ನಿಖಿಲ್‌ ಸೋಲಿನಿಂದ ಬೇಸರ – ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ!

Public TV
1 Min Read
Nikhil Kumaraswamy 2

– ಕಾರ್ಯಕರ್ತರು, ಅಭಿಮಾನಿಗಳಿಗೆ ಧೈರ್ಯ ಹೇಳಿದ ನಿಖಿಲ್‌

ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಸೋಲಿನಿಂದ ಕುಂದಿದ ಅಭಿಮಾನಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

Channapatna By Poll

ಚನ್ನಪಟ್ಟಣದ (Channapatna) ಶ್ರೀರಾಂಪುರ ಗ್ರಾಮದ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ ನಿಖಿಲ್‌ ಅಭಿಮಾನಿ (Nikhil fan). ಕಳೆದ 15 ವರ್ಷಗಳಿಂದ ಜೆಡಿಎಸ್‌ ಕಾರ್ಯಕರ್ತನಾಗಿರುವ ಮಂಜುನಾಥ್‌, ನಿಖಿಲ್‌ ಅಪ್ಪಟ ಅಭಿಮಾನಿಯಾಗಿದ್ದರು, ಹೀಗಾಗಿ ನಿಖಿಲ್‌ ಸೋಲಿನಿಂದ ಬೇಸರಗೊಂಡು, ವಿಷ ಸೇವಿಸಿದ್ದರು. ಬಳಿಕ ಅವರನ್ನ ಮಂಡ್ಯದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದನ್ನೂ ಓದಿ: ನಿನ್ನ ನೋಡ್ಬೇಕು ಬಾ ಅಂತ ಕರೆಸಿ ಪ್ರಿಯತಮೆಯಿಂದ್ಲೇ ಪ್ರಿಯಕರನ ಕಿಡ್ನ್ಯಾಪ್‌, 5 ಲಕ್ಷ ಸುಲಿಗೆ!

ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ ಮಂಜುನಾಥ್ ಮನೆಗೆ ಇಂದು ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ, ಆರೋಗ್ಯ ವಿಚಾರಿಸಲಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಒಂದೇ ದಿನ 64 ಕೋಟಿ ಮತ ಎಣಿಕೆ – ಮಸ್ಕ್‌ ರಿಯಾಕ್ಷನ್‌ ಏನು?

ಕಾರ್ಯಕರ್ತರಿಗೆ ಧೈರ್ಯ ಹೇಳಿದ ನಿಖಿಲ್‌:
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿಖಿಲ್‌, ಬೆಳಗ್ಗೆ 7 ಗಂಟೆ ಸುಮಾರಿಗೆ ಮಂಜುನಾಥ್ ವಿಚಾರ ಗೊತ್ತಾಯ್ತು. ಚುನಾವಣಾ ಏರುಪೇರು ಇದ್ದೇ ಇರುತ್ತೆ. ಆದರೆ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಇಂಥ ಸಂದಿಗ್ಧ ಪರಿಸ್ಥಿತಿಗೆ ನಿಮ್ಮ ಕುಟುಂಬವನ್ನ ದೂಡಬೇಡಿ. ಸೋಲು ಗೆಲುವು ಇದ್ದಿದ್ದೇ, ದಯವಿಟ್ಟು ಇಂತಹ ಕೆಲಸಗಳಿಗೆ ಮುಂದಾಗಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಉತ್ತರ ಪ್ರದೇಶ | ಜಾಮಾ ಮಸೀದಿ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ

Share This Article