ಶ್ರೀನಗರ: ಕಳೆದ ಮೂರು ವಾರಗಳ ಹಿಂದೆಯಷ್ಟೇ ರಿಯಾಸಿ ಭಯೋತ್ಪಾದಕ ದಾಳಿಗೆ (Reasi Terror Attack) ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಭಾನುವಾರ (ಇಂದು) ಜಮ್ಮು ಮತ್ತು ಕಾಶ್ಮೀರದ ರಜೌರಿ (Rajouri) ಜಿಲ್ಲೆಯ ಅನೇಕ ಕಡೆದ ದಾಳಿ ನಡೆಸಿದೆ.
ಇದೇ ತಿಂಗಳ ಜೂನ್ 9ರಂದು ರಿಯಾಸಿ ಜಿಲ್ಲೆಯ ಪೌನಿ ಪ್ರದೇಶದಲ್ಲಿ ಭಯೋತ್ಪಾದಕರು ಶಿವ ಖೋರಿ ಗುಹಾಂತರ ದೇವಾಲಯಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ಬಸ್ ಕಮರಿಗೆ ಬಿದ್ದು, 10 ಮಂದಿ ಸಾವನ್ನಪ್ಪಿದ್ದರು 33 ಮಂದಿ ಗಾಯಗೊಂಡಿದ್ದರು. ಆದ್ರೆ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಎನ್‌ಐಎ ಜೂನ್ 15ರಂದು ಪ್ರಕರಣ ಕೈಗೆತ್ತಿಕೊಂಡಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ ಭಾನುವಾರ ಹಲವೆಡೆ ದಾಳಿ ನಡೆಸಿದೆ.
ರಿಯಾಸಿ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಜೂನ್ 19 ರಂದು ಬಂಧಿಸಲಾದ ಶಂಕಿತ ಉಗ್ರ ಹಕಮ್ ಖಾನ್ ಅಕಾ ಹಕಿನ್ ದಿನ್ ನೀಡಿದ ಸುಳಿವು ಆಧರಿಸಿ ರಾಜೌರಿಯಲ್ಲಿ ದಾಳಿ ನಡೆಸಲಾಗಿದೆ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಿಯಾಸಿ ಬಸ್ ಮೇಲೆ ದಾಳಿ – ಉಗ್ರರಿಗೆ ಸಹಕಾರ ನೀಡಿದ್ದ ಓರ್ವ ವ್ಯಕ್ತಿ ಅರೆಸ್ಟ್
ಪ್ರಾಥಮಿಕ ಮಾಹಿತಿ ಪ್ರಕಾರ ಬಂಧಿತನು ಭಯೋತ್ಪಾದಕರಿಗೆ ವ್ಯವಸ್ಥಿತವಾಗಿ ಬೆಂಬಲ ನೀಡುತ್ತಿದ್ದ ಜೊತೆಗೆ ಅವರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದ. ಉಗ್ರರ ದಾಳಿಗೆ ನೆರವಾಗುವ ಸ್ಥಳಗಳ ಬಗ್ಗೆಯೂ ಮಾಹಿತಿ ನೀಡಿದ್ದ, ಅನ್ನೋದು ತಿಳಿದುಬಂದಿದೆ ಎಂದು ರಿಯಾಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಮೋಹಿತಾ ಶರ್ಮಾ ಹೇಳಿದ್ದಾರೆ.
ಅಲ್ಲದೇ ವಿಚಾರಣೆ ವೇಳೆ ತನ್ನ ಮನೆಯಲ್ಲಿ ಮೂವರು ಉಗ್ರರು ತಂಗಿದ್ದರು. ಅದಕ್ಕಾಗಿ ತನಗೆ 6,000 ರೂ. ನೀಡಿದ್ದರು ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ವಿಶ್ವಕಪ್ ಜೊತೆಗೆ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದೀರಿ: ಟೀಂ ಇಂಡಿಯಾಕ್ಕೆ ಮೋದಿ ಅಭಿನಂದನೆ