ನವದೆಹಲಿ: ಮಾರಕಾಸ್ತ್ರಗಳನ್ನು ಹಿಡಿದು ಸುಮಾರು 10ಕ್ಕೂ ಹೆಚ್ಚು ನೈಜೀರಿಯಾ ಪ್ರಜೆಗಳು ದೆಹಲಿಯ ಆಸ್ಪತ್ರೆಯೊಂದರಲ್ಲಿ ಗ್ಯಾಂಗ್‍ವಾರ್ ನಡೆಸಿರೋ ಘಟನೆ ನಡೆದಿದೆ.
ಶನಿವಾರದಂದು ಈ ಘಟನೆ ನಡೆದಿದ್ದು, ನೈಜೀರಿಯಾ ಪ್ರಜೆಗಳ ಗಲಾಟೆಗೆ ಹೆದರಿ ಆಸ್ಪತ್ರೆ ಸಿಬ್ಬಂದಿ ಟಾಯ್ಲೆಟ್ ಹಾಗೂ ಮೇಲ್ಮಹಡಿಗಳಲ್ಲಿ ಅವಿತು ಕುಳಿತಿದ್ದರು ಎಂದು ವರದಿಯಾಗಿದೆ. ಘಟನೆಯಲ್ಲಿ ಮೂವರು ನೈಜೀರಿಯನ್‍ಗಳಿಗೆ ಗಾಯವಾಗಿದ್ದು, ಸಾಕೇತ್‍ನ ಆಸ್ಪತ್ರೆಗೆ ಅವರು ಚಿಕಿತ್ಸೆಗೆಂದು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
Advertisement
Advertisement
ನೈಜೀರಿಯಾ ಪ್ರಜೆಗಳು ಮಾರಾಮಾರಿ ನಡೆಸುತ್ತಿರುವ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂರ್ನಾಲ್ಕು ಜನ ಮಾರಕಾಸ್ತ್ರ ಹಿಡಿದು ಹೊಡೆದಾಡುತ್ತಿದ್ದು ಬಾಗಿಲು ಮುರಿದು ನೆಲದ ಮೇಲೆ ಬಿದ್ದಿರೋದನ್ನ ವಿಡಿಯೋದಲ್ಲಿ ಕಾಣಬಹುದು.
Advertisement
Advertisement
ಎರಡು ಗುಂಪುಗಳು ಆಸ್ಪತ್ರೆಯ ರಿಸೆಪ್ಷನ್ ಬಳಿ ಸುಮಾರು 1 ಗಂಟೆ ಕಾಲ ಹೊಡೆದಾಡಿಕೊಂಡಿದ್ದಾರೆ. ಇವರನ್ನು ತಡೆಯಲು ಬಂದ ಸೆಕ್ಯುರಿಟಿ ಗಾರ್ಡ್ ಮೇಲೂ ಹಲ್ಲೆ ನಡೆದಿದ್ದು, ಗಾಯಗೊಂಡಿದ್ದಾರೆ. ಕ್ಲಿನಿಕ್‍ನ ನರ್ಸ್‍ಗಳು ಮತ್ತು ಇತರೆ ಸಿಬ್ಬಂದಿ ರೋಗಿಗಳಿದ್ದ ಮೇಲ್ಮಡಿಗೆ ಹೋಗಿ ಎಲ್ಲಾ ಬಾಗಿಲುಗಳ ಬೋಲ್ಟ್ ಹಾಕಿ ಬಂದ್ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ.
ಎರಡೂ ಗುಂಪು ಆಸ್ಪತ್ರೆಯನ್ನು ಜಖಂಗೊಳಿಸಿ ಪೊಲೀಸರು ಬರುವ ಮುಂಚೆಯೇ ಅಲ್ಲಿಂದ ಪರಾರಿಯಾಗಿದ್ದಾರೆ.