ಬೆಂಗಳೂರು: ನಗರದ ನೈಟ್ ಕಲರ್ ಫುಲ್ ನಶೆಯ ಲೈಫ್ ಗೆ ಬ್ರೇಕ್ ಬಿದ್ದಿದೆ. ವೀಕೆಂಡ್ ಮಸ್ತಿಯಲ್ಲಿ ಓಲಾಡೋ ಎಂಜಿ ರೋಡ್, ಬ್ರಿಗೇಡ್, ಹಲಸೂರು ಸೇರಿದಂತೆ ಸಿಟಿ ಸೆಂಟರ್ ಗಳಲ್ಲಿ ಇರುವ ಬಾರ್, ಪಬ್, ಸ್ಟಾರ್ ಹೋಟೆಲ್ ನ ಮದ್ಯದಂಗಡಿಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರೋದ್ರಿಂದ ಅಬಕಾರಿ ಇಲಾಖೆ ಬೀಗ ಜಡಿದಿದೆ.
Advertisement
ವಿಚಿತ್ರ ಅಂದ್ರೆ ಸರ್ಕಾರ ಈ ಹಿಂದೆಯೇ ಅದನ್ನು ಡಿನೋಟಿಫೈ ಮಾಡಿ ಸ್ಥಳೀಯ ರಸ್ತೆ ಅಥವಾ ರಾಜ್ಯ ರಸ್ತೆ ಅಂತಾ ಮಾಡಬೇಕಾಗಿತ್ತು. ಆದ್ರೆ ರಾಷ್ಟ್ರೀಯ ಹೆದ್ದಾರಿಗೆ ಕೇಂದ್ರ ನೀಡ್ತಿದ್ದ ಅನುದಾನದ ಆಸೆಗೆ ಬಿದ್ದು ರಾಜ್ಯಸರ್ಕಾರ ಸುಮ್ಮನಿದ್ದು ಈಗ ಭರ್ಜರಿ ಏಟು ತಿಂದಿದೆ. ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕ್ಲಬ್ ಗಳಿಗೆ ವಿನಾಯ್ತಿ ನೀಡಿದ್ದು ಬಾರ್ ಮಾಲೀಕರ ಕೆಂಗಣ್ಣಿಗೆ ಕಾರಣವಾಗಿದೆ.
Advertisement
ಇದನ್ನೂ ಓದಿ:
Advertisement
Advertisement
ಮಧ್ಯರಾತ್ರಿಯಿಂದಲೇ ಆಪರೇಷನ್ ಪ್ರಾರಂಭವಾಗೋದ್ರಿಂದ ಆಯಾಯ ಏರಿಯಾದ ಕಾರ್ಪೋರೇಟರ್, ಎಂ ಎಲ್‍ಎ, ರಾಜಕೀಯ ಮುಖಂಡರು ಬಾರ್, ಸ್ಟಾರ್ ಹೋಟೆಲ್ ಬಾರ್ ನ್ನು ಉಳಿಸಲು ಕೊನೆಕ್ಷಣದ ಕಸರತ್ತು ಮಾಡಿದ್ದಾರೆ ಎನ್ನಲಾಗಿದೆ. ಹೆದ್ದಾರಿ ಹಾಗೂ ದಂಡದ ವಿಚಾರದಲ್ಲಿ ನಾಳೆ ಬಂದ್ ಆಗಲಿದ್ದು ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 500 ಬಾರ್‍ಗಳು ಮುಚ್ಚಲಿವೆ ಎಂಬುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಜಿಎಸ್‍ಟಿಯಿಂದ ಯಾವ್ಯಾವ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಪೂರ್ಣ ಮಾಹಿತಿ