Connect with us

Bollywood

ಮೊದಲ ಬಾರಿಗೆ ಪ್ರಿಯಾಂಕಾ ವಯಸ್ಸಿನ ಬಗ್ಗೆ ಪತಿ ನಿಕ್ ಪ್ರತಿಕ್ರಿಯೆ

Published

on

ಮುಂಬೈ: ಇಂಟರ್‌ನ್ಯಾಷನಲ್ ಜೋಡಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಮದುವೆಯಾಗಿ ಒಂದು ವರ್ಷವಾಗಿದೆ. ಈ ಜೋಡಿ ಮದುವೆ ಆಗಲಿದ್ದಾರೆ ಎಂಬ ವಿಷಯ ತಿಳಿದು ಹಲವು ಮಂದಿ ಇಬ್ಬರು ವಯಸ್ಸಿನ ಅಂತರದ ಬಗ್ಗೆ ಮಾತನಾಡಲು ಶುರು ಮಾಡಿದ್ದರು. ಇದೀಗ ಮೊದಲ ಬಾರಿಗೆ ನಿಕ್, ಪ್ರಿಯಾಂಕಾ ವಯಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇಂಗ್ಲಿಷ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಹಾಡಿನ ಕಾರ್ಯಕ್ರಮದಲ್ಲಿ ನಿಕ್ ಜೋನಸ್ ತೀರ್ಪುಗಾರರಾಗಿದ್ದಾರೆ. ಈ ವೇಳೆ ಅವರು ತಮ್ಮ ಹಾಗೂ ತಮ್ಮ ಪತ್ನಿ ಪ್ರಿಯಾಂಕಾ ವಯಸ್ಸಿನ ಅಂತರದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಮತ್ತೊಬ್ಬ ತೀರ್ಪುಗಾರರಾದ ಕೇಲಿ, ನನಗೆ 37 ವರ್ಷ ಹಾಗೂ ನಿಮಗೆ 27 ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ನಿಕ್, ನನ್ನ ಪತ್ನಿಗೂ ಕೂಡ 37 ವರ್ಷ, ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

ಈ ಮೊದಲು ಪ್ರಿಯಾಂಕಾ ಚೋಪ್ರಾ ಕೂಡ ತಮ್ಮ ಹಾಗೂ ನಿಕ್ ಅವರ ವಯಸ್ಸಿನ ಅಂತರದ ಬಗ್ಗೆ ಮಾತನಾಡಿದ್ದರು. ನನಗೆ ಇದರಿಂದ ಯಾವುದೇ ತೊಂದರೆ ಇಲ್ಲ. ಮಾಧ್ಯಮದವರು ಟ್ರೋಲ್‍ಗಳಿಗೆ ಹೆಚ್ಚು ಮಹತ್ವ ನೀಡುತ್ತೆ ಎಂದು ನನಗೆ ಅನಿಸುತ್ತದೆ. ಒಬ್ಬ ಕಲಾವಿದೆಯಾಗಿ ಟ್ರೋಲ್‍ಗಳಿಗೆ ಮಹತ್ವ ನೀಡುವ ಅವಶ್ಯಕತೆ ಇಲ್ಲ. 150 ಜನರ ಅಭಿಪ್ರಾಯದಿಂದ ನಮ್ಮ ಜೀವನ ಬದಲಾಗುವುದಿಲ್ಲ ಎಂದು ಹೇಳಿದ್ದರು.

2018, ಡಿಸೆಂಬರ್ 1 ಮತ್ತು 2ರಂದು ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಇಬ್ಬರೂ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಕ್ರಿಶ್ಚಿಯನ್ ಹಾಗೂ ಹಿಂದೂ ಎರಡೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದರು. ಪ್ರಿಯಾಂಕಾ ಹಾಗೂ ನಿಕ್ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕದಲ್ಲಿ ಮಾಡಿಕೊಂಡಿದ್ದರು.

Click to comment

Leave a Reply

Your email address will not be published. Required fields are marked *