ಕಿಂಗ್‌ಸ್ಟನ್: ವೆಸ್ಟ್ ಇಂಡೀಸ್ ತಂಡದ ದೈತ್ಯ ಬ್ಯಾಟರ್ ಎಂದೇ ಗುರುತಿಸಿಕೊಂಡಿದ್ದ ನಿಕೋಲಸ್ ಪೂರನ್ (Nicholas Pooran) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. 29ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿರುವುದು ಅಚ್ಚರಿ ತರಿಸಿದೆ.
View this post on Instagram
ಇತ್ತೀಚೆಗಷ್ಟೇ ವಿಂಡೀಸ್‌ನ (West Indies) ಕ್ರಿಕೆಟ್ ರಾಜಕೀಯದ ಬಗ್ಗೆ ಕೋಲ್ಕತಾ ನೈಟ್ ರೈಡರ್ಸ್ ಆಟಗಾರ ಆಂಡ್ರೆ ರಸ್ಸೆಲ್ ಪರೋಕ್ಷವಾಗಿ ಬೇಸರ ಹೊರಹಾಕಿದ್ದರು. ಈ ಬೆನ್ನಲ್ಲೇ ನಿಕೋಲಸ್ ಪೂರನ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ‘ಎಣ್ಣೆ’ ಪ್ರಚಾರಕ್ಕಾಗಿ ಆರ್‌ಸಿಬಿ ಖರೀದಿಸಿದೆ: RCB ಬಗ್ಗೆ ವಿಜಯ್ ಮಲ್ಯ ಹೇಳಿದ್ದೇನು?
ಐಪಿಎಲ್‌ನಲ್ಲಿ ಈ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಪ್ರತಿನಿಧಿಸಿದ್ದ ಪೂರನ್ ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್‌ನಲ್ಲಿ ದುಬಾರಿ ಬೆಲೆಯ ಆಟಗಾರನಾಗಿದ್ದಾರೆ. ದುಬೈ ಕ್ರಿಕೆಟ್ ಲೀಗ್‌ನಲ್ಲೂ ಸಕ್ರಿಯವಾಗಿರುವ ಪೂರನ್ ಎಂಐ ಎಮಿರೇಟ್ಸ್ ಆಟಗಾರರಾಗಿದ್ದಾರೆ. ಮಾತ್ರವಲ್ಲದೇ ನಾರ್ಥನ್ ಸೂಪರ್ ಚಾರ್ಜರ್ಸ್, ಟ್ರಿಂಬಾಗೋ ನೈಟ್ ರೈಡರ್ಸ್, ಟ್ರನಿಡಾಡ್ ಆ್ಯಂಡ್ ಟೊಬಾಗೊ ಸೇರಿದಂತೆ ಹತ್ತಾರು ತಂಡಗಳನ್ನ ಪ್ರತಿನಿಧಿಸಿದ್ದಾರೆ. ಸದ್ಯ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗಷ್ಟೇ ನಿವೃತ್ತಿ ನೀಡಿದ್ದು, ಐಪಿಎಲ್ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದನ್ನೂ ಓದಿ: ಅದ್ಧೂರಿ ನಿಶ್ಚಿತಾರ್ಥ – ರಿಂಕುಗೆ ರಿಂಗು ಹಾಕಿದ ಸಂಸದೆ ಪ್ರಿಯಾ ಸರೋಜ್
29 ವರ್ಷದ ನಿಕೋಲಸ್ ಪೂರನ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಪರವಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಅವರು 106 ಪಂದ್ಯಗಳನ್ನ ವಿಂಡೀಸ್ ಪರ ಆಡಿದ್ದಾರೆ. 2,275 ರನ್‌ಗಳೊಂದಿಗೆ ತಂಡಕ್ಕೆ ಅತಿ ಹೆಚ್ಚು ಟಿ20 ರನ್ ಗಳಿಸಿದ ಆಟಗಾರ ಎಂಬ ದಾಖಲೆ ಸಹ ಬರೆದಿದ್ದಾರೆ. ಅವರು 61 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಂದ 39.66 ಸರಾಸರಿಯಲ್ಲಿ 1,983 ರನ್ ಸಹ ಗಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸಿದ ಸಿಎಂ, ಡಿಸಿಎಂ
ಕೊನೆಯದ್ದಾಗಿ ನಿಕೋಲಸ್ ಪೂರನ್ 2024ರ ಟಿ20 ವಿಶ್ವಕಪ್ ವೇಳೆ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ಅದಕ್ಕೂ ಮುನ್ನ ಟೀಂ ಇಂಡಿಯಾ ವಿರುದ್ಧವೇ ನಡೆದಿದ್ದ ಐದು ಪಂದ್ಯಗಳ ಟಿ20 ಸರಣಿಯನ್ನ 3-2 ಅಂತರದಲ್ಲಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. 2025ರ ಐಪಿಎಲ್‌ನಲ್ಲೂ ನಿಕೋಲಸ್ ಪೂರನ್ ಭರ್ಜರಿ ಬ್ಯಾಟಿಂಗ್ ನಡೆಸಿ ಪ್ರೇಕ್ಷಕರಿಗೆ ರಸದೌತಣ ನೀಡಿದ್ದರು.
ನಿವೃತ್ತಿ ಘೋಷಣೆ ಬಳಿಕ ಪೂರನ್ ಹೇಳಿದ್ದೇನು?
ಇನ್ನೂ ತಮ್ಮ ನಿರ್ಧಾರದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಪೂರನ್, ಇದು ಬಹಳ ಕಷ್ಟದ ನಿರ್ಧಾರ. ಆದರೆ ತುಂಬಾ ಆಲೋಚನೆ ಮತ್ತು ಚಿಂತನೆಯ ನಂತರ, ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ನಾವು ಬಹಳ ಪ್ರೀತಿಸುವ ಈ ಆಟವು ನನಗೆ ತುಂಬಾ ಸಂತೋಷ, ಮರೆಯಲಾಗದ ನೆನಪುಗಳನ್ನು ನೀಡಿದೆ. ಆ ಮೆರೂನ್ ಜೆರ್ಸಿಯನ್ನು ಧರಿಸಿ, ರಾಷ್ಟ್ರಗೀತೆಗೆ ನಿಂತು, ನಾನು ಮೈದಾನಕ್ಕೆ ಕಾಲಿಟ್ಟ ಪ್ರತಿ ಬಾರಿಯೂ ನನ್ನೆಲ್ಲವನ್ನೂ ನೀಡಿದ್ದೇನೆ. ನನ್ನ ಪಾಲಿಗೆ ಈ ಕ್ಷಣಗಳೇನು ಎದು ಪದಗಳಲ್ಲಿ ವಿವರಿಸುವುದು ಕಷ್ಟ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.