– ಕುಮಾರಣ್ಣಗೆ ಕೇಂದ್ರ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದ ನಿಖಿಲ್
ಮಂಡ್ಯ: ಉಪ್ಪು ತಿಂದವರು ನೀರು ಕುಡಿಯಲೇಬೇಕು. ಹಾಸನ ಸಂಸದರನ್ನು ಕುಮಾರಣ್ಣ ಮೊದಲ ದಿನವೇ ಅಮಾನತು ಮಾಡಿದ್ದಾರೆ. ಈವರೆಗೆ ಪ್ರಜ್ವಲ್ (Prajwal Revanna) ನನ್ನ ಸಂಪರ್ಕಕ್ಕೂ ಬಂದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.
ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ (Mandya) ಮಾತನಾಡಿರುವ ಅವರು, ಈ ಪ್ರಕರಣವನ್ನು ಸಿಬಿಐಗೆ ಕೊಟ್ಟು ರಾಜ್ಯ ಸರ್ಕಾರ ಕೂಲಂಕಷವಾಗಿ ತನಿಖೆ ಮಾಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೆನ್‌ಡ್ರೈವ್ ಕೇಸ್; ಕಾರ್ತಿಕ್, ದೇವರಾಜೇಗೌಡಗೆ ಎಸ್‌ಐಟಿ ನೋಟಿಸ್
ಪೆನ್‌ಡ್ರೈವ್ ವಿಚಾರವಾಗಿ (Pendrive Case) ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಅದನ್ನು ನಾವು ಸ್ವಾಗತ ಮಾಡ್ತೀವಿ. ಆರೋಪ ಬಂದಾಗ ನಾವು ತಪ್ಪಿಸಿಕೊಳ್ಳುವ ಪ್ರಶ್ನೆ ಇಲ್ಲ. ಈಗಾಗಲೇ ಈ ಸಂಬಂಧ ತನಿಖೆ ನಡೆಯಿತ್ತಿದೆ. ತನಿಖೆ ಪಾರದರ್ಶಕವಾಗಿ ತನಿಖೆ ನಡೆಯುತ್ತಿದ್ಯಾ? ಎಂಬ ಪ್ರಶ್ನೆ ಇದೆ. ಈ ಬಗ್ಗೆ ನಾವು ಈಗಾಗಲೇ ನಾವು ಸಭೆ ನಡೆಸಿದ್ದೇವೆ. ವಿಡಿಯೋ ಮಾಡಿರೋದು ವಿಡಿಯೋ ಬಿಟ್ಟಿರೋದು ಎರಡು ತಪ್ಪು. ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಾದ ಸರ್ಕಾರ ಅವರನ್ನು ಬೀದಿಗೆ ತಂದಿದೆ. ಪೆನ್‌ಡ್ರೈವ್ ಹಂಚಿರೋದು ಯಾರು ಎಂದು ಪತ್ತೆ ಹಚ್ಚಬೇಕು. ಹೆಣ್ಣು ಮಕ್ಕಳನ್ನು ಬ್ಲರ್ ಮಾಡದೇ ವೀಡಿಯೋ ಹರಿ ಬಿಟ್ಟಿದ್ದಾರೆ. ಹೆಣ್ಣು ಮಕ್ಕಳ ಮರ್ಯಾದೆ ಏನ್ ಆಗುತ್ತೆ? ಅವರ ಕುಟುಂಬದ ಗತಿ ಏನು? ಹೆಣ್ಣು ಮಕ್ಕಳ ಜೀವಕ್ಕೆ ಅಪಾಯ ಬಂದರೆ ಯಾರು ಜವಾಬ್ದಾರಿ? ಎಂದು ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ:
ಇದೇ ವೇಳೆ ಚುನಾವಣೆ ಕುರಿತು ಮಾತನಾಡಿದ ನಿಖಿಲ್, ಮಂಡ್ಯದಲ್ಲಿ ಕುಮಾರಣ್ಣ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ. ಕುಮಾರಣ್ಣರಿಗೆ ಕೇಂದ್ರ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕದನದೊಳ್ ಕೊಹ್ಲಿ ಕೆಣಕಿ ಉಳಿದವರುಂಟೇ – ಐಪಿಎಲ್‌ನಲ್ಲಿ ಗನ್‌ಶೂಟ್ ಕದನ – ಕಲಾಶ್ ನಿಕಾವೋಗೆ ಹೋಲಿಸಿ ಟ್ರೆಂಡ್!
ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ. ದೇಶದ ರಕ್ಷಣೆ, ಅಭಿವೃದ್ಧಿ ವಿಚಾರದಲ್ಲಿ ಅವರು ಮಾಡಿದ ಕೆಲಸ ಗೆಲುವಿಗೆ ಕಾರಣವಾಗಲಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳ ಗೆಲುವು ಖಚಿತ. ಮಂಡ್ಯದಲ್ಲಿ ಕುಮಾರಣ್ಣ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ. ರಾಜ್ಯ ಕಟ್ಟಲು, ಕುಮಾರಣ್ಣರ ರೈತ ಕಾಳಜಿ ಗಮನಿಸಿ ರಾಷ್ಟ್ರೀಯ ನಾಯಕರು ಶಕ್ತಿ ತುಂಬುತ್ತಾರೆ ಎಂದು ನಂಬಿಕೆ ಎಂದಿದ್ದಾರೆ. ಇದೇ ವೇಳೆ ಚುನಾವಣೆಯಲ್ಲಿ ದುಡಿದ ಜೆಡಿಎಸ್-ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.