ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಉಗ್ರರ ಕರಿನೆರಳು ಬಿದ್ದಿದ್ದಿಯಾ ಎಂಬ ಪ್ರಶ್ನೆ ಮೂಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ತನಿಖೆ ವೇಳೆ ಉಗ್ರರ ಮತ್ತೊಂದು ಟೀಂ ಬಗ್ಗೆ ಬೆಳಕಿಗೆ ಬಂದಿದೆ.
ನಗರದ ಸೋಲದೇವನಹಳ್ಳಿಯಲ್ಲಿ ಉಗ್ರರು ಅಡಗಿದ್ದರು. ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ ಆಯಿತು. ಇದೀಗ ಮತ್ತೊಂದು ಬಾಂಗ್ಲಾ ಉಗ್ರ ಸಂಘಟನೆ ನಗರಕ್ಕೆ ಎಂಟ್ರಿ ಕೊಟ್ಟಿದೆ. ನಿಷೇಧಿತ ಬಾಂಗ್ಲಾ ಮೂಲದ ಅನ್ಸರುಲ್ಲಾ ಬಾಂಗ್ಲಾ ಟೀಂ ನಗರದಲ್ಲಿ ಆಶ್ರಯ ಪಡೆದಿದ್ದಾರೆ.
Advertisement
Advertisement
ಉಗ್ರರು ಸೋಲದೇವನಹಳ್ಳಿಯ ಪಿಜಿಯಲ್ಲಿ ವಾಸವಿದ್ದರು. ಕೋಲ್ಕತ್ತಾ ಎನ್‍ಐಎ ಅಧಿಕಾರಿಗಳು ಉಗ್ರ ಫರ್ಹಾನ್‍ನನ್ನು ಮೇಘಾಲಯದಲ್ಲಿ ಬಂಧಿಸಿದ್ದರು. ವಿಚಾರಣೆ ವೇಳೆ ಆತ ಬೆಂಗಳೂರಿನಲ್ಲಿ ವಾಸವಿದ್ದ ಎಂದು ಹೇಳಿದ್ದನು. ಹಾಗಾಗಿ ಎನ್‍ಐಎ ಆರೋಪಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು.
Advertisement
ಫರ್ಹಾನ್ ಪಿಜಿ ಒಂದರಲ್ಲಿ ವಿದ್ಯಾರ್ಥಿಯ ಸೋಗಿನಲ್ಲಿ ವಾಸವಿದ್ದನು. ಈ ವೇಳೆ ಆತನ ಜೊತೆಗೆ ಮತ್ತೊಬ್ಬ ಉಗ್ರ ಸಹ ವಾಸ ಮಾಡುತ್ತಿದ್ದನು. ಫರ್ಹಾನ್ ಬಂಧನದ ಬೆನ್ನಲ್ಲೇ ಮತ್ತೊಬ್ಬ ಉಗ್ರ ನಾಪತ್ತೆ ಆಗಿದ್ದಾನೆ. ಸದ್ಯ ಎನ್‍ಐಎ ಸೋಲದೇವನಹಳ್ಳಿಯ ಪಿಜಿಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೆ ಅಡಗುತಾಣಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.