ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಬಹುತೇಕ ಎಲ್ಲರೂ ಮನೆಯಲ್ಲೇ ಕಾಲ ಕಳೆಯುತ್ತಿದ್ದು, ಕೆಲವರು ತಮ್ಮ ಹವ್ಯಾಸಗಳತ್ತ ಗಮನಹರಿಸಿದರೆ, ಇನ್ನೂ ಕೆಲವರು ಯಾವುದೋ ಪೋಸ್ಟ್ ಗೆ ಬೇಕಾಬಿಟ್ಟಿಯಾಗಿ ಕಮೆಂಟ್ ಮಾಡುವುದು, ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಓಡಾಡುವುದನ್ನು ಮಾಡುತ್ತಿದ್ದಾರೆ. ಇನ್ನೂ ಹಲವರು ಸಹಾಯ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೇಕಾಬಿಟ್ಟಿಯಾಗಿ ಏನೇನೋ ಕಿತಾಪತಿ ಮಾಡುವವರಿಗೆ ನಟಿ ನಿಧಿ ಅಗರ್ವಾಲ್ ಕೆಲವೊಂದಿಷ್ಟು ಸಲಹೆ ನೀಡಿದ್ದಾರೆ.
Advertisement
ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವ ನಿಧಿ ಅಗರ್ವಾಲ್, ಲಾಕ್‍ಡೌನ್ ಪರಿಸ್ಥಿತಿಯನ್ನು ನೋಡುತ್ತಿದ್ದಾರೆ. ಕೆಲವರು ಮಾಡುತ್ತಿರುವ ಅನಗತ್ಯ ಪೋಸ್ಟ್ ಗಳು ಹಾಗೂ ಕಮೆಂಟ್‍ಗಳು, ಬೇಡವಾದ ಕೆಲಸಗಳನ್ನು ಸಹ ನೋಡುತ್ತಿದ್ದಾರೆ. ಇದರಿಂದ ಬೇಸತ್ತ ನಿಧಿ, ಈ ಕುರಿತು ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಪರಿಹಾರವನ್ನೂ ಸೂಚಿಸಿದ್ದಾರೆ.
Advertisement
Advertisement
ತುಂಬಾ ಜನ ಮನೆಯಲ್ಲೇ ಕುರಿತು ಬೇಡವಾದದ್ದನ್ನು ಹರಡುತ್ತಾರೆ. ಹೀಗಾಗಿ ಕೆಲವಂದಿಷ್ಟು ಚಟುವಟಿಕೆಗಳನ್ನು ನಾನಿಲ್ಲಿ ಪಟ್ಟಿ ಮಾಡಿದ್ದೇನೆ. ನೀವು ಬಿಡುವಾದಾಗಲೆಲ್ಲ ಇದರಲ್ಲಿ ನಿಮಗಿಷ್ಟವಾದದ್ದನ್ನು ಮಾಡಿ. ಯಾರೊಬ್ಬರ ಬದುಕಿನ ಪ್ರಯಾಣದ ಬಗ್ಗೆ ನಿಮಗೆ ತಿಳಿದಿಲ್ಲ. ಹೀಗಾಗಿ ನಾಲ್ಕು ಗೋಡೆಯ ಮಧ್ಯೆ ಕುಳಿತುಕೊಂಡು ಪೋಸ್ಟ್ ಮಾಡುವ ಮೊದಲು ಯೋಚಿಸಿ. ಅನಾಮಧೇಯರಾಗಿರುವುದು ಸೂಪರ್ ಪವರ್ ಅಲ್ಲ. ಬದಲಿಗೆ ಸಕಾರಾತ್ಮಕವಾಗಿ ಪರಿಣಾಮ ಬೀರುವುದೇ ನಿಜವಾದ ಸೂಪರ್ ಪವರ್ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ 12 ಚಟುವಟಿಕೆಗಳನ್ನು ಪಟ್ಟಿ ಮಾಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
Advertisement
A lot of ppl r sitting at home nd spreading hate.I have listed a few activities that u could do with ur free time.
U don’t know anybody’s journey so before u sit back and type nonsensical statements remember being anonymous is not a super power,but being a positive influence is. pic.twitter.com/iXLctfCqwz
— Nidhhi Agerwal (@AgerwalNidhhi) April 3, 2020
ಮನೆ ಸ್ವಚ್ಛಗೊಳಿಸಿ, ವ್ಯಾಯಾಮ-ಧ್ಯಾನ ಮಾಡಿ, ಚಿತ್ರ ಬರೆಯಿರಿ, ಅಡುಗೆ ಮಾಡಿ, ಪುಸ್ತಕ ಓದಿ, ಏನಾದರೂ ಬರೆಯಿರಿ-ಏನಾದರೂ ಕ್ರಿಯೇಟಿವಿಟಿ ಮಾಡಿ, ಸಾಕು ಪ್ರಾಣಿಗಳಿದ್ದರೆ ಅವುಗಳಿಗೆ ತರಬೇತಿ ನೀಡಿ, ಅವುಗಳೊಂದಿಗೆ ಕಾಲ ಕಳೆಯಿರಿ, ಮಿಸ್ ಮಾಡಿಕೊಂಡ ಸಿನಿಮಾ ಮತ್ತು ಕಾರ್ಯಕ್ರಮಗಳನ್ನು ನೋಡಿ, ಹೊಸ ಕೌಶಲ್ಯ ಹವ್ಯಾಸಗಳನ್ನು ಕಲಿಯಿರಿ, ಆನ್‍ಲೈನ್‍ನಲ್ಲಿ ಕೋರ್ಸ್ ಮಾಡಿ, ನಿಮ್ಮ ಕೆಲಸದ ಬಗೆಗಿನ ಪುಸ್ತಕಗಳನ್ನು ಓದಿ, ನೀವು ಕೆಲಸಕ್ಕೆ ಮರಳಿದ ನಂತರ ಸಹಾಯವಾಗುತ್ತದೆ. ಇನ್ನೂ ಅನೇಕ ಉತ್ತಮ ಕೆಲಸಗಳನ್ನು ಮಾಡಬಹುದು ಎಂದು ಹೇಳಿದ್ದಾರೆ.
ಸದ್ಯ ಜೇಮ್ಸ್ ಸಿನಿಮಾಗೆ ನಾಯಕಿಯಾಗಿ ನಿಧಿ ಅಗರ್ವಾಲ್ ಆಯ್ಕೆಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಕೊರೊನಾ ಅವಾಂತರ ಸೃಷ್ಟಿಯಾಗದಿದ್ದಲ್ಲಿ ಏಪ್ರಿಲ್ 1ರಿಂದ ಜೇಮ್ಸ್ ಶೂಟಿಂಗ್ ಆರಂಭವಾಗಬೇಕಿತ್ತು. ನಿರ್ದೇಶಕ ಚೇತನ್ ಕುಮಾರ್ ಪ್ರಿ ಪ್ರೊಡಕ್ಷನ್ ಕೆಲಸವನ್ನು ಸಹ ಮಾಡಿದ್ದಾರೆ. ಚಿತ್ರೀಕರಣ ಪ್ರಾರಂಭಿಸುವುದು ಮಾತ್ರ ಬಾಕಿ ಇದೆ. ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬಕ್ಕೆ ಜೇಮ್ಸ್ ಚಿತ್ರತಂಡದ ಮೋಷನ್ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ.
ನಿಧಿ ಅಗರ್ವಾಲ್ ಬೆಂಗಳೂರಿನಲ್ಲಿ ಬೆಳೆದ ಹುಡುಗಿಯಾಗಿದ್ದು, ಚಿತ್ರರಂಗಕ್ಕೆ ಕಾಲಿಟ್ಟು ಕೇವಲ ಮೂರ್ನಾಲ್ಕು ವರ್ಷಗಳಾಗಿವೆ. ನಿಧಿ ಬಾಲಿವುಡ್‍ನಿಂದಲೇ ಸಿನಿಮಾ ಪಯಣ ಆರಂಭಿಸಿದ್ದು, ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ವರ್ಷ ಬಿಡುಗಡೆಯಾಗಿದ್ದ ಅವರ ‘ಇಸ್ಮಾರ್ಟ್ ಶಂಕರ್’ ಚಿತ್ರ ಸೂಪರ್ ಹಿಟ್ ಆಗಿತ್ತು. ಇದಾದ ಬಳಿಕ ಕೆಲ ಚಿತ್ರಗಳಲ್ಲಿ ನಿಧಿ ನಟಿಸಿದ್ದಾರೆ.