ಬೆಂಗಳೂರು: ನಿಖಿಲ್ ಎಲ್ಲಿದ್ದೀಯಪ್ಪ.. ಈ ಡೈಲಾಗ್ ಈಗ ರಾಜ್ಯಾದ್ಯಂತ ಮನೆ ಮಾತಾಗಿದೆ. ರಾಜಕೀಯವಾಗಿ ಇದನ್ನು ಸಿಕ್ಕ ಸಿಕ್ಕ ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಟ್ರೋಲ್ ಆಗುತ್ತಿರುವ ವಿಡಿಯೋ ಬಗ್ಗೆ ಸ್ವತಃ ನಿಖಿಲ್ ಕುಮಾರಸ್ವಾಮಿ ಅವರೇ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಮಾಧ್ಯಮಲೋಕದಲ್ಲೇ ಮೊಟ್ಟಮೊದಲ ಬಾರಿಗೆ ಪಬ್ಲಿಕ್ ಟಿವಿ ಆರಂಭಿಸಿರುವ ಬುಲೆಟ್ ರಿಪೋರ್ಟ್ ರ್ ಕಾರ್ಯಕ್ರಮದಲ್ಲಿ ಬುಲೆಟ್‍ನಲ್ಲೆ ಕುಳಿತ ನಿಖಿಲ್, ಸೋಶಿಯಲ್ ಮಿಡಿಯಾದಲ್ಲಿ ಕಾಮೆಂಟ್ ಮಾಡೋರಿಗೆ, ಟ್ರೋಲ್ ಮಾಡೋರಿಗೆ ಒಂದು ಪದ ಬಳಸ್ತೀನಿ ತಪ್ಪು ತಿಳ್ಕೋಬೇಡಿ ಅಂದ್ರು. ಇಂಥವರೆಲ್ಲ ಸ್ಯಾಡಿಸ್ಟ್ ಗಳು, ಅವರು ವೋಟು ಹಾಕಲ್ಲ. ಅವರ ಬಗ್ಗೆ ನಾನು ತಲೆನೂ ಕೆಡಿಸಿಕೊಳ್ಳಲ್ಲ ಎಂದು ಮಾತಿನ ಚಾಟಿ ಬೀಸಿದ್ದಾರೆ.
Advertisement
Advertisement
ಇಷ್ಟೇ ಅಲ್ಲ ನಮ್ಮ ಕಾರ್ಯಕರ್ತರು ಸಹ ಬಿಜೆಪಿ ಅವರು ಎಲ್ಲಿದ್ದೀರಪ್ಪ. ಮಂಡ್ಯದಲ್ಲಿ ಹುಡುಕ್ತಿದ್ದೀನಿ ಎಂದು ಟ್ರೋಲ್ ಮಾಡಿ ನಂಗು ಕಳುಹಿಸಿದರು. ಬಟ್ ಇಟ್ಸ್ ನಾಟ್ ಗುಡ್ ಅಂದ್ರು.
Advertisement
ಇಂತಹ ಟ್ರೋಲ್ ಮಾಡೋರಿಗೆ ಅಂದು ಆತ್ಮಹತ್ಯೆ ಮಾಡಿಕೊಂಡ 75 ರೈತ ಕುಟುಂಬಗಳಿಗೆ ಚೆಕ್ ವಿತರಿಸಿದ್ದು ಯಾಕೆ ಕಣ್ಣಿಗೆ ಕಾಣಿಸಲಿಲ್ಲ ಎಂದು ಪ್ರಶ್ನೆ ಕೂಡ ಹಾಕಿದ್ದಾರೆ. ನಾವೆಲ್ಲ ಇರೋದು ಗಾಜಿನ ಮನೆಯಲ್ಲಿ, ಒಡೆದರೆ ನಮ್ಮ ಮನೆ ಗಾಜು ಒಡೆದೋಗುತ್ತೆ, ಅವರ ಮನೆ ಗಾಜು ಒಡೆದೋಗುತ್ತೆ ಎಂದು ಕಿವಿಮಾತು ಹೇಳಿದ್ದಾರೆ.
Advertisement
ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ `ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕೇಳಿದ್ದರು. ಆ ಬಳಿಕ ಈ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ ಹರಿದಾಡುತ್ತಿದೆ.