-ನಿಖಿಲ್ ಗೆಲುವಿನ ‘ಬೇಸಾಯ’
ಬೆಂಗಳೂರು: ಸೋತರು ಗೆದ್ದರು ಮಂಡ್ಯ ಜನರ ಸೇವೆ ಮಾಡುತ್ತೀನಿ. ಮಂಡ್ಯದಲ್ಲಿ ಜಮೀನು ತೆಗೆದುಕೊಂಡು ತೋಟ ಮಾಡುತ್ತೀನಿ, ಮನೆ ಕಟ್ಟೋವರೆಗೆ ಕಾಯಲ್ಲ ಶೆಡ್ಡನಲ್ಲೇ ಇರುತ್ತೀನಿ ಎಂದಿದ್ದ ನಿಖಿಲ್ ಎಲ್ಲಿ? ಇಂತಹದೊಂದು ಪ್ರಶ್ನೆ ಮಂಡ್ಯ ವಲಯದಲ್ಲಿ ಕೇಳುತ್ತಿದೆ.
ಇದೀಗ ನಿಖಿಲ್ ಸೋತ ಕಡೆಯೇ ಗೆಲುವಿನ `ಬೇಸಾಯ’ ಮಾಡಲು ಮುಂದಾಗಿದ್ದು, ಅಜ್ಜ ಮಾಜಿ ಪ್ರಧಾನಿ ದೇವೇಗೌಡರಂತೆ ಮಣ್ಣಿನ ಮಗನಾಗಲು ಮೊಮ್ಮಗ ನಿಖಿಲ್ ಹೊರಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಂದರೆ ನಿಖಿಲ್ ಮಂಡ್ಯದಲ್ಲಿ ಕೃಷಿ ಮಾಡಲು ಮುಂದಾಗಿದ್ದಾರೆ.
Advertisement
Advertisement
ನಿಖಿಲ್ ಮಂಡ್ಯದಲ್ಲಿ ಕೃಷಿ ಭೂಮಿ ನೋಡುತ್ತಿದ್ದಾರೆ. ಈಗಾಗಲೇ ನಾಲ್ಕಾರು ಕಡೆ ಭೇಟಿ ಕೊಟ್ಟು ಜಮೀನು ನೋಡಿದ್ದಾರೆ. ಅದರಲ್ಲಿ ಒಂದೆರಡು ಜಮೀನು ನಿಖಿಲ್ ಮನಸ್ಸಿಗೂ ಹಿಡಿಸಿದೆ. ಆದ್ದರಿಂದ ಆದಷ್ಟು ಬೇಗ ಒಂದು ಜಮೀನನ್ನ ಅಂತಿಮ ಪಡಿಸಿ ಖರೀದಿ ಮಾಡುತ್ತಾರೆ ಎಂದು ನಿಖಿಲ್ ಬೆಂಬಲಿಗರು ಹಾಗೂ ಜೆಡಿಎಸ್ ಮುಖಂಡರು ಹೇಳುತ್ತಿದ್ದಾರೆ.
Advertisement
ಮತ್ತೊಂದೆಡೆ ನಿಖಿಲ್ ಕುಮಾರಸ್ವಾಮಿ ಸೋತ ಮಂಡ್ಯ ನೆಲದಲ್ಲೇ ಗೆಲುವು ಕಾಣಲು ಪ್ರತಿಜ್ಞೆ ಮಾಡಿದ್ದು, ಆಂಧ್ರ ಪ್ರದೇಶದಲ್ಲಿ ನಡೆದ ಜಗನ್ ಮಾದರಿ ಪಾದಯಾತ್ರೆಗೆ ನಿಖಿಲ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಮಂಡ್ಯದಿಂದಲೇ ಪಾದಯಾತ್ರೆಯನ್ನ ಆರಂಭಿಸಿ ಪಕ್ಷ ಸಂಘಟನೆಗೂ ಪ್ಲಾನ್ ಮಾಡಲಾಗಿದೆ. ಈ ಕುರಿತು ಈಗಾಗಲೇ ದೇವೇಗೌಡರು ಕುಟುಂಬದವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಒಂದೆಡೆ ಅಪ್ಪ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಇನ್ನೊಂದು ಕಡೆ ಮಗ ನಿಖಿಲ್ ಪಾದಯಾತ್ರೆಯೊಂದಿಗೆ ದೇವೇಗೌಡರು ಮತ್ತೆ ತಮ್ಮ ಪಕ್ಷ ಕಟ್ಟಲು ಶುರು ಮಾಡಲಿದ್ದಾರೆ. ಜೊತೆಗೆ ಎರಡು ಕಾರ್ಯಕ್ರಮಗಳೊಂದಿಗೆ ಜೆಡಿಎಸ್‍ಗೆ ಶಕ್ತಿ ತುಂಬಲು ದೇವೇಗೌಡರಿಂದ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]