ನವದೆಹಲಿ: ಭಾರತ (India) ಮತ್ತು ವಿದೇಶಗಳಲ್ಲಿ ನೆಲೆಸಿರುವ ಭಯೋತ್ಪಾದಕರು (Terrorists), ಗ್ಯಾಂಗ್‌ಸ್ಟರ್‌ಗಳು (Gangsters), ಮಾದಕವಸ್ತು ಕಳ್ಳಸಾಗಣೆದಾರರ (Smugglers) ಸಂಪರ್ಕವನ್ನು ಕೆಡವಲು ರಾಷ್ಟ್ರೀಯ ತನಿಖಾ ದಳ (NIA) ಮಂಗಳವಾರ ಪಂಜಾಬ್, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿ-ಎನ್‌ಸಿಆರ್ ಪ್ರದೇಶಗಳಲ್ಲಿ ದಾಳಿ ನಡೆಸಿದೆ.
ಇಂದು ಬೆಳಗ್ಗೆ ಎನ್‌ಐಎ ಉತ್ತರ ಭಾರತದ ಹಲವು ಭಾಗಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಸದ್ಯ ಇಲ್ಲಿಯವರೆಗೆ ಯಾವುದೇ ಬಂಧನ ವರದಿಯಾಗಿಲ್ಲ. ಇದನ್ನೂ ಓದಿ: ತಾಯಿ ಸನ್‍ಸ್ಕ್ರೀನ್ ಕಳಿಸಿದ್ರು, ನಾನು ಬಳಸಲ್ಲ: ರಾಹುಲ್ ಗಾಂಧಿ
Advertisement
Advertisement
ಈ ಹಿಂದೆ ಅಕ್ಟೋಬರ್ 14 ರಂದು, ಡ್ರೋನ್ ಡೆಲಿವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆ ಸೇರಿದಂತೆ ಹಲವು ಸ್ಥಳಗಳಲ್ಲಿ ಎನ್‌ಐಎ ಶೋಧ ನಡೆಸಿತ್ತು.
Advertisement
ಕಳೆದ 9 ತಿಂಗಳುಗಳಲ್ಲಿ, ನೆರೆಯ ಪಾಕಿಸ್ತಾನದಿಂದ 191 ಡ್ರೋನ್‌ಗಳು ಭಾರತದ ಭೂಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದನ್ನು ಭದ್ರತಾ ಪಡೆಗಳು ಗಮನಿಸಿವೆ. ಸೋಮವಾರ ಮುಂಜಾನೆಯೂ ಭಾರತ – ಪಾಕಿಸ್ತಾನ ಗಡಿಯಲ್ಲಿ ಪಂಜಾಬ್ ಅಮೃತಸರ ಸೆಕ್ಟರ್‌ನಲ್ಲಿ ಭಾರತವನ್ನು ಪ್ರವೇಶಿಸಲು ಯತ್ನಿಸುತ್ತಿದ್ದ ಸುಮಾರು 12 ಕೆಜಿ ಸರಕನ್ನು ಒಯ್ಯುತ್ತಿದ್ದ ಡ್ರೋನ್ ಅನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ. ಇದನ್ನೂ ಓದಿ: ನನಗೆ AAP ತೊರೆಯುವಂತೆ ಒತ್ತಡ ಹೇರಿದ್ದಾರೆ – ಸಿಸೋಡಿಯಾ ಆರೋಪ, CBI ಪ್ರತಿಕ್ರಿಯೆ