ನಿಯಾಮಿ: ಪಶ್ಚಿಮ ಆಫ್ರಿಕಾದ ದೇಶವಾದ ನೈಜರ್ನಲ್ಲಿ (Niger) ಸೇನೆ ಕ್ಷಿಪ್ರಕ್ರಾಂತಿ (Military Coup) ನಡೆಸಿ ಅಧ್ಯಕ್ಷ ಮಹ್ಮದ್ ಬಜೌಮ್ರನ್ನು (Mohamed Bazoum) ಅವರನ್ನು ಬಂಧಿಸಿದೆ.
ಸರ್ಕಾರವನ್ನು ಪತನ ಮಾಡಿದ್ದೇವೆ. ದೇಶದ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಅಮಾನತಿನಲ್ಲಿ ಇಟ್ಟಿದ್ದೇವೆ ಎಂದು ಕರ್ನಲ್ ಮೇಜರ್ ಅಮದೌ ಅಬ್ದ್ರಮಾನೆ ಹೇಳಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳು ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರುತ್ತೆ?
Advertisement
Advertisement
ಗಡಿಗಳನ್ನು ಬಂದ್ ಮಾಡಲಾಗಿದೆ. ಇದು ನಮ್ಮ ದೇಶದ ಆಂತರಿಕ ವಿಚಾರ. ಪಶ್ಚಿಮ ದೇಶಗಳು ಮೂಗು ತೂರಿಸುವಂತಿಲ್ಲ ಎಂದು ಸೇನೆ ಎಚ್ಚರಿಕೆ ನೀಡಿದೆ. ನೈಜರ್ ಕ್ಷಿಪ್ರಕ್ರಾಂತಿಯನ್ನು ವಿಶ್ವಸಂಸ್ಥೆ ಖಂಡಿಸಿದೆ.
Advertisement
ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅಮದೌ ಅಬ್ದ್ರಮಾನೆ, ಅಧ್ಯಕ್ಷ ಬಜೌಮ್ ಅವರ ಆಡಳಿತವನ್ನು ಕೊನೆಗೊಳಿಸಲು ಸೇನೆ ನಿರ್ಧರಿಸಿದೆ. ಮುಂದಿನ ಸೂಚನೆ ಬರುವವರೆಗೆ ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ವಿದೇಶಕ್ಕೆ ಭಾರತದ ಬ್ರಹ್ಮೋಸ್ – ಶಸ್ತ್ರಾಸ್ತ ರಫ್ತು ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?
Advertisement
Web Stories