ಒಟ್ಟಾವಾ: ಖಲಿಸ್ತಾನಿ ಭಯೋತ್ಪಾದಕರು ಕೆನಡಾ ಭದ್ರತಾ ಗುಪ್ತಚರ ಸೇವೆಯ (CSIS) ಆಸ್ತಿ ಎಂದು ಕೆನಡಾದಲ್ಲಿರುವ (Canada) ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ (Sanjay Kumar Verma) ಸ್ಫೋಟಕ ಆರೋಪ ಮಾಡಿದ್ದಾರೆ.
ತನ್ನ ವಿರುದ್ಧ ಟ್ರುಡೋ ಸರ್ಕಾರ (Justin Trudeau Govt) ಆರೋಪ ಮಾಡಿದ ಒಂದು ವಾರದ ನಂತರ ಸಂಜಯ್ ಕುಮಾರ್ ವರ್ಮಾ ಅವರು ಕೆನಡಾ ಮೂಲದ ಸಿಟಿವಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಕೆನಡಾ ಸರ್ಕಾರವು ಖಲಿಸ್ತಾನಿ ಉಗ್ರರನ್ನು ಪ್ರೋತ್ಸಾಹಿಸುತ್ತಿದೆ ಎಂದು ನೇರವಾಗಿಯೇ ಹೇಳಿದರು.
Advertisement
ಭಾರತೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಸವಾಲೆಸೆಯಲು ಪ್ರಯತ್ನಿಸುತ್ತಿರುವವರೊಂದಿಗೆ ಸ್ನೇಹಯುತವಾಗಿ ನಡೆದುಕೊಳ್ಳುವ ಮೊದಲು ಕೆನಡಾ ಸರ್ಕಾರ ನಮ್ಮ ಮೂಲ ಕಾಳಜಿಯನ್ನು ಪ್ರಾಮಾಣಿಕವಾಗಿ ಅರ್ಥಮಾಡಿಕೊಳ್ಳಬೇಕೆಂದು ತಿಳಿಸಿದರು.
Advertisement
Advertisement
“There will be emotions on both sides … which may impact a few of those deals, but larger picture is that I don’t see much impact on non-political bilateral relations,” said expelled Indian High Commissioner Sanjay Kumar Verma of the current rupture in Canada-India relations. pic.twitter.com/oMD3fgBgE8
— CTV Question Period (@ctvqp) October 20, 2024
ಈ ಖಲಿಸ್ತಾನಿ ಉಗ್ರಗಾಮಿಗಳು ಭಾರತೀಯ ಪ್ರಜೆಗಳಲ್ಲ, ಅವರು ಕೆನಡಾದ ಪ್ರಜೆಗಳು ಮತ್ತು ಯಾವುದೇ ದೇಶವು ತನ್ನ ನಾಗರಿಕರಿಗೆ ಮತ್ತೊಂದು ರಾಷ್ಟ್ರದ ಸಾರ್ವಭೌಮತ್ವವನ್ನು ಪ್ರಶ್ನಿಸಲು ಅವಕಾಶ ನೀಡಬಾರದು ಎಂದು ಅವರು ಹೇಳಿದರು. ಇದನ್ನೂ ಓದಿ: ಚನ್ನಪಟ್ಟಣಕ್ಕೆ ಡಿಕೆ ಸುರೇಶ್, ಸಂಡೂರಿಗೆ ಅನ್ನಪೂರ್ಣ – ಶೀಘ್ರವೇ ಅಧಿಕೃತ ಪ್ರಕಟಣೆ ಸಾಧ್ಯತೆ
Advertisement
ಖಾಲಿಸ್ತಾನಿ ಭಯೋತ್ಪಾದಕರ ಹತ್ಯೆಗೆ ಸಂಬಂಧಿಸಿದಂತೆ ತನ್ನ ಮೇಲೆ ಹೊರಿಸಲಾದ ಎಲ್ಲಾ ಆರೋಪಗಳನ್ನು ನಿರಾಕರಿಸಿದ ಅವರು, ಎಲ್ಲಾ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ ಎಂದರು.
ಭಾತದ ಹೈಕಮಿಷನರ್ ಆಗಿರುವ ನಾನು ಅಂತಹ ಯಾವುದೇ ಕೆಲಸ ಮಾಡಿಲ್ಲ. ಕೆನಡಾದಲ್ಲಿ ಖಲಿಸ್ತಾನಿ ಪರ ಅಂಶಗಳನ್ನು ಮೇಲ್ವಿಚಾರಣೆ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ. ನಮ್ಮ ತಂಡವು ಮುಕ್ತ ಮೂಲಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತದೆ. ನಾವು ಪತ್ರಿಕೆಗಳನ್ನು ಓದುತ್ತೇವೆ, ಅವರ ಹೇಳಿಕೆಗಳನ್ನು ನಾವು ಗಮನಿಸುತ್ತೇವೆ ಎಂದು ವಿವರಿಸಿದರು.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸರ್ರೆ ನಗರದ ಗುರುದ್ವಾರದ ಬಳಿ ಖಲಿಸ್ತಾನಿ ಉಗ್ರ ನಿಜ್ಜಾರ್ ಆಗುಂತಕರ ಗುಂಡೇಟಿಗೆ ಬಲಿಯಾಗಿದ್ದ. ಈತನ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸಿದ ಬೆನ್ನಲ್ಲೇ ಎರಡು ದೇಶಗಳ ಮಧ್ಯೆ ರಾಜತಾಂತ್ರಿಕ ಸಮಸ್ಯೆ ಸೃಷ್ಟಿಯಾಗಿತ್ತು. ನಂತರ ಮಾತುಕತೆಯ ಮೂಲಕ ಎರಡು ದೇಶಗಳ ನಡುವಿನ ಬಿಕ್ಕಟ್ಟು ಬಗೆ ಹರಿದಿತ್ತು.
ಘಟನೆ ನಡೆದು ಒಂದು ವರ್ಷ ಕಳೆದ ಬಳಿಕ ಈ ವಿಚಾರವನ್ನು ಮತ್ತೊಮ್ಮೆ ಪ್ರಸ್ತಾಪಿಸಿ ಕೆನಡಾ ಭಾರತದ ಕೆಂಗಣ್ಣಿದೆ ಗುರಿಯಾಗಿದೆ. ಹತ್ಯೆಯ ಹಿಂದೆ ಭಾರತೀಯ ರಾಯಭಾರಿ ಸಂಜಯ್‌ಕುಮಾರ್ ವರ್ಮಾ ಅವರ ಪಾತ್ರವಿದ್ದು, ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಹೇಳುವ ಮೂಲಕ ಜಸ್ಟಿನ್ ಟ್ರುಡೋ ಸರ್ಕಾರ ಚೇಷ್ಟೆ ಮುಂದುವರಿಸಿದೆ.