ಬೆಂಗಳೂರು: ಮಂಡ್ಯ ಕ್ಷೇತ್ರದಲ್ಲಿ ಸೋಲು ಕಂಡಿದಕ್ಕೆ ನಿಖಿಲ್ ಕುಮಾರಸ್ವಾಮಿ ತಮ್ಮ ತಾತ ಎಚ್.ಡಿ ದೇವೇಗೌಡ ಎದುರೇ ರೊಚ್ಚಿಗೆದ್ದು ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ
ನೀವು ನನ್ನನ್ನು ಮಂಡ್ಯದ ಚಕ್ರವ್ಯೂಹದಲ್ಲಿ ಸಿಲುಕಿಸಿಬಿಟ್ರಿ. ನಿಮ್ಮನ್ನು ನಂಬಿಕೊಂಡು ನಾನು ಹಾಳಾಗಿಬಿಟ್ಟೆ. 8 ಶಾಸಕರು, ಇಬ್ಬರು ಸಚಿವರು ಇದ್ದರೂ ಕೂಡ ನಾನು ಏಕೆ ಗೆಲ್ಲುವುದಕ್ಕೆ ಆಗಲಿಲ್ಲ. ಹಾಸನದಲ್ಲಿ ಕಾಂಗ್ರೆಸ್ಸಿಗರನ್ನು ಮನವೊಲಿಸಲು ರೇವಣ್ಣ ಯಶಸ್ವಿಯಾಗಲಿಲ್ವಾ? ನೀವು ಏಕೆ ಕಾಂಗ್ರೆಸ್ ರೆಬೆಲ್ ಚಲುವರಾಯಸ್ವಾಮಿ ಹಾಗೂ ನರೇಂದ್ರ ಸ್ವಾಮಿ ಮನವೊಲಿಸಲಿಲ್ಲ ಎಂದು ದೇವೇಗೌಡರನ್ನು ಪ್ರಶ್ನಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಜೆಡಿಎಸ್ ಭದ್ರಕೋಟೆ ಎಂದು ಹೇಳಿ ನನ್ನನ್ನು ಕಣಕ್ಕಿಳಿಸಿದ್ದೀರಿ. ಅಲ್ಲದೆ ನೀವು ಎಲ್ಲಾ ಸೇರಿ ಸಂಪೂರ್ಣವಾಗಿ ನನ್ನನ್ನು ಹಾಳು ಮಾಡಿದ್ದೀರಿ. ಚುನಾವಣೆಯಲ್ಲಿ ಸೋತು ನನಗೆ ಅಪಮಾನ ಆಗಿದೆ ಎಂದು ನಿಖಿಲ್ ದೇವೇಗೌಡರ ಎದುರೇ ಕೂಗಾಡಿರು ವಿಚಾರವನ್ನು ಮೂಲಗಳು ತಿಳಿಸಿವೆ.
Advertisement
ಇಂದು ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿ ವೇಳೆ ಕುಮಾರಸ್ವಾಮಿ ಮೌನಕ್ಕೆ ಜಾರಿದ್ದು, ಡಿಸಿಎಂ ಮಾಧ್ಯಮಗಳ ಪ್ರತಿ ಪ್ರಶ್ನೆಗೂ ಉತ್ತರಿಸುತ್ತಿದ್ದರು. ಸುದ್ದಿಗೋಷ್ಠಿಯಲ್ಲಿ ಸಿಎಂ ಅವರ ಪ್ರತಿಕ್ರಿಯೆ ಕೇಳಿದ್ದಾಗ ಕೈಯಲ್ಲೇ ಸನ್ನೇ ಮಾಡಿ ಮಾತಾಡಲ್ಲ ಎಂದು ಹೇಳಿದ್ದಾರೆ. ಅನೌಪಚಾರಿಕ ಸಭೆಯಲ್ಲಿ ಸಚಿವರ ವಿಶ್ಲೇಷಣೆಯನ್ನು ಸಿಎಂ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದರು.
Advertisement
ಅಲ್ಲದೆ ಸಚಿವ ಡಿಸಿ.ತಮ್ಮಣ್ಣ, ಸಾ.ರಾ ಮಹೇಶ್, ಸಿ.ಎಸ್ ಪುಟ್ಟರಾಜು ಸಹ ಗಪ್ ಚುಪ್ ಆಗಿದ್ದರು. ಸಿಎಂ ಮಂಡ್ಯದ ಸಚಿವರ ಜೊತೆ ಅಷ್ಟಕ್ಕಷ್ಟೇ ಎಂಬಂತೆ ಇದ್ದು, ಆಪ್ತರೊಂದಿಗೆ ಮುಖ ಕೊಟ್ಟು ಮಾತನಾಡದೇ ಕುಳಿತಿದ್ದರು.