ಕುಮಾರಸ್ವಾಮಿಯವರ ಅಭಿವೃದ್ಧಿ ಕಾರ್ಯಗಳನ್ನ ಪ್ರಚಾರ ಮಾಡ್ತೇನೆ: ನಿಖಿಲ್

Advertisements

ರಾಮನಗರ: ನಾನು ರಾಮನಗರ ಕ್ಷೇತ್ರದ ಪ್ರವಾಸ ಮಾಡುತ್ತೇನೆ. ಕುಮಾರಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳನ್ನ ಪ್ರಚಾರ ಮಾಡುತ್ತೇನೆ. ಈ ಮೂಲಕ ಜನರ ಬಳಿಗೆ ಹೋಗುತ್ತೇನೆ ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

Advertisements

ಬೆಂಗಳೂರು ಗ್ರಾಮಾಂತರ ವಿಧಾನಪರಿಷತ್ ಅಭ್ಯರ್ಥಿ ಪರ ಕ್ಯಾಂಪೇನ್ ಮಾಡಿ ಮಾತನಾಡಿದ ಅವರು, ನನಗೆ ಮಂಡ್ಯ ಜಿಲ್ಲೆಯ ಜವಾಬ್ದಾರಿ ನೀಡಿದ್ದಾರೆ. ನಾನು ಈಗಾಗಲೇ 7 ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದರು.

Advertisements

ರಾಮನಗರ ಜಿಲ್ಲೆಯ ಜನರಿಗೆ ಕುಮಾರಸ್ವಾಮಿರವರ ಅಭಿವೃದ್ಧಿ ಗೊತ್ತಿದೆ. ಇಲ್ಲಿ ಯಾವುದೇ ಕಾರಣಕ್ಕೂ ನಮ್ಮ ಕಾರ್ಯಕರ್ತರನ್ನ ಕೊಂಡುಕೊಳ್ಳಲು ಆಗಲ್ಲ. ಹಣದಿಂದ ಕಾರ್ಯಕರ್ತರನ್ನ ಕೊಂಡುಕೊಳ್ಳಲು ಸಾಧ್ಯವಿಲ್ಲ. ನಾನು ರಾಮನಗರ ಕ್ಷೇತ್ರದ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ:ಸಿದ್ದರಾಮಯ್ಯ ಇಂದಿಗೂ ನಮ್ಮ ನಾಯಕ, ಆದ್ರೆ ಇತ್ತೀಚೆಗೆ ಬಹಳ ಸುಳ್ಳು ಹೇಳ್ತಿದ್ದಾರೆ: ರಮೇಶ್

ಇದೇ ವೇಳೆ ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರದ ಕುರಿತು ಮಾತನಾಡಿ, ಇದೆಲ್ಲವೂ ಆರೋಪಿಗಳು, ಆರೋಪವಾಗಿಯೇ ಉಳಿಯಲಿದೆ. ಚುನಾವಣಾ ಸಂದರ್ಭದಲ್ಲಿ ಇದೆಲ್ಲವೂ ಸಹಜ. ಆದರೆ ಈ ವಿಚಾರವಾಗಿ ಪಕ್ಷದ ನಾಯಕರು ಮಾತನಾಡ್ತಾರೆ ಎಂದರು.

Advertisements
Advertisements
Exit mobile version