್ಶನ್ ಕೊಡುತ್ತಿದ್ದಾರೆ. ಇದೀಗ ಮತ್ತೊಂದು ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

nikhilgowda jaguar 89070912 2514317872123307 5657159635658473256 n

ನಿಖಿಲ್ ಅಪ್ಲೋಡ್ ಮಾಡಿರುವ ಫೋಟೋದಲ್ಲಿ ರೇವತಿಯ ಕೈಯನ್ನು ಹಿಡಿದುಕೊಂಡಿದ್ದಾರೆ. ರೇವತಿ ಅವರು ಕೂಡ ತಮ್ಮ ಭಾವಿ ಪತಿಯ ಕೈಯನ್ನು ಹಿಡಿದುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ನಿಖಿಲ್ “ನನ್ನ ಕೈಯನ್ನು ಹಿಡಿದುಕೊಳ್ಳಿ ಮತ್ತು ನಾನು ಆ ಕೈಯನ್ನು ಎಂದಿಗೂ ಬಿಡುವುದಿಲ್ಲ” ಎಂದು ಭಾವನಾತ್ಮಕವಾಗಿ ಬರೆದುಕೊಳ್ಳುವ ಮೂಲಕ ರೇವತಿಗೆ ಸಂದೇಶ ಕಳುಹಿಸಿದ್ದಾರೆ.

ನಿಖಿಲ್ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸೂಪರ್ ಜೋಡಿ, ಕ್ಯೂಟ್ ದಂಪತಿ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ನಟ ಪ್ರಥಮ್ ಕೂಡ ಇವರಿಬ್ಬರ ಫೋಟೋಗೆ ಕಮೆಂಟ್ ಮಾಡಿದ್ದಾರೆ.

https://www.instagram.com/p/B9bJjVBpfVl/

“10 ದಿನದ ಹಿಂದೆ ನಿಮ್ಮ ಸಂದರ್ಶನದಲ್ಲಿ ನೋಡಿದ ನೆನಪು. ಇನ್ನೂ ಭೇಟಿ ಮಾಡಿಲ್ಲ, ಮಾತನಾಡಿಲ್ಲ. ಒಂದು ಸಲ ಮೀಟ್ ಮಾಡಿ. ನಿಶ್ಚಿತಾರ್ಥ ಆಗುತ್ತಿದ್ದಂತೆ ಏನಣ್ಣ ದಿನ ಅವರ ಮನೆಗೆ ಹಾಜರಾಗುತ್ತಿದ್ದೀರಾ. ನೀವು ರೇವತಿ ಅವರು ಸೂಪರ್. ಕುಮಾರಣ್ಣರಿಗೆ ಸುಕುಮಾರ ಅನ್ನೋ ಮೊಮ್ಮಗ ಆಗಲಿ. ರೇವತಿ ಅವರಿಗೆ ಭಾನುಮತಿ-ಇಂದುಮತಿ ಅನ್ನೋ ಅವಳಿ-ಜವಳಿನೂ ಆಗಿಲಿ” ಎಂದು ಕಮೆಂಟ್ ಮಾಡಿದ್ದಾರೆ.

f91c744b fe95 451f b1f2 6e89c0601cd0 1

ನಿಖಿಲ್ ಮತ್ತು ರೇವತಿ ಅವರ ವಿವಾಹ ಏಪ್ರಿಲ್ 17 ರಂದು ನಡೆಯಲಿದೆ. ಈಗಾಗಲೇ ಎರಡು ಕುಟುಂಬದವರು ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *