ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಹರ್ದೀಪ್ ಸಿಂಗ್ ನಿಜ್ಜರ್‌ನ (Hardeep Singh Nijjar) ಹತ್ಯೆ ಭಾರತ ಮತ್ತು ಕೆನಡಾದ (Canada) ನಡುವೆ ಭಾರೀ ರಾಜತಾಂತ್ರಿಕ ಬಿರುಕಿಗೆ ಕಾರಣವಾಗಿದೆ. ನಿಜ್ಜರ್ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ, ಭಾರತದಲ್ಲಿನ ದಾಳಿಗಳಿಗೆ ಹಣ ಸಹಾಯ ಮಾಡುವಲ್ಲಿ ಸಕ್ರಿಯನಾಗಿದ್ದ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು (Indian Intelligence Agency) ಸಿದ್ಧಪಡಿಸಿದ ದಾಖಲೆಗಳು ತಿಳಿಸಿವೆ.
ನಿಜ್ಜರ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಯ ಸಹಾಯದಿಂದ ಪಾಕಿಸ್ತಾನದಲ್ಲಿ ತರಬೇತಿ ಪಡೆದು ಮತ್ತು ದೇಶದ ಇತರ ಖಲಿಸ್ತಾನಿ ನಾಯಕರೊಂದಿಗೆ ಸಂಪರ್ಕವನ್ನು ಹೊಂದಿದ್ದ. ಆತ ಪಂಜಾಬ್ ಮತ್ತು ಭಾರತದ ಇತರ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ಮಾಡಿದ್ದ ಎಂದು ದಾಖಲೆಯಲ್ಲಿ ಉಲ್ಲೇಖವಾಗಿದೆ.
Advertisement
Advertisement
ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ ಹಾಗೂ ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (KTF) ಮುಖ್ಯಸ್ಥನಾಗಿದ್ದ ನಿಜ್ಜರ್‌ನನ್ನು ಜೂನ್ 18 ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ಗುರುದ್ವಾರದ ಹೊರಗೆ ಇಬ್ಬರು ಅಪರಿಚಿತರು ಗುಂಡಿಕ್ಕಿ ಕೊಂದರು.
Advertisement
ಗುಪ್ತಚರ ದಾಖಲೆಯಲ್ಲೇನಿದೆ?: ನಿಜ್ಜರ್ ಖಲಿಸ್ತಾನಿ ಚಟುವಟಿಕೆಗಳನ್ನು ಯಾವುದೇ ಮುಲಾಜಿಲ್ಲದೆ ನಡೆಸುತ್ತಿದ್ದ. ಆತ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ಆಯೋಜಿಸಿ, ಅಲ್ಲಿ ಆತ ಎಕೆ-47, ಸ್ನೈಪರ್ ರೈಫಲ್‌ಗಳು ಮತ್ತು ಪಿಸ್ತೂಲ್‌ಗಳಂತಹ ಬಂದೂಕುಗಳನ್ನು ಬಳಸಲು ತರಬೇತಿ ನೀಡುತ್ತಿದ್ದ.
Advertisement
1996 ರಲ್ಲಿ ರವಿ ಶರ್ಮಾ ಎಂಬ ಹೆಸರಿನ ನಕಲಿ ಪಾಸ್‌ಪೋರ್ಟ್ ಬಳಸಿ ನಿಜ್ಜರ್ ಕೆನಡಾಕ್ಕೆ ಪರಾರಿಯಾಗಿದ್ದ ಮತ್ತು ಟ್ರಕ್ ಡ್ರೈವರ್ ಮತ್ತು ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ. ಆತ ಕೆನಡಾದಲ್ಲಿ ಹಿಂಸಾತ್ಮಕ ಭಾರತ ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸಿದ್ದ ಮಾತ್ರವಲ್ಲದೇ ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಕಾವೇರಿ ಕಿಚ್ಚು – ಬೆಂಗಳೂರು ಬಂದ್‌ಗೆ ಸಿದ್ಧತೆ
ಕೆನಡಾದಲ್ಲಿ ಸ್ಥಳೀಯ ಗುರುದ್ವಾರಗಳು ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ನಿಷೇಧಿಸುವಂತೆ ಆತ ಕರೆ ನೀಡಿದ್ದ. ಆತನಿಗೆ ಕೆನಡಾಗೆ ವಲಸೆ ಹೋಗಲು ಸಹಾಯ ಮಾಡಿದ್ದ ಮಹಿಳೆಯನ್ನು ಮದುವೆಯಾಗಿದ್ದ. ಆದರೆ ಆ ಮಹಿಳೆ 1997ರಲ್ಲಿ ಕೆನಡಾಕ್ಕೆ ಆಗಮಿಸಿ ಬೇರೊಬ್ಬ ಪುರುಷನನ್ನು ವಿವಾಹವಾಗಿದ್ದಾಳೆ ಎಂಬುದನ್ನು ಅಧಿಕಾರಿಗಳು ಗಮನಿಸಿದ್ದಾರೆ ಹಾಗೂ ಆಕೆ ತನ್ನ ಅನುಕೂಲಕ್ಕಾಗಿ ಮದುವೆ ಹಕ್ಕನ್ನು ತಿರಸ್ಕರಿಸಿದ್ದಾಳೆ.
2001 ರಲ್ಲಿ ನಿಜ್ಜರ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ, ಸೋತಿದ್ದ. ಆತ ಬಳಿಕ 2007 ರಲ್ಲಿ ಕೆನಡಾದ ಪ್ರಜೆಯಾದ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಬೆಂಬಲಿಸಿ ಮಂಡ್ಯ ಚಿತ್ರಮಂದಿರಗಳು ಬಂದ್
Web Stories