ಬೆಂಗಳೂರು: ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಆಗೋ ಬಗ್ಗೆ ದೆಹಲಿಯಲ್ಲಿ ತೀರ್ಮಾನ ಆಗುತ್ತದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪಷ್ಟಪಡಿಸಿದ್ದಾರೆ.
ಜೆಪಿ ಭವನದಲ್ಲಿ ಮಾತನಾಡಿದ ಅವರು, 2015 ರಿಂದ ಬಿಬಿಎಂಪಿ ಚುನಾವಣೆ ಆಗಿರಲಿಲ್ಲ. ಸುಪ್ರೀಂ ಕೋರ್ಟ್ ಆದೇಶದನ್ವಯ ಚುನಾವಣೆ ಮಾಡಬೇಕು. ಈ ಸರ್ಕಾರಕ್ಕೆ ಚುನಾವಣೆ ಮಾಡೋಕೆ ಭಯ. 2.5 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಜನ ಕಾಂಗ್ರೆಸ್ ಅವರನ್ನ ತಿರಸ್ಕಾರ ಮಾಡ್ತಾರೆ ಅನ್ನೋ ಭಯದಲ್ಲಿ ಚುನಾವಣೆ ಮಾಡೋಕೆ ಹಿಂದೇಟು ಹಾಕಿದ್ರು. ಈಗ ಸುಪ್ರೀಂ ಕೋರ್ಟ್ ಆದೇಶ ಮಾಡಿರೋದ್ರಿಂದ ಚುನಾವಣೆ ಆಗ್ತಿದೆ. ಜಿಬಿಎ ಚುನಾವಣೆ ಏಕಾಂಗಿಯಾಗಿ ಎದುರಿಸೋಣ ಅಂತ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗಿದೆ. ಇದನ್ನೂ ಓದಿ: ರಾಜ್ಯ ರಾಜಕೀಯಕ್ಕೆ ನಾನು ಬರುತ್ತೇನೆ: ಸಂಕ್ರಾಂತಿ ಹಬ್ಬದ ದಿನವೇ ಹೆಚ್‌ಡಿಕೆ ಘೋಷಣೆ
GBA, ಸ್ಥಳೀಯ ಸಂಸ್ಥೆ ಚುನಾವಣೆ ಕಾರ್ಯಕರ್ತರ ಚುನಾವಣೆ. ಆಕಾಂಕ್ಷಿಗಳು ಜಾಸ್ತಿ ಇರ್ತಾರೆ. ಹೊಸ ನಾಯಕತ್ವ ಹುಟ್ಟಿ ಹಾಕೋಕೆ ಸುವರ್ಣ ಅವಕಾಶ ಇದೆ ಅನ್ನೋದು ಎಲ್ಲರ ಅಭಿಪ್ರಾಯ. ದೇವೇಗೌಡರ ಬಳಿ ಇದರ ಬಗ್ಗೆ ತಿಳಿಸಲಾಗಿದೆ ಎಂದರು. ಜಿಬಿಎ-ಸ್ಥಳೀಯ ಸಂಸ್ಥೆಗಳ ಚುನಾವಣೆ ಒಟ್ಟಾಗಿ ಹೋಗಬೇಕಾ ಬೇಡವಾ ಅಂತ ತೀರ್ಮಾನ ಮಾಡೋದು ದೇವೇಗೌಡ, ಕುಮಾರಸ್ವಾಮಿ, ಮೋದಿ, ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಆಗಿ ಒಪ್ಪಂದ ಆಗಬೇಕು. ಬಿಜೆಪಿ ಕೇಂದ್ರದ ನಾಯಕರ ಜೊತೆ ಕೂತು ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡ್ತೀವಿ ಎಂದರು.
ಲೋಕಸಭೆ ಚುನಾವಣೆಯಲ್ಲಿ NDA ಗೆ ಉತ್ತಮ ಫಲಿತಾಂಶ ಬಂದಿದೆ. ರಾಜ್ಯದ ಜನತೆ NDAಯನ್ನ ಒಪ್ಪಿ ಹೆಚ್ಚು ಸ್ಥಾನ ಲೋಕಸಭೆಯಲ್ಲಿ ಕೊಟ್ಟಿದ್ದಾರೆ. ಜೆಡಿಎಸ್ NDA ಮಿತ್ರ ಕೂಟವಾಗಿ ಕೆಲಸ ಮಾಡ್ತಿದೆ. ನಮ್ಮ ದೇಶ, ರಾಜ್ಯ ಕಟ್ಟೋಕೆ ಕೆಲಸ ಮಾಡ್ತೀವಿ ಎಂದರು.
ಮಂಡ್ಯದಲ್ಲಿ ಮೈತ್ರಿಗೆ ಬಿಜೆಪಿ ನಾಯಕರ ವಿರೋಧಿ ವಿಚಾರಕ್ಕೆ, ನಮ್ಮ ಪಕ್ಷದ ವೇದಿಕೆಯಲ್ಲಿ ಅನೇಕ ಜನ ಮುಖಂಡರು, ನಾಯಕರು ಅನೇಕ ಭಾವನೆ ವ್ಯಕ್ತಪಡಿಸುತ್ತಾರೆ. ಆದರೆ, ನಮ್ಮ ನಾಯಕರು ಸಾರ್ವಜನಿಕವಾಗಿ, ಮಾಧ್ಯಮಗಳ ಮುಂದೆ ಮಾತಾಡಿ NDA ಗೆ ಮುಜುಗರ ಆಗೋ ರೀತಿ ಹೇಳಿಕೆ ಕೊಡಬಾರದು ಅಂತ ನಾವು ಸೂಚನೆ ಕೊಟ್ಟಿದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಅವರು ಗಟ್ಟಿಯಾಗಿ ಮೈತ್ರಿಗೆ ಮುಜುಗರ ಆಗದಂತೆ ಇರಬೇಕು ಅಂತ ಹೇಳಿದ್ದಾರೆ. ಇದೇ ರೀತಿ ಬಿಜೆಪಿ ಕೂಡಾ ಅವರ ನಾಯಕರಿಗೆ ಮೈತ್ರಿಗೆ ಮುಜುಗರ ಮಾಡಬೇಡಿ ಅನ್ನೋ ಸೂಚನೆ ಕೊಡ್ತಾರೆ ಅಂತ ನಾನು ಭಾವಿಸಿದ್ದೇನೆ ಎಂದರು. ಇದನ್ನೂ ಓದಿ: ಬೆಂಗಳೂರು ಉಪನಗರ ರೈಲ್ವೆ ಯೋಜನೆ ವಿಳಂಬ – ವೇಗ ಹೆಚ್ಚಿಸುವಂತೆ ಪ್ರಧಾನಿ ಮೋದಿ ಕರೆ
ಹೆಚ್‌ಡಿಕೆ ರಾಜ್ಯ ರಾಜಕೀಯ ಯಾವಾಗ ಬರಬೇಕು ಅಂತ ದೇವೇಗೌಡ, ಮೋದಿ, ಅಮಿತ್ ಶಾ ನಿರ್ಧಾರ
ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಯಾವಾಗ ಬರಬೇಕು ಅಂತ ದೇವೇಗೌಡರು, ಮೋದಿ, ಅಮಿತ್ ಶಾ ತೀರ್ಮಾನ ಮಾಡ್ತಾರೆ. ಹೆಚ್‌ಡಿಕೆ ರಾಜ್ಯ ರಾಜಕಾರಣಕ್ಕೆ ಬರಬೇಕು ಅನ್ನೋದು ಜನರ ಭಾವನೆ ಆಗಿದೆ. ನಾನು ರಾಜ್ಯ ಪ್ರವಾಸ ಮಾಡಿದ ಸಮಯದಲ್ಲಿ ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಜನರು ಬೇಸತ್ತು ಹೋಗಿದ್ದಾರೆ. ಕುಮಾರಸ್ವಾಮಿ ಅವರ ಎರಡು ಬಾರಿಯ ಆಡಳಿತವನ್ನು ಜನ ನೆನಪು ಮಾಡಿಕೊಳ್ತಿದ್ದಾರೆ. ಜನರ ಅಭಿಪ್ರಾಯ ಮತ್ತು ಬಿಜೆಪಿ ನಾಯಕರ ಅಭಿಪ್ರಾಯವೂ ಕುಮಾರಸ್ವಾಮಿ ರಾಜ್ಯಕ್ಕೆ ಬರಬೇಕು ಅಂತ ಇದೆ ಎಂದರು.
ಕುಮಾರಸ್ವಾಮಿ ಅವರಿಗೆ ಮೋದಿ ಅವರು ಎರಡು ಖಾತೆ ಕೊಟ್ಟಿದ್ದಾರೆ. ದೇಶ ಕಟ್ಟೋ ಕೆಲಸಕ್ಕೆ ಕುಮಾರಸ್ವಾಮಿ ಅವರು ಹೆಚ್ಚು ಸಮಯ ಮೀಸಲು ಇಟ್ಟಿದ್ದಾರೆ. ರಾಜ್ಯ ರಾಜಕೀಯಯಕ್ಕೆ ಯಾವ ಹಂತದಲ್ಲಿ ಕುಮಾರಸ್ವಾಮಿ ಬರಬೇಕು ಅಂತ ದೇವೇಗೌಡರು, ಮೋದಿಯವರು, ಅಮಿತ್ ಶಾ ಅವರು ಕೂತು ಸೂಕ್ತ ಸಮಯದಲ್ಲಿ ನಿರ್ಧಾರ ಮಾಡ್ತಾರೆ ಅಂತ ಸ್ಪಷ್ಟಪಡಿಸಿದರು.


