ಮಂಡ್ಯ: ಸಕ್ಕರೆ ನಾಡು ಮಂಡ್ಯದ (Mandya) ಪಾಲಿಟಿಕ್ಸ್ ಅಂದ್ರೆ ಇಂಡಿಯಾದಲ್ಲಿ ಸದ್ದು ಮಾಡುತ್ತೆ. ಈ ಬಾರಿಯೂ ಸಹ ಮಂಡ್ಯ ಸಾಕಷ್ಟು ಸದ್ದು ಮಾಡುತ್ತಿದೆ. 2019 ರ ಚುನಾವಣೆಯಲ್ಲಿ ತನ್ನ ಸೋಲಿನ ಸೇಡು ತೀರಿಸಿಕೊಳ್ಳಲು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪಣ ತೊಟ್ಟಿದ್ದಾರೆ.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ನಿಖಿಲ್ ಕುಮಾರಸ್ವಾಮಿ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅಭೂತಪೂರ್ವ ಗೆಲುವು ಸಾಧಿಸಿದ್ದರು. ಸುಮಲತಾ ಅವರ ಗೆಲುವಿನ ಹಿಂದೆ ತೆರೆ ಮರೆಯಲ್ಲಿ ಇಂದಿನ ಕೃಷಿ ಸಚಿವ ಚಲುವರಾಯಸ್ವಾಮಿ ಮೈತ್ರಿ ಧರ್ಮವನ್ನು ಧಿಕ್ಕರಿಸಿ ಕೆಲಸ ಮಾಡಿದ್ರು. ಇದನ್ನು ಹೆಚ್‌ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಇಂದಿಗೂ ಮರೆತಿಲ್ಲ. ಚಲುವರಾಯಸ್ವಾಮಿ ಅವರಿಗೆ ಕಡಿವಾಣ ಹಾಕುವ ಸಲುವಾಗಿಯೇ ಕುಮಾರಸ್ವಾಮಿ (HD Kumaraswamy) ಮಂಡ್ಯದ ಮೈತ್ರಿ ಅಭ್ಯರ್ಥಿ ಆಗಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಇದನ್ನೂ ಓದಿ: ಮೈಸೂರು ಕ್ಷೇತ್ರದಲ್ಲಿ 13 ಬಾರಿ ‘ಕೈ’, ನಾಲ್ಕು ಬಾರಿ ಕಮಲಕ್ಕೆ ಜೈ – ಒಂದೂ ಬಾರಿಯೂ ಗೆದ್ದಿಲ್ಲ ಜೆಡಿಎಸ್!
Advertisement
Advertisement
ತನಗೆ 2019 ರಲ್ಲಿ ಆದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ನಿಖಿಲ್ ತನ್ನ ತಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಅವರ ಗೆಲುವಿನ ರಣತಂತ್ರ ರೂಪಿಸುತ್ತಿದ್ದಾರೆ. 2019ರ ಚುನಾವಣೆಯಲ್ಲಿ ಸುಮಲತಾ ಪರ ತೆರೆ ಹಿಂದೆ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿದ್ದ ಚಲುವರಾಯಸ್ವಾಮಿ ಕ್ಷೇತ್ರವಾದ ನಾಗಮಂಗಲದಿಂಲೇ ನಿಖಿಲ್ ಇಂದಿನಿಂದ ತಂದೆಯ ಪರ ಚುನಾವಣೆಯ ಪ್ರಚಾರ ಆರಂಭ ಮಾಡಲಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಪ್ರಕರಣ; ಇದು ಯಾರಾದ್ರೂ ನಂಬುವ ಮಾತಾ?: ಉಮೇಶ್ ಜಾಧವ್ ವಾಗ್ದಾಳಿ
Advertisement
Advertisement
ಈ ಮೂಲಕ ಚಲುವರಾಯಸ್ವಾಮಿ ಅವರಿಗೆ ನಿಖಿಲ್ ಠಕ್ಕರ್ ನೀಡಲು ಹೊರಟಿದ್ದಾರೆ. ಇಂದು ನಿಖಿಲ್ ನಾಗಮಂಗಲದಲ್ಲಿ 11 ಗಂಟೆಗೆ ಹಾಗೂ ಕೆಆರ್ ಪೇಟೆಯಲ್ಲಿ 2 ಗಂಟೆಗೆ ಬಿಜೆಪಿ-ಜೆಡಿಎಸ್ ನಾಯಕರು, ಮುಖಂಡರು, ಕಾರ್ಯಕರ್ತರ ಜೊತೆ ಚುನಾವಣಾ ಪ್ರಚಾರ ಸಭೆ ಮಾಡಲಿದ್ದಾರೆ. ಒಟ್ಟಾರೆ ಕಳೆದ ಬಾರಿಯಾದ ಸೋಲಿನ ಸೇಡು ತೀರಿಸಿಕೊಳ್ಳಲು ತಂದೆ ಕುಮಾರಸ್ವಾಮಿ ಅವರ ಗೆಲುವಿಗಾಗಿ ನಿಖಿಲ್ ಮಂಡ್ಯದಲ್ಲಿ ಸ್ವತಃ ಅಖಾಡಕ್ಕೆ ಇಳಿಸಿದಿದ್ದಾರೆ. ಇದಕ್ಕೆ ಕೈ ನಾಯಕರ ಪಟ್ಟು ಏನು ಅನ್ನೋದು ಕಾದು ನೋಡಬೇಕಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿದಿರೋ ಬಿಜೆಪಿ ಅಭ್ಯರ್ಥಿ ಮೇಲೆ 242 ಕ್ರಿಮಿನಲ್ ಕೇಸ್