ನವದೆಹಲಿ: ನೈಜೀರಿಯಾದ ವ್ಯಕ್ತಿಯೊಬ್ಬ (Nigerian Man) ದೆಹಲಿಯಲ್ಲಿ (Delhi) ಹುಚ್ಚಾಟ ನಡೆಸಿ, ಕಟ್ಟಡದ 2ನೇ ಮಹಡಿಯಿಂದ ಜಿಗಿದಿರುವ ಘಟನೆ ನಡೆದಿದೆ. ವ್ಯಕ್ತಿ ತನ್ನ ಪೋಷಕರನ್ನು ಕಳೆದುಕೊಂಡ ವಿಚಾರವನ್ನು ತಿಳಿದ ನಂತರ ಖಿನ್ನತೆಗೆ ಒಳಗಾಗಿ ಕಟ್ಟಡದಿಂದ ಜಿಗಿದಿದ್ದಾನೆ ಎನ್ನಲಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ದೆಹಲಿಯ ನಿಹಾಲ್ ವಿಹಾರ್ ಪ್ರದೇಶದ ವಸತಿ ಕಟ್ಟಡದ 2ನೇ ಮಹಡಿಯಿಂದ ವ್ಯಕ್ತಿ ಜಿಗಿದಿದ್ದಾನೆ. ಆತನನ್ನು ಎನ್ಡಿನೊಜುವೋ (37) ಎಂದು ಗುರುತಿಸಲಾಗಿದೆ. ಆತ ಕಟ್ಟಡದಿಂದ (Building) ಜಿಗಿಯುವುದಕ್ಕೂ ಮೊದಲು ಬಾಲ್ಕನಿಯ ರೇಲಿಂಗ್ನಲ್ಲಿ ನೇತಾಡಿದ್ದಾನೆ. ಸುತ್ತ ಮುತ್ತಲಿದ್ದ ಜನ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಆತ ಶಾಂತವಾಗದೇ ಗಲಾಟೆ ಮಾಡಿದ್ದಾನೆ. ಇದನ್ನೂ ಓದಿ: ಸಾರಸ್ ಕೊಕ್ಕರೆಯನ್ನು ಸಾಕಿದ್ದ ವ್ಯಕ್ತಿಗೆ ಅರಣ್ಯ ಇಲಾಖೆ ನೋಟಿಸ್
Advertisement
Advertisement
ಕೆಲ ಹೊತ್ತು ಬಾಲ್ಕನಿಯ ರೇಲಿಂಗ್ನಲ್ಲಿ ನೇತಾಡಿಕೊಂಡು ಗಲಾಟೆ ಮಾಡಿದ ವ್ಯಕ್ತಿ ಏಕಾಏಕಿ 2ನೇ ಮಹಡಿಯಿಂದ ಜಿಗಿದಿದ್ದಾನೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ, ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
Advertisement
ನೈಜೀರಿಯಾದಲ್ಲಿ ತನ್ನ ಹೆತ್ತವರು ಅಪಘಾತದಲ್ಲಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಪಡೆದ ಆತ ಕಟ್ಟಡದಿಂದ ಜಿಗಿದಿರುವುದಾಗ ಪೊಲೀಸರ ಬಳಿ ತಿಳಿಸಿದ್ದಾನೆ. ಪೋಷಕರ ಸಾವಿನ ಬಗ್ಗೆ ತಿಳಿದ ಬಳಿಕ ಆತ ಖಿನ್ನತೆಗೆ ಒಳಗಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕಾಲಿನ ಮೂಳೆ ಮುರಿತವಾಗಿದೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಾಲಕಿ ಹತ್ಯೆಗೈದ ಅಪರಾಧಿಗೆ ನೂರು ವರ್ಷ ಜೈಲು