ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ನಾಸಾ ತೆಗೆದ ಬಾಹ್ಯಾಕಾಶದ ಚಿತ್ರವೊಂದನ್ನು ಅಡುಗೆ ಮನೆಯಲ್ಲಿ ಹಾಕಿರುವ ಗ್ರಾನೈಟ್‌ಗೆ ಹೋಲಿಸಿ ಮೀಮ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ನಾಸಾ ಪ್ರಯತ್ನವನ್ನು ವ್ಯಂಗ್ಯವಾಗಿಸಿದ್ದಾರೆ.
— Elon Musk (@elonmusk) July 15, 2022
Advertisement
ಇತ್ತೀಚೆಗೆ ನಾಸಾ ತನ್ನ ಜೇಮ್ಸ್ ವೆಬ್ ಟೆಲಿಸ್ಕೋಪ್‌ನಿಂದ ತೆಗೆದ ಅತ್ಯಂತ ಹಳೆಯ ಎಂದರೆ, ಪ್ರಪಂಚ ಹುಟ್ಟಿದಾಗಿನ ಸಮಯದಲ್ಲಿ ಆಕಾಶ ಹೇಗೆ ಗೋಚರಿಸುತ್ತಿತ್ತು ಎಂದು ಬಹಿರಂಗಪಡಿಸುವ ಚಿತ್ರಗಳನ್ನು ಅಮೆರಿಕದ ವೈಟ್‌ಹೌಸ್‌ನಲ್ಲಿ ಅನಾವರಣಗೊಳಿಸಿತ್ತು. ಇದೀಗ ಆ ಚಿತ್ರಗಳ ಪೈಕಿ ಒಂದು ಚಿತ್ರ ಕಿಚನ್ ಗೋಡೆಯ ಗ್ರಾನೈಟ್ ಹೋಲುತ್ತದೆ ಎಂದು ಮೀಮ್ ಮೂಲಕ ಹೇಳಿ ಮಸ್ಕ್ ಹಾಸ್ಯವಾಡಿದ್ದಾರೆ. ಇದನ್ನೂ ಓದಿ: ದತ್ತುಪುತ್ರಿಯೊಂದಿಗೆ ರಹಸ್ಯ ಮಗು ಹೊಂದಿದ್ದ 76 ವರ್ಷದ ಎಲಾನ್ ಮಸ್ಕ್ ತಂದೆ
Advertisement
Advertisement
2021ರ ಡಿಸೆಂಬರ್‌ನಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು ಅಂತರಿಕ್ಷಕ್ಕೆ ಕಳುಹಿಸಲಾಗಿತ್ತು. ವಿಶ್ವದ ಸೃಷ್ಟಿಗೆ ಕಾರಣವಾದ ಬಿಗ್‌ಬ್ಯಾಂಗ್(ಮಹಾಸ್ಫೋಟ) ಸಂಭವಿಸಿದ 800 ವರ್ಷಗಳ ಬಳಿಕದ ಚಿತ್ರಣಗಳನ್ನು ಈ ಟೆಲಿಸ್ಕೋಪ್ ಸೆರೆ ಹಿಡಿದಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಇದನ್ನೂ ಓದಿ: Zಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೋ ಮಾಡುವಂತಿಲ್ಲ