ಮಂಡ್ಯ: 2019ರ ಲೋಕಸಭಾ ಚುನಾವಣೆಯ ಸೋಲನ್ನು ಅರಗಿಸಿಕೊಳ್ಳದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪದೇ ಪದೇ ತಮ್ಮ ಸೋಲನ್ನು ನೆನೆಯುತ್ತಿದ್ದಾರೆ. ಸಿನಿಮಾದಲ್ಲಿ ನಾನು ಮಾಡಿದ ಪಾತ್ರದಂತೆ ರಾಜಕೀಯದಲ್ಲೂ ನನಗೆ ಅಭಿಮನ್ಯು ಪಾತ್ರ ಮಾಡಿಸಿ ಬಿಟ್ಟಿದ್ದಾರೆ ಎಂದು ಎದುರಾಳಿಗಳ ವಿರುದ್ಧ ನಿಖಿಲ್ ಕಿಡಿಕಾರಿದ್ದಾರೆ.
Advertisement
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ವಿಧಾನಪರಿಷತ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ರೈತ ಸಂಘ, ಕಾಂಗ್ರೆಸ್, ಬಿಜೆಪಿ ಎಲ್ಲಾ ಸೇರಿ ಸಂಚು ಮಾಡಿ ನನ್ನನ್ನು ಸೋಲಿಸಿದರು. ಈ ಮೂಲಕ ಕುಮಾರಣ್ಣನ ನಾಯಕತ್ವದ ಮೇಲೆ ಪ್ರಶ್ನೆ ತರುವಂತೆ ಮಾಡಿದರು. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ನನಗೆ ರಾಜಕೀಯದಲ್ಲಿ ತಂದೆಯ ಹೆಸರಿನಲ್ಲಿ ಸ್ಥಾನಮಾನ ಬೇಕೆಂಬ ಹುಚ್ಚು ಇಲ್ಲ. ಜೆಡಿಎಸ್‍ನ ಎಲ್ಲ ಶಾಸಕರು, ಸಂಸದರು ಮತ್ತು ಪಕ್ಷದ ಕಾರ್ಯಕರ್ತರ ಮಾತಿನ ಮೇರೆಗೆ ಚುನಾವಣೆಗೆ ನಿಂತಿದ್ದೆ ನನಗೆ ಸೋಲಾಗಿತ್ತು. ಆ ದುಖಃವನ್ನು ಹೋಗಲಾಡಿಸಲು ಮತ್ತೊಂದು ಅವಕಾಶ ಬಂದಿದೆ. ಎಂಎಲ್‍ಸಿ ಚುನಾವಣೆಯಲ್ಲಿ ಅಪ್ಪಾಜಿಗೌಡ ಅವರನ್ನು ಗೆಲ್ಲಿಸುವ ಹೊಣೆ ನನ್ನ ಮೇಲೆ ಇದೆ. ಎಲ್ಲರೂ ಸಹಕರಿಸಿ ಅಪ್ಪಾಜಿಗೌಡರನ್ನು ಗೆಲ್ಲಿಸೋಣ ಎಂದು ಕರೆ ನೀಡಿದರು. ಇದನ್ನೂ ಓದಿ: ನೀವು ನನಗೆ ವೋಟ್ ಹಾಕಲ್ಲ- ಹೆಚ್.ಡಿ.ರೇವಣ್ಣ ತಮಾಷೆ
Advertisement
Advertisement
ಈ ವಿಧಾನಪರಿಷತ್ ಚುನಾವಣೆ 2023ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗಬೇಕು. ಕುರುಕ್ಷೇತ್ರ ಸಿನಿಮಾದಲ್ಲಿ ನಾನಗೆ ಅಭಿಮನ್ಯು ಪಾತ್ರ ಮಾಡಿ ಅಭ್ಯಸವಿದೆ. ಇದೀಗ ರಾಜಕೀಯದಲ್ಲೂ ನನಗೆ ಅಭಿಮನ್ಯು ಪಾತ್ರ ಮಾಡಿಸಿ ಬಿಟ್ಟಿದ್ದಾರೆ. ಅಪ್ಪಾಜಿ ಗೌಡರಂತಹ ಒಳ್ಳೆಯ ಅಭ್ಯರ್ಥಿಯನ್ನು ಈ ಬಾರಿ ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿಮಾಡಿಕೊಂಡರು. ಇದನ್ನೂ ಓದಿ: ನಾನು ಅಧಿಕಾರ ಬಯಸಿಲ್ಲ, ಜನ ಸೇವೆಯೇ ಗುರಿ: ಮೋದಿ
Advertisement