ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದ (Rameshwaram Cafe Bomb Blast) ಆರೋಪಿಗಳ ಫೋಟೋವನ್ನು ರಾಷ್ಟ್ರೀಯ ತನಿಖಾ ದಳ (NIA)ಬಿಡುಗಡೆ ಮಾಡಿ ಮಾಹಿತಿ ನೀಡಿದ ವ್ಯಕ್ತಿಗಳಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಪ್ರಕಟಿಸಿದೆ.
Request for Information, Identity of the Informer will be kept Secret. pic.twitter.com/PBXPRH3DtB
— NIA India (@NIA_India) March 29, 2024
Advertisement
ಬಾಂಬ್ ಇರಿಸಿದ ವ್ಯಕ್ತಿ ಸ್ಫೋಟ ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಹುಸೇನ್ ಶಜೀಬ್ (Mussavir Hussain Shazib) ಮೂರು ಫೋಟೋ ಬಿಡುಗಡೆ ಮಾಡಿದೆ. 30 ವರ್ಷ ವಯಸ್ಸಿನ ಈತ ಜಿಮ್ ಬಾಡಿ ಹೊಂದಿದ್ದು ಅಂದಾಜು 6.2 ಅಡಿ ಹೊಂದಿದ್ದಾನೆ. ಮೊಹಮ್ಮದ್ ಜುನೈದ್ ಸಯ್ಯದ್ ಹೆಸರಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾನೆ ಎಂದು ತಿಳಿಸಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ದಾಳಿಯ ಸಂಚುಕೋರ ಅರೆಸ್ಟ್
Advertisement
Request for Information, Identity of the Informer will be kept Secret. pic.twitter.com/JkMUWay23m
— NIA India (@NIA_India) March 29, 2024
Advertisement
ಮತ್ತೊಬ್ಬ ಸಂಚುಕೋರ ಅಬ್ದುಲ್ ಮತೀನ್ ಅಹ್ಮದ್ (Abdul Matheen Ahmed) 5.5 ಅಡಿ ಹೊಂದಿದ್ದು ಮುಂದುಗಡೆ ತಲೆ ಬೋಳಾಗಿದ್ದು, ಹೆಚ್ಚಾಗಿ ಕ್ಯಾಪ್ ಧರಿಸುತ್ತಾನೆ. 30 ವರ್ಷದ ಈತ ವಿಘ್ನೇಶ್, ಸುಮಿತ್ ಅಥವಾ ಬೇರೆ ಹಿಂದೂ ವ್ಯಕ್ತಿಯ ಹೆಸರಿನಲ್ಲಿ ನಕಲಿ ಐಡಿ ದಾಖಲೆಯನ್ನು ಹೊಂದಿದ್ದಾನೆ.
Advertisement
ಇವರಿಬ್ಬರು ಪುರುಷರ/ ಹುಡುಗರ ಹಾಸ್ಟೆಲ್, ಪಿಜಿಯಲ್ಲಿ ನೆಲೆಸುತ್ತಾರೆ. ಕಡಿಮೆ ಬಜೆಟ್ ಹೋಟೆಲ್, ಲಾಡ್ಜ್‌ನಲ್ಲಿ ತಂಗುತ್ತಾರೆ ಎಂದು ತಿಳಿಸಿದೆ. ಇವರಿಬ್ಬರ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಗಳ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದೆ.