– 8 ಲಕ್ಷ ಲಗ್ನ ಪತ್ರಿಕೆ ಮುದ್ರಣ
– 1 ಸಾವಿರ ಅಡುಗೆ ಸಹಾಯಕರು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆಗೆ ಭರ್ಜರಿ ತಯಾರಿ ನಡೆಯುತ್ತದೆ. ಏಪ್ರಿಲ್ 17ರಂದು ನಡೆಯಲಿರುವ ನಿಖಿಲ್, ರೇವತಿ ಅವರ ಮದುವೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಎರಡೂ ಕುಟುಂಬದಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
Advertisement
ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಜಾನಪದ ಲೋಕದ ಸಮೀಪ ನಿರ್ಮಿಸಲಾಗುತ್ತಿರುವ ಅದ್ಧೂರಿ ಸಪ್ತಪದಿ ಮಂಟಪದಲ್ಲಿ ನಿಖಿಲ್ ರೇವತಿ ಅವರನ್ನು ವರಿಸಲಿದ್ದಾರೆ. ಗೌಡರ ಕುಟುಂಬಕ್ಕೂ ರಾಮನಗರ ಮತ್ತು ಚನ್ನಪಟ್ಟಣದ ಜನರ ನಡುವೆ ರಾಜಕೀಯವಾಗಿ ಮಾತ್ರವಲ್ಲದೆ, ಭಾವನಾತ್ಮಕ ನಂಟು ಕೂಡ ಇದೆ. ಹೀಗಾಗಿ ತಮ್ಮ ಮಗನ ಮದುವೆ ಸಂಭ್ರಮವನ್ನು ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸದೆ, ತಮ್ಮ ಪಕ್ಷದ ಬೆಂಬಲಿಗರು, ಅಭಿಮಾನಿಗಳ ಜೊತೆ ಕೂಡ ಸಂಭ್ರಮಿಸಲು ಕುಮಾರಸ್ವಾಮಿ ಅವರು ನಿರ್ಧರಿಸಿದ್ದು, ಮಗನ ಮದುವೆಗೂ ಮುನ್ನವೇ ರಾಮನಗರ ಮತ್ತು ಚನ್ನಪಟ್ಟಣದ ಜನರಿಗೆ ಭರ್ಜರಿ ಉಡುಗೊರೆ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ‘ಸಾವು ನಮ್ಮನ್ನ ಬೇರ್ಪಡಿಸೋವರೆಗೂ ನಾವಿಬ್ಬರೂ ಹೀಗೇ ಕೈ ಹಿಡಿದಿರ್ಬೇಕು’
Advertisement
Advertisement
ಪ್ರತಿ ಮನೆಗೂ ಆಹ್ವಾನ:
ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದ ಪ್ರತಿ ಮನೆಗೆ ಲಗ್ನಪತ್ರಿಕೆಯನ್ನು ನೀಡಿ, ಮದುವೆಗೆ ಆಮಂತ್ರಿಸಲು ಕುಮಾರಸ್ವಾಮಿ ಅವರು ನಿರ್ಧರಿಸಿದ್ದಾರೆ. ಲಗ್ನಪತ್ರಿಕೆಯ ಜೊತೆಗೆ ಸೀರೆ, ಪಂಚೆ, ಶರ್ಟ್ ಮತ್ತು ಶಲ್ಯವನ್ನು ಉಡುಗೊರೆಯಾಗಿ ನೀಡಲು ಎಚ್‍ಡಿಕೆ ಮುಂದಾಗಿದ್ದಾರೆ. ಹೀಗಾಗಿ ಈಗಾಗಲೇ ಮುಖಂಡರೊಂದಿಗೆ ಚರ್ಚಿಸಿ ಪ್ರತಿ ಹಳ್ಳಿಯಲ್ಲಿ ಎಷ್ಟು ಮನೆಗಳಿವೆ ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 80 ಎಕ್ರೆ ವಿಸ್ತೀರ್ಣದಲ್ಲಿ ಅದ್ಧೂರಿ ಸೆಟ್ – ಏ. 17ರ ಶುಭ ಶುಕ್ರವಾರ ನಿಖಿಲ್, ರೇವತಿ ಕಲ್ಯಾಣ
Advertisement
ರಾಮನಗರದಲ್ಲಿ 68 ಸಾವಿರ ಮನೆಗಳಿದ್ದು, ಚನ್ನಪಟ್ಟಣದಲ್ಲಿ 70 ಸಾವಿರ ಮನೆಗಳಿವೆ ಎಂಬ ಮಾಹಿತಿ ಇದೆ. ಕ್ಷೇತ್ರಗಳಲ್ಲಿನ ಮುಸ್ಲಿಮರು ಸೇರಿದಂತೆ ಎಲ್ಲಾ ಜಾತಿ, ಧರ್ಮದವರಿಗೂ ಭೇದ ಭಾವವಿಲ್ಲದೆ ಸೀರೆ, ಪ್ಯಾಂಟ್, ಶರ್ಟ್ ನೀಡಲು ಈಗಾಗಲೇ ಎಚ್‍ಡಿಕೆ ಸೂಚಿಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಮಹಿಳೆಯರಿಗೆ ಸೀರೆಯ ಜೊತೆಗೆ ಅರಿಶಿನ, ಕುಂಕುಮದ ಭರಣಿಗಳನ್ನ ನೀಡಲು ತಿರ್ಮಾನಿಸಿದ್ದು, ಜಾತಿ ಭೇದ ಮಾಡದೇ ಎಲ್ಲರೂ ನಮ್ಮವರೆ ಎಂದು ಎಚ್‍ಡಿಕೆ ಉಡುಗೊರೆ ನೀಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ದೊಡ್ಡಗೌಡ್ರ ಕುಟುಂಬವನ್ನು ಬಿಡದ ವಾಸ್ತು, ಶಾಸ್ತ್ರ- ಮಗನ ಮದ್ವೆಗೆ ಎಚ್‍ಡಿಕೆ ದಂಪತಿಯಿಂದ ಭೂಮಿಗೆ ಶಕ್ತಿ ಪೂಜೆ
8 ಲಕ್ಷ ಲಗ್ನಪತ್ರಿಕೆ ಮುದ್ರಣ:
ನಿಖಿಲ್ ಮದುವೆಗಾಗಿ 8 ಲಕ್ಷ ಲಗ್ನಪತ್ರಿಕೆಗಳನ್ನು ಮುದ್ರಿಸಲಾಗಿದೆ. ಉಡುಗೊರೆಯ ಜೊತೆಗೆ ಲಗ್ನಪತ್ರಿಕೆ ನೀಡಿ ಮಗನ ಮದುವೆಗೆ ಆಮಂತ್ರಿಸಲು ಎಚ್‍ಡಿಕೆ ನಿರ್ಧರಿಸಿದ್ದಾರೆ. ಸದ್ಯ ಜನರಿಗೆ ನೀಡುವ ಉಡುಗೊರೆಯ ವೆಚ್ಚ 1 ಮನೆಗೆ 3 ಸಾವಿರ ರೂಪಾಯಿಯಷ್ಟು ತಗುಲುತ್ತದೆ ಎಂದು ಅಂದಾಜಿಸಲಾಗಿದೆ.
1 ಸಾವಿರ ಅಡುಗೆ ಸಹಾಯಕರು
ಬಳೇಪೇಟೆಯ ಬಾಣಸಿಗ ವೆಂಕಟೇಶ್ ನಿಖಿಲ್ ಮತ್ತು ರೇವತಿ ಮದುವೆಗೆ ಅಡುಗೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ. ಮದುವೆಯ ದಿನ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ ಇದ್ದು, ಬಂದವರಿಗೆ ಊಟ ಬಡಿಸಲೆಂದೇ 1 ಸಾವಿರ ಮಂದಿ ಅಡುಗೆ ಸಹಾಯಕರನ್ನ ನೇಮಿಸಲಾಗುತ್ತಿದೆ ಎನ್ನಲಾಗಿದೆ.