ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾದೇವಿ ಅವರ ನಿಧನಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸಂತಾಪ ಸೂಚಿಸಿದರು.
ಈ ಬಗ್ಗೆ ಶೋಕ ಸಂದೇಶ ಬಿಡುಗಡೆ ಮಾಡಿರುವ ಅವರು, ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಬಿ.ಸರೋಜಾದೇವಿ (B.Saroja Devi) ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು ಎಂದು ಹೇಳಿದರು.ಇದನ್ನೂ ಓದಿ: ಕೋವಿಡ್ ವೇಳೆ 2 ಲಕ್ಷ ಕೊಟ್ಟು ಯಾರಿಗಾದ್ರೂ ಸಹಾಯ ಮಾಡು ಅಂತ ಹೇಳಿದ್ರು – ಸಾಧು ಕೋಕಿಲಾ
ಸರೋಜಾದೇವಿ ಅವರ ಸಾವಿನಿಂದ ಇಡೀ ಕಲಾಜಗತ್ತು ಬಡವಾಗಿದೆ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬವರ್ಗ ಹಾಗೂ ಅಭಿಮಾನಿ ಬಳಗಕ್ಕೆ ದು:ಖವನ್ನು ಭರಿಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್, ಕನ್ನಡದ ಖ್ಯಾತ ಚಿತ್ರ ನಟಿಯಾಗಿ ಹಲವು ಭಾಷೆಗಳಲ್ಲಿ ನಟನೆ ಮಾಡಿದ್ದರು. ಡಾ ರಾಜಕುಮಾರ್, ಎಂಜಿಆರ್, ಎನ್‌ಟಿಆರ್ ಜೊತೆ ನಟಿಯಾಗಿ ನಟಿಸಿ, ಬಹಳ ಹೆಸರು ಮಾಡಿದ್ದರು. ಹಲವು ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಅವರಿಗೆ ಜೀವಮಾನದ ಪ್ರಶಸ್ತಿ ನೀಡುವ ವೇಳೆ ನಾನಿದ್ದೆ. ಹತ್ತಾರು ಬಾರಿ ಭೇಟಿಯಾಗಿದ್ದೇನೆ. ನನಗೆ ದೂರದ ಸಂಬಂಧಿಗಳಾದ ಅವರು ಮಗನಂತೆ ಮಾತನಾಡಿಸುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಮರೆಯಾಲಾಗದ ಪಾತ್ರ ಮಾಡಿದ್ದರು. ಪರಭಾಷಾ ಕಲಾವಿದರಿಗೆ ಹೆಚ್ಚು ಅವಕಾಶ ಇದ್ದಾಗಲೇ ಬೇರೆ ಭಾಷೆಗಳಲ್ಲೂ ಹಿರಿಮೆ ಸಾಧಿಸಿದ್ದರು ಎಂದು ಹೇಳಿದರು.
ಇದೀಗ ಅವರು ನಮ್ಮ ಮಧ್ಯೆ ಇಲ್ಲ ಎನ್ನುವ ನೋವಿನ ಜೊತೆಗೆ ಇಂತಹ ನಟಿಯನ್ನು ಕಳೆದುಕೊಂಡಿರುವ ದುಃಖ ಹೆಚ್ಚಿದೆ. ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದರು.ಇದನ್ನೂ ಓದಿ: ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಖದೀಮರ ಸುಳಿವು ಪತ್ತೆ – ಇಬ್ಬರು ಅಂದರ್