ಮಂಡ್ಯ: ಚುನಾವಣಾ ಖರ್ಚಿಗಾಗಿ ಕೆ.ಆರ್ ಪೇಟೆಯ ದೊಡ್ಡಕೊಪ್ಪಲು ಗ್ರಾಮಸ್ಥ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಹಣ ನೀಡಿದ್ದಾರೆ.
ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದ ದೊಡ್ಡ ಕೊಪ್ಪಲು ಗ್ರಾಮದಿಂದ ನಿಖಿಲ್ ಪ್ರಚಾರ ಶುರು ಮಾಡಿದ್ದರು. ಈ ವೇಳೆ ದೊಡ್ಡಕೊಪ್ಪಲು ಗ್ರಾಮಸ್ಥ ಕವರ್‍ನಲ್ಲಿ ಹಣ ಹಾಕಿ ಚುನಾವಣಾ ಖರ್ಚಿಗೆಂದು ನಿಖಿಲ್ ಕೈಗೆ ಹಣ ಕೊಟ್ಟಿದ್ದಾರೆ. ನಿಖಿಲ್ ಗೆಲ್ಲಬೇಕು ಎಂದು ಆಶೀರ್ವಾದಿಸಿ ಆ ಹಣವನ್ನು ನೀಡಿದ್ದಾರೆ.
Advertisement
ಈ ಹಿಂದೆ ಚುನಾವಣಾ ಸಮಯದಲ್ಲಿ ಆ ಕ್ಷೇತ್ರದ ಅಭ್ಯರ್ಥಿಗೆ ಜನ ಹಣ ನೀಡುತ್ತಿದ್ದರಂತೆ. ಆದರೆ ಈಗ ದೊಡ್ಡಕೊಪ್ಪಲು ಗ್ರಾಮಸ್ಥ ನೇರವಾಗಿ ನಿಖಿಲ್ ಅವರಿಗೆ ಈ ಹಣ ನೀಡಿ ಆಶೀರ್ವಾದ ಮಾಡಿದ್ದಾರೆ. ಗ್ರಾಮಸ್ಥ ಎಷ್ಟು ಹಣ ನೀಡಿದ್ದಾರೆ ಎನ್ನುವುದನ್ನು ನಿಖಿಲ್ ಬಹಿರಂಗ ಮಾಡಿಲ್ಲ. ಅವರು ಎಷ್ಟೇ ಹಣ ನೀಡಲಿ, ಅವರು ಪ್ರೀತಿಯಿಂದ ನೀಡಿದ್ದಾರೆ. ಅವರು ಚುನಾವಣಾ ಖರ್ಚಿಗೆಂದು ಹಣ ನೀಡಿದ್ದಾರೆ. ಅವರ ಅಭಿಮಾನದಿಂದ ಮುಂದೆ ಚುನಾವಣೆ ಗೆಲ್ಲಬಹುದು ಎಂದು ನಿಖಿಲ್ ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ನಿಖಿಲ್ ಕುಮಾರಸ್ವಾಮಿ ಟೆಂಪಲ್ ರನ್ ಶುರು ಮಾಡಿಕೊಂಡಿದ್ದಾರೆ. ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನಿಖಿಲ್‍ಗೆ ಸ್ಥಳೀಯ ಜೆಡಿಎಸ್ ಮುಖಂಡರು ಸಾಥ್ ನೀಡಿದರು.
Advertisement
ಕೆಆರ್ ನಗರ ವಿಧಾನಸಭಾ ಕ್ಷೇತ್ರದ ದೊಡ್ಡಕೊಪ್ಪಲು ಗ್ರಾಮದಿಂದ ನಿಖಿಲ್ ಪ್ರಚಾರ ಶುರು ಮಾಡಿದ್ದಾರೆ. ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ನಿಖಿಲ್ ಪ್ರಚಾರ ಆರಂಭಿಸಿದ್ದಾರೆ. ಪ್ರಚಾರಕ್ಕೆ ಎಐಸಿಸಿ ವಕ್ತಾರೆ ಐಶ್ವರ್ಯ ಮಹಾದೇವ್ ಸಾಥ್ ನೀಡಿದ್ದಾರೆ.