ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್ (Hollywood) ರಂಗದಲ್ಲಿ ಸೆಟಲ್ ಆಗಿದ್ದಾರೆ. ‘ಸಿಟಾಡೆಲ್’ ಪ್ರಚಾರ ಕಾರ್ಯದಲ್ಲಿ ಬ್ಯುಸಿ ನಡುವೆ ಪತಿ ನಿಕ್ ಜೋನಸ್ ಜೊತೆ ರೊಮ್ಯಾಂಟಿಕ್ ಪ್ರಿಯಾಂಕಾ ಪೋಸ್ ಕೊಟಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಹಾಲಿವುಡ್- ಬಾಲಿವುಡ್‌ನಲ್ಲಿ (Bollywood) ದಿ ಬೆಸ್ಟ್ ಕಪಲ್ ಆಗಿರುವ ನಿಕ್-ಪ್ರಿಯಾಂಕಾ ಒಬ್ಬರ ಕೆಲಸಕ್ಕೆ ಮತ್ತೊಬ್ಬರು ಸಾಥ್ ನೀಡುತ್ತಾ ಬರುತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಮಗಳ ಆರೈಕೆ, ಸಿನಿಮಾಗೆ ಸಂಬಂಧಿಸಿದ ಕೆಲಸಗಳಿಗೆ ಬೆಂಬಲಿಸುತ್ತಿದ್ದಾರೆ.
View this post on Instagram
ಇದೀಗ ನಿಕ್- ಪ್ರಿಯಾಂಕಾ ಲಿಫ್ಟ್‌ನಲ್ಲಿ ರೊಮ್ಯಾನ್ಸ್ ಮಾಡ್ತಿರುವ ಫೋಟೋವನ್ನ ನಿಕ್ ಜೋನಸ್ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಕೆಂಪು ಬಣ್ಣದ ಗೌನ್‌ನಲ್ಲಿ ಮಿಂಚಿದ್ರೆ, ನಿಕ್ ಕಪ್ಪು ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೆಚ್ಚಿನ ಜೋಡಿಯ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅಂದಹಾಗೆ ಈ ಫೋಟೋಶೂಟ್ ‘ಸಿಟಾಡೆಲ್ʼ ಪ್ರೀಮಿಯರ್ ಶೋ ಸಮಯದಲ್ಲಿ ಕ್ಲಿಕ್ಕಿಸಿದ ಫೋಟೋಶೂಟ್ ಇದಾಗಿದೆ. ಇದನ್ನೂ ಓದಿ:ಹೈಕೋರ್ಟ್ ಮೆಟ್ಟಿಲೇರಿದ ಬಿಗ್ ಬಿ ಮೊಮ್ಮಗಳು- ಅಷ್ಟಕ್ಕೂ ಆಗಿದ್ದೇನು?
View this post on Instagram
‘ಸಿಟಾಡೆಲ್’ (Citadel) ಪ್ರೀಮಿಯರ್ ಶೋ ಲಂಡನ್‌ನಲ್ಲಿ ನಡೆದಿದೆ. ಪ್ರಿಯಾಂಕಾ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ವೆಬ್ ಸರಣಿಯಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಏ.28ಕ್ಕೆ ‘ಸಿಟಾಡೆಲ್’ ಒಟಿಟಿಯಲ್ಲಿ ಪ್ರಸಾರವಾಗಲಿದೆ.