ಲಕ್ನೋ: ಕೊರೊನಾ ರೂಪಾಂತರಿ ಓಮಿಕ್ರಾನ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಉತ್ತರ ಪ್ರದೇಶವು ರಾತ್ರಿ ಕರ್ಫ್ಯೂ ಕ್ರಮವನ್ನು ಜಾರಿ ಮಾಡಿದೆ.
ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 11 ಗಂಟೆಯಿAದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರಲಿದೆ. ಮದುವೆ ಸಮಾರಂಭಗಳಿಗೆ 200ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
Advertisement
UP Govt: Night curfew to be put in place from December 25 from 11 pm-5am . Not more than 200 people allowed in weddings pic.twitter.com/bHs8Ih7urW
— ANI UP/Uttarakhand (@ANINewsUP) December 24, 2021
Advertisement
ಹೊರ ರಾಜ್ಯದಿಂದ ಬರುವ ಜನರನ್ನು ಪರೀಕ್ಷಿಸಿ, ಅವರ ಆರೋಗ್ಯದ ಮೇಲೆ ನಿಗಾ ಇಡಬೇಕು. ಅಗತ್ಯವಿದ್ದರೆ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು ಅಥವಾ ಅವರನ್ನು ಕ್ವಾರಂಟೈನ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಅಗತ್ಯತೆ ಬಗ್ಗೆ ಅಧ್ಯಯನ ನಡೆಸಲು ಮೋದಿ ಸೂಚನೆ
Advertisement
Advertisement
ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವಂತಹ ಸಲಹೆಗಳ ಮೇರೆಗೆ ರಾಜ್ಯದಲ್ಲಿ ಸೂಕ್ತ ನಿರ್ಬಂಧನೆಗಳನ್ನು ಹೇರಲಾಗಿದೆ. ಕೋವಿಡ್-19ರ ವಿರುದ್ಧ ನಮ್ಮ ಹೋರಾಟ ಮುಗಿದಿಲ್ಲ ಎಂದು ಸ್ಪಷ್ಪಪಡಿಸಿದರು.
ಉತ್ತರ ಪ್ರದೇಶದಲ್ಲಿ ಗುರುವಾರ 31 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು 2 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಚಲಿಸುತ್ತಿದ್ದ ಹಡಗಿನಲ್ಲಿ ಬೆಂಕಿ – 32 ಮಂದಿ ದುರ್ಮರಣ