ಹಾಸನ: ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ನಿವಾಸಕ್ಕೆ ದೀಪಾಲಂಕಾರಕ್ಕಾಗಿ ಅಕ್ರಮ ವಿದ್ಯುತ್ ಸಂಪರ್ಕ ವಿಚಾರವಾಗಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕ್ಷಮೆ ಕೋರಿದರು.
ಹಾಸನಾಂಬೆ ದೇವಿ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗ್ಗೆ ಬೆಂಗಳೂರಿನಿಂದ ಹೊರಟಿದ್ದೆ. ನನಗೆ ಈಗ ತಾನೇ ಯಾರೋ ಫೋನ್ ಮಾಡಿ ಮಾಹಿತಿ ಕೊಟ್ಟರು. ಈ ಒಂದು ವಿಚಾರವಾಗಿ ಕುಮಾರಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ವಿದ್ಯುತ್ ಕಳ್ಳತನ ಆರೋಪ – ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲು
Advertisement
Advertisement
ಇದರಲ್ಲಿ ನಮ್ಮಲ್ಲಿ ಲೋಷಗಳಾಗಿದ್ದರೆ ಕೂಲಂಕಷವಾಗಿ ತನಿಖೆ ಮಾಡಲಿ. ಏನಾದರು ರಾಜ್ಯಕ್ಕೆ ನಷ್ಟ ಆಗಿದೆ ಅಂತ. ಆದರೆ ಒಬ್ಬ ಯುವಕನಾಗಿ ಕ್ಷಮೆ ಕೋರುತ್ತೇನೆ. ಈ ವಿಚಾರದಲ್ಲಿ ನಮ್ಮ ಮನೆಯಲ್ಲಿ ಇರುವ ಹುಡುಗರು ಬಹುಶಃ ನಿರ್ಲಕ್ಷ್ಯ ವಹಿಸಿರಬಹುದು ಎಂದು ಹೇಳಿದರು.
Advertisement
ತಪ್ಪಾಗಿದ್ದರೆ ಅವರ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ನಾನು ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಪದೇ ಪದೇ ಚರ್ಚೆ ಮಾಡಲ್ಲ ಎಂದರು. ಇದನ್ನೂ ಓದಿ: ದೀಪಾವಳಿಗೆ ಕರೆಂಟ್ ಕಳ್ಳತನ – ಬೆಸ್ಕಾಂ ನೋಟಿಸ್ ನೀಡಲಿ, ದಂಡ ಕಟ್ಟುತ್ತೇನೆ ಎಂದ ಹೆಚ್‌ಡಿಕೆ
Advertisement
ಜೆ.ಪಿ.ನಗರದಲ್ಲಿರುವ ನಿವಾಸಕ್ಕೆ ದೀಪಾವಳಿ ಅಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವಿದ್ಯುತ್ ಕಳವು ಪ್ರಕರಣದಲ್ಲಿ ಹೆಚ್‌ಡಿಕೆ ವಿರುದ್ಧ ಬೆಸ್ಕಾಂ ಜಾಗೃತದಳ ಪ್ರಕರಣ ದಾಖಲಿಸಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ವಿದ್ಯುತ್ ಕಲಾಂ 135 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಇದನ್ನೂ ಓದಿ: ಹೆಚ್‌ಡಿಕೆ ನಿವಾಸಕ್ಕೆ ಅಕ್ರಮ ವಿದ್ಯುತ್ – ಮಾಜಿ ಸಿಎಂಗೆ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ ಎಂದ ಕಾಂಗ್ರೆಸ್