ಶ್ರೀನಗರ: ಭಯೋತ್ಪಾದನಾ ಚಟುವಟಿಕೆಗಳಿಗೆ ನಿಧಿ (Terror Funding) ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ತಂಡ ಮಂಗಳವಾರ ಬೆಳ್ಳಂಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir)ದಾಳಿ ನಡೆಸಿದೆ.
ಬೆಳಗ್ಗೆಯೇ ಕಾರ್ಯಾಚರಣೆ ಶುರು ಮಾಡಿರುವ ಎನ್‌ಐಎ (NIA) ಪೂಂಚ್, ರಜೌರಿ, ಪುಲ್ವಾಮಾ, ಶೋಪಿಯಾನ್, ಶ್ರೀನಗರ, ಬುದ್ಗಾಮ್ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಪೊಲೀಸರು (Police) ಮತ್ತು ಅರೆಸೈನಿಕ ಸಿಬ್ಬಂದಿಯ ನೆರವಿನೊಂದಿಗೆ ದಾಳಿ ನಡೆಸಿದೆ. ಇದನ್ನೂ ಓದಿ: 856 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಉಜ್ಜಯಿನಿ ದೇಗುಲ ಇಂದು ಲೋಕಾರ್ಪಣೆ
Jammu & Kashmir | National Investigation Agency searches underway in Mendhar, Poonch district and Shopian, in connection with a terror funding case
(Pics 1&2-Poonch, Pic 3-Shopian) pic.twitter.com/6VVwTgCvze
— ANI (@ANI) October 11, 2022
ಇದೇ ವೇಳೆ ಧಾರ್ಮಿಕ ಮುಖಂಡರಾದ (Religious Leader) ದಾರುಲ್ ಉಲೂಮ್ ರಹೀಮಿಯಾ ಬಂಡಿಪೋರಾ, ಮೌಲಾನಾ ರೆಹಮತ್ ಉಲ್ಲಾ ಖಾಸ್ಮಿ ಹಾಗೂ ಎನ್‌ಐಟಿ ಶ್ರೀನಗರದ ಪ್ರೊಫೆಸರ್ (Professor) ಸಮಮ್ ಅಹ್ಮದ್ ಲೋನ್ ಅವರ ಮನೆಗಳ ಮೇಲೆ ನಡೆಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ
ಇತ್ತೀಚೆಗೆ ದೇಶದ 15 ರಾಜ್ಯಗಳಲ್ಲಿ 93 ಕಡೆ ದಾಳಿ ನಡೆಸಿ ನೂರಾರು ಪಿಎಫ್‌ಐ ಕಾರ್ಯಕರ್ತರು, ಮುಖ್ಯಸ್ಥರನ್ನು ಬಂಧಿಸಿದ್ದ ಎನ್‌ಐಎ ತಂಡ ಇದೀಗ ಮತ್ತೆ ತನ್ನ ಅಬ್ಬರ ಶುರು ಮಾಡಿದೆ.