ಬೆಂಗಳೂರು: ತಿಲಕ್ ನಗರದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(NIA) ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಅಖ್ತರ್ ಹುಸೇನ್, ಅಬ್ದುಲ್ ಅಲಿಮ್ ಮಂಡಲ್ ವಿರುದ್ದ ಎನ್‍ಐಎ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ತಿಲಕ್ ನಗರದಲ್ಲಿ ಡೆಲಿವರಿ ಬಾಯ್ ಆಗಿದ್ದುಕೊಂಡು ಭಯೋತ್ಪಾದನೆ ಸಂಘಟನೆ ಜತೆ ಸಂರ್ಪಕದಲ್ಲಿದ್ದ ಇವರು ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಚಟುವಟಿಕೆಗೆ ಸ್ಥಳೀಯ ಯುವಕರನ್ನು ಪ್ರೇರೇಪಣೆ ಮಾಡುತ್ತಿದ್ದರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
Advertisement
Advertisement
ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಅಲ್-ಖೈದಾದೊಂದಿಗೆ ಸಂಬಂಧ ಹೊಂದಿದ್ದರು. ಭಾರತದಲ್ಲಿ ಕೋಮುಗಲಭೆಯನ್ನು ಪ್ರಚೋದಿಸಲು ಆರೋಪಿಗಳು ಯುವಕರನ್ನು ಮತ್ತಷ್ಟು ಪ್ರಚೋದಿಸಿದ್ದರು. ಆರೋಪಿಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಕಮ್ಯುನಿಕೇಷನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಿದೇಶದಲ್ಲಿರುವ ಆನ್‌ಲೈನ್ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಎನ್‌ಐಎ ಹೇಳಿದೆ. ಇದನ್ನೂ ಓದಿ: BREAKING:ರಮ್ಯಾ ನಿರ್ಮಾಣದ `ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ಕಾನೂನು ಸಂಕಷ್ಟ
Advertisement
ದಾಳಿ ವೇಳೆ ಜಿಹಾದಿ ದಾಖಲೆ ಪತ್ರಗಳು, ಎಲೆಕ್ಟ್ರಾನಿಕ್ ಡಿವೈಸ್‍ಗಳು ಪತ್ತೆಯಾಗಿದ್ದು ಆಲ್ ಖೈದಾ ಸಂಘಟನೆಗೆ ಸೇರಲು ಉಗ್ರರಿಗೆ ಟ್ರೈನಿಂಗ್ ನೀಡಿ ಭಾರತದಲ್ಲಿ ಶಾಂತಿ ಕದಡಲು ಇವರು ಸಂಚು ರೂಪಿಸಿದ್ದರು ಎಂದು ಉಲ್ಲೇಖಿಸಿದೆ.
Advertisement
ಡೆಲಿವರಿ ಬಾಯ್‍ಗಳಂತೆ ತಿಲಕ್‍ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರ ಬಗ್ಗೆ ಗುಪ್ತಚರ ಇಲಾಖೆ ನೀಡಿದ್ದ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿತ್ತು. ಕಳೆದ ವರ್ಷ ಜುಲೈ 24 ರಂದು ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನಂತರ ನಂತರ ಆಗಸ್ಟ್ 30 ರಂದು ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k