– ಬೆಂಗಳೂರಲ್ಲಿ ಶಂಕಿತನ ಮನೆ ಪರಿಶೀಲಿಸಿದ ಎನ್‌ಐಎ
ಬೆಂಗಳೂರು: ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಶಂಕೆ ಮೇಲೆ ಎನ್‌ಐಎ (NIA) ಅಧಿಕಾರಿಗಳು ಬೆಂಗಳೂರು ಸೇರಿದಂತೆ ದೇಶದ 44 ಕಡೆ ಶನಿವಾರ ದಾಳಿ ನಡೆಸಿದರು. ಈ ವೇಳೆ ಶಂಕಿತ 15 ಮಂದಿಯನ್ನು ಬಂಧಿಸಿದ್ದಾರೆ.
Advertisement
ಬೆಳ್ಳಂಬೆಳಗ್ಗೆ ಎನ್‌ಐಎ ಅಧಿಕಾರಿಗಳು ಬೆಂಗಳೂರು (Bengaluru), ಕರ್ನಾಟಕ, ಪುಣೆ, ಮಹಾರಾಷ್ಟ್ರ ಸೇರಿದಂತೆ ದೇಶದ್ಯಂತ ಒಟ್ಟು 44 ಕಡೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಐಸಿಸ್ ಉಗ್ರರೊಂದಿಗೆ ನಂಟು ಹೊಂದಿದ್ದರ ಶಂಕೆಯ ಜಾಡು ಹಿಡಿದಿದ್ದ ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರುವ ಶಂಕಿತನ ಮನೆ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದಾರೆ. ಮುಂಜಾನೆ ನಾಲ್ಕು ಗಂಟೆಗೆ ಶಂಕಿತನ ಮನೆಗೆ ಭೇಟಿ ಕೊಟ್ಟಿದ್ದ ಎನ್‌ಐಎ ಅಧಿಕಾರಿಗಳ ತಂಡ ಸತತವಾಗಿ 9 ಗಂಟೆಗಳ ಕಾಲ ನಿರಂತರವಾಗಿ ಶೋಧ ಕಾರ್ಯ ನಡೆಸಿದ್ದರು. ಆತನಿಗೆ ಸೇರಿದ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಐಸಿಸ್ ಉಗ್ರರೊಂದಿಗೆ ನಂಟು; ಬೆಂಗಳೂರು ಸೇರಿ ದೇಶದ ಹಲವೆಡೆ NIA ದಾಳಿ
Advertisement
Advertisement
ಮುಂಬೈ ಮೂಲದ ಶಂಕಿತ ವ್ಯಕ್ತಿ ಮೂಲತಃ ವೃತ್ತಿಯಲ್ಲಿ ಟೆಕ್ಕಿ. ಈತ ಮುಂಬೈನಿಂದ ಕಳೆದ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಟ್ಯಾನರಿ ರಸ್ತೆಯಲ್ಲಿ ಪ್ಲಾಟ್ ಖರೀದಿಸಿ ಪತ್ನಿ, ಮಕ್ಕಳೊಂದಿಗೆ ವಾಸವಿದ್ದ. ಎನ್‌ಐಎ ಅಧಿಕಾರಿಗಳು ಜುಲೈನಲ್ಲಿ ಪುಣೆಯಲ್ಲಿ ಇಬ್ಬರು ಶಂಕಿತ ಉಗ್ರರನ್ನ ಬಂಧನ ಮಾಡಿದ್ದರು. ಅಮೀರ್ ಅಬ್ದುಲ್, ಮೊಹಮ್ಮದ್ ಎಂಬವರನ್ನ ಬಂಧನ ಮಾಡಿ ತನಿಖೆ ಮಾಡಿದಾಗ ಬೆಂಗಳೂರಿನಲ್ಲಿ ಈತನು ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬಂಧವಾಗಿರೋ ಶಂಕಿತರ ಜೊತೆ ಸಂಪರ್ಕದಲ್ಲಿರೋ ಬಗ್ಗೆ ಮಾಹಿತಿ ತಿಳಿದು ಬಂತು. ಹೀಗಾಗಿ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ.
Advertisement
ಶಂಕಿತರ ವ್ಯಕ್ತಿ ಕಳೆದ ಐದು ವರ್ಷದಿಂದ ಟ್ಯಾನರಿ ರಸ್ತೆಯ ಅಪಾರ್ಟ್ಮೆಂಟ್‌ನಲ್ಲಿ ವಾಶವಾಗಿದ್ದ. ಅಕ್ಕಪಕ್ಕದವರ ಜೊತೆ ಅಷ್ಟು ಅನ್ಯೂನ್ಯತೆಯಿಂದ ಇರುತ್ತಿರಲಿಲ್ಲ. ನಿತ್ಯ ಸಂಜೆ ಸಮಯಕ್ಕೆ ಮಗಳಿಗೆ ವಾಕ್ ಮಾಡಿಸುವಾಗ ಹಾಯ್ ಬಾಯ್ ಬಿಟ್ಟರೆ ಬೇರೆ ಮಾತನಾಡುತ್ತಿರಲಿಲ್ಲ. ಪತ್ನಿ ನ್ಯೂಟ್ರಿ ಕೇರ್ ನಡೆಸುತ್ತಿದ್ದರಿಂದ ನ್ಯೂಟ್ರಿ ಕೇರ್ ಸೆಂಟರ್‌ಗೆ ಜನರು ಬಂದು ಹೋಗುತ್ತಿದ್ದರು. ಉಳಿದಂತೆ ಸೌಮ್ಯ ಸ್ವಭಾವದವರ ರೀತಿಯಲ್ಲಿ ಈತ ನಡೆದುಕೊಳ್ಳುತ್ತಿದ್ದ ಎಂದು ಶಂಕಿತ ವ್ಯಕ್ತಿಯ ನಡವಳಿಕೆಯ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ. ಇದನ್ನೂ ಓದಿ: ಐಟಿ ದಾಳಿಯಲ್ಲಿ 290 ಕೋಟಿ ರೂ. ಜಪ್ತಿ – ಎಣಿಸಿದಷ್ಟು ಹೆಚ್ಚುತ್ತಲೇ ಇದೆ ಹಣ
ಸದ್ಯ ಶಂಕಿತನ ಬಗ್ಗೆ ಎನ್‌ಐಎ ಅಧಿಕಾರಿಗಳಿಗೆ ಇರುವ ಮಾಹಿತಿ ಆಧಾರದ ಮೇಲೆ ತನಿಖೆ ಮಾಡಿ ಮೊಬೈಲ್ ವಶಕ್ಕೆ ಪಡೆದು ಹೋಗಿದ್ದು ತನಿಖೆ ಮುಂದುವರೆಸಿದ್ದಾರೆ. ತನಿಖೆ ಮುಗಿಯುವ ತನಕ ಯಾವುದೇ ಕಾರಣಕ್ಕೂ ವಿದೇಶಗಳಿಗೆ ಹೋಗದಂತೆ ಎಚ್ಚರಿಸಿ ತನಿಖೆಗೆ ಹಾಜರಾಗಲು ನೋಟಿಸ್ ಕೊಟ್ಟು ಹೋಗಿದ್ದಾರೆ.
ಮಹಾರಾಷ್ಟ್ರದ ಬೊರಿವಿಲಿ, ಪಡ್ಗಾ, ಮೀರಾ ರಸ್ತೆ, ಪುಣೆ ಹಾಗೂ ಕರ್ನಾಟಕದ ಬೆಂಗಳೂರಿನಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಅಪಾರ ಪ್ರಮಾಣದ, ಲೆಕ್ಕವಿಲ್ಲದ ಹಣ ಪತ್ತೆಯಾಗಿದೆ. ಭಯೋತ್ಪಾದನೆಗೆ ಪ್ರಚೋದನೆ, ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರ ಬಂಧಿಸಲಾಗಿದೆ. ದಾಳಿ ವೇಳೆ ಶಸ್ತ್ರಾಸ್ತ್ರಗಳು, ಮಾರಕಾಸ್ತ್ರಗಳು ಪತ್ತೆಯಾಗಿವೆ. ಸ್ಮಾರ್ಟ್ ಫೋನ್‌ಗಳು, ಡಿಜಿಟಲ್ ಡಿವೈಸಸ್ ಸೀಜ್ ಮಾಡಲಾಗಿದೆ. ಶಂಕಿತರು, ವಿದೇಶಿ ಹ್ಯಾಂಡ್ಲರ್‌ಗಳ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಐಇಡಿ ತಯಾರಿ, ಶಾಂತಿ ಕದಡುವ ಕೆಲಸದಲ್ಲಿ ಭಾಗಿಯಾಗಿದ್ದರು ಎಂಬ ಆರೋಪವಿದೆ.