ಶೂಟಿಂಗ್ ಸೆಟ್‍ನಲ್ಲಿ ಕಣ್ಣೀರಿಟ್ಟ ನಿಕ್

Public TV
1 Min Read
Nick Jonas Priyanka Chopra
NEW YORK, NY - SEPTEMBER 04: Nick Jonas and Priyanka Chopra seen at the 2018 US Open on September 4, 2018 in New York City. (Photo by Gotham/GC Images)

ಮುಂಬೈ: ಪತಿ ನಿಕ್ ಜೋನಸ್ ಶೂಟಿಂಗ್ ಸೆಟ್ ನಲ್ಲಿ ಕಣ್ಣೀರು ಹಾಕಿರುವ ವಿಚಾರವನ್ನು ಪತ್ನಿ, ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ರಿವೀಲ್ ಮಾಡಿದ್ದಾರೆ.

ಟೊರೆಂಟೋ ಇಂಟರ್ ನ್ಯಾಷನಲ್ ಫಿಲಂಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದ ವೇಳೆ ಪ್ರಿಯಾಂಕ ಚೋಪ್ರಾ ಪತಿ ನಿಕ್ ಎಷ್ಟು ಭಾವುಕರು ಎಂಬ ವಿಷಯವನ್ನು ತಿಳಿಸಿದ್ದಾರೆ. ಮದುವೆಗೆ ಮುನ್ನ ತಮ್ಮ ಸಿನಿಮಾ ಶೂಟಿಂಗ್ ಸೆಟ್ ಗೆ ಆಗಮಿಸಿದ್ದಾಗ ಕಲಾವಿದರು ಭಾವುಕ ದೃಶ್ಯಗಳನ್ನು ಚಿತ್ರೀಕರಿಸುವಾಗ ಪತಿ ಕಣ್ಣೀರು ಹಾಕಿದ್ದರು ಎಂದು ಹೇಳಿದ್ದಾರೆ.

The Sky Is Pink 1

ಮದುವೆಗೆ ನಾಲ್ಕು ದಿನ ಮೊದಲು ನಾನು ‘ದ ಸ್ಕೈ ಇಸ್ ಪಿಂಕ್’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೆ. ಅಂದು ಚಿತ್ರೀಕರಣದ ಕೊನೆಯ ದಿನವಾಗಿತ್ತು. ಚಿತ್ರದ ನಿರ್ದೇಶಕ ಸೋನಾಲಿ ಬೋಸ್ ಕೊನೆಯ ದಿನ ಸಂಭ್ರಮಿಸಲು ನಿಕ್ ಸೇರಿದಂತೆ ಬಹುತೇಕರನ್ನು ಆಗಮಿಸಿದ್ದರು. ಎಲ್ಲರಿಗಿಂತ ಮುಂಚೆ ಬಂದಿದ್ದ ನಿಕ್ ಚಿತ್ರೀಕರಣ ವೀಕ್ಷಿಸಿಸುತ್ತಿದ್ದರು. ಎಮೋಷನಲ್ ಸೀನ್ ನೋಡಿದ ನಿಕ್ ಭಾವುಕರಾಗಿ ಗದ್ಗದಿತರಾಗಿದ್ದರು ಎಂದು ಪ್ರಿಯಾಂಕ ತಿಳಿಸಿದ್ದಾರೆ.

The Sky Is Pink

ದ ಸ್ಕೈ ಇಸ್ ಪಿಂಕ್ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದ್ದು, ಚಿತ್ರ ನೈಜ ಘಟನೆಯಾಧಾರಿತ ಕಥೆಯನ್ನು ಹೊಂದಿದೆ. ಫರಾನ್ ಅಖ್ತರ್ ಮತ್ತು ಝೈರಾ ವಾಸಿಂ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ವಿದಾಯ ಹೇಳಿರುವ ಝೈರಾ ವಾಸೀಂ ಅವರ ಕೊನೆಯ ಚಿತ್ರ ಇದಾಗಿದೆ. ಮದುವೆ ಬಳಿಕ ಬಿಡುಗಡೆ ಆಗುತ್ತಿರುವ ಪ್ರಿಯಾಂಕ ಚೋಪ್ರಾ ನಟನೆಯ ಮೊದಲ ಚಿತ್ರವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *